ಬ್ರೇಕಿಂಗ್ ನ್ಯೂಸ್
08-03-26 09:31 pm Harshakumar Kugwe, Senior Journalist ಅಂಕಣಗಳು
ಈ ಒಂದು ಫೋಟೋವೊಂದು ನೆನ್ನೆ ವೈರಲ್ ಆಗಿದೆ. ಇಲ್ಲಿ ಸಿಎಂ ಅಕ್ಕಪಕ್ಕದಲ್ಲಿರುವ ಪತ್ರಕರ್ತರು ಬಲಪಂಥೀಯರಾಗಿದ್ದು ಸಿಎಂ ಇವರಿಗೆ ದುಬಾರಿ ಎಣ್ಣೆ ಕುಡಿಸಿದ್ದಾರೆ ಎಂದು ಬಹಳ ಜನರು ಆರೋಪ ಮಾಡಿದ್ದಾರೆ. ಇದರ ಜೊತೆಗೆ ಕೆಲ ಪತ್ರಕರ್ತ ಮಿತ್ರರು ಸಿಎಂ ಕಚೇರಿಯಲ್ಲಿ ಅಧಿಕಾರಿಗಳು ಆರೆಸ್ಸೆಸ್ ಜೊತೆ ಶಾಮೀಲಾಗಿದ್ದಾರೆ ಎಂಬ ಪೋಸ್ಟುಗಳನ್ನೂ ಬರೆದುಕೊಂಡಿದ್ದಾರೆ.
ಈ ವಿಷಯಗಳ ಕುರಿತು ಸಿಎಂ ಕಚೇರಿ ಅಥವಾ ಸಿಎಂ ಅವರ ಮಾಧ್ಯಮ ಸಲಹೆಗಾರರ ಕಚೇರಿ ಕಡೆಯಿಂದ ಯಾವ ಸ್ಪಷ್ಟನೆ ನೀಡಬಹುದೇನೋ ಗೊತ್ತಿಲ್ಲ. ಆದರೆ, ಇದೊಂದು ಗಂಭೀರ ವಿಷಯ ಅನಿಸಿದ್ದರಿಂದ ನನಗೆ ತಿಳಿದ ಒಂದೆರಡು ಸಂಗತಿಗಳನ್ನು ಹಂಚಿಕೊಳ್ಳಬಹುದೇನೋ ಅನಿಸಿ ಬರೆಯುತ್ತಿದ್ದೇನೆ.
ಪ್ರತಿ ಬಜೆಟ್ ಭಾಷಣದ ಹಿಂದಿನ ಸಂಜೆ ಸಿಎಂ ಕಚೇರಿ ಕಡೆಯಿಂದ ಪತ್ರಕರ್ತರಿಗೆ ಒಂದು ಔತಣಕೂಟ ಆಯೋಜನೆಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದು ಯಾವ ಸಿಎಂ ಕಾಲದಿಂದ ಶುರುವಾಯಿತೋ ಗೊತ್ತಿಲ್ಲ. ಆದರೆ ಇದೊಂದು ರಿಚುಅಲ್ ಅಂತೂ ಆಗಿಬಿಟ್ಟಿದೆ. ಅದರಲ್ಲಿ ಬಹಳ ಜನ ಹಿರಿಯ ಕಿರಿಯ ಪತ್ರಕರ್ತರು ಸೇರುತ್ತಾರೆ. ಒಳ್ಳೆಯ ಊಟ ಮತ್ತು ಪಾನೀಯ ಇರುತ್ತದೆ ಎಂದು. ಈ ಔತಣ ಕೂಟಕ್ಕೆ ಬಹಳ ಸೀನಿಯರ್ ಪತ್ರಕರ್ತರು ಭಾಗವಹಿಸುತ್ತಾರೆ. ಇದಕ್ಕೆ ಕಾರಣ ಅದರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸ್ವಲ್ಪ ಹೊತ್ತು ಬಂದು ಕುಳಿತು ಪತ್ರಕರ್ತರೊಂದಿಗೆ ಕುಶಲೋಪರಿ ವಿಚಾರಿಸುತ್ತಾರೆ. ಫೋಟೋಗಳಿಗೆ ಪೋಸ್ ಕೊಡುತ್ತಾರೆ ಎಂದು. ಈ ಔತಣ ಕೂಟಕ್ಕೆ ನಾನು ಕಳೆದ ವರ್ಷ ಹೋಗಿದ್ದೆ. ಇದಕ್ಕೂ ಹಿಂದೆ 2016ರಲ್ಲಿ ಒಮ್ಮೆ ಹೋಗಿದ್ದೆ. ಅದು ಮೊದಲ ಸಲ. ನಂಗೇನೂ ಎಣ್ಣೆಹೊಡೆಯುವ ಅಭ್ಯಾಸವಿಲ್ಲವಾದ್ದರಿಂದ ಆ ಔತಣಕೂಟದ ಬಗ್ಗೆ ಅಂತಾ ವಿಶೇಷ ಆಸಕ್ತಿ ಎಂದೂ ಬರಲಿಲ್ಲ. ಈ ಸಲವಂತೂ ಅ ಕಡೆ ಹೋಗಲೇ ಇಲ್ಲ. ಆದರೆ, ಈ ಔತಣ ಕೂಟ ಹೇಗಿರತ್ತೆ ಯಾರೆಲ್ಲಾ ಬರ್ತಾರೆ ಎಂಬುದಂತೂ ತಿಳಿದಿದೆ.

ಕಳೆದ ವರ್ಷ ನನಗೆ ಶಾಕ್ ಆಗಿದ್ದು ಏನೆಂದರೆ ಸಿಎಂ ಸಿದ್ದರಾಮಯ್ಯ ಅಲ್ಲಿ ಬಂದು ಕುಳಿತ ಕೂಡಲೇ ಕೆಲವು ಪತ್ರಕರ್ತರು ಬಂದು ಲಗುಬಗೆಯಿಂದ ಅವರ ಅಕ್ಕಪಕ್ಕ ಕುಳಿತುಕೊಂಡರು. ಮತ್ತೆ ಕುಳಿತೇ ಇದ್ದರು. ಸಿಎಂ ಹೋಗುವವರೆಗೂ ಎದ್ದೇಳಲೇ ಇಲ್ಲ. ಅವರಲ್ಲಿ ಕೆಲ ಹಿರಿಯ ಇಂಗ್ಲಿಷ್ ಪತ್ರಕರ್ತರಂತೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ದಿನವೂ ದ್ವೇಷಪೂರಿತವಾಗಿ ಬರೆಯುವಂತವರು.
ಹಾಗಿದ್ದರೆ, ಅಲ್ಲಿ ಸಿಎಂ ಬಂದ ಕೂಡಲೇ ಇವರನ್ನೇ ಕರೆದುಕೊಂಡು ಕೂರಿಸುತ್ತಾರಾ ಎಂದು ನೋಡಿದರೆ ಹಾಗೇನೂ ಆಗುವುದಿಲ್ಲ. ಇವರೆಲ್ಲಾ ಚೆಡ್ಡಿಗಳು ಎಂದು ಸಿದ್ದರಾಮಯ್ಯ ಅವರಿಗೂ ಗೊತ್ತಿರಲೂ ಬಹುದು. ಆದರೆ ಅವರು ಮುಖ್ಯಮಂತ್ರಿ, ಏ ಎದ್ದು ಹೋಗ್ರಯ್ಯಾ, ನನ್ನ ಬೆಂಬಲಿಗರು ಮಾತ್ರ ಕೂತ್ಕೊಳ್ರಯ್ಯಾ.. ಎಂದು ಹೇಳಲು ಸಾಧ್ಯವೆ? ಅಕಸ್ಮಾತ್ ಅವರು ಮೊದಲೇ ಮೀಡಿಯಾ ಅಡ್ವೈಸರ್ ಗೆ ಹೇಳಿ, ಅಲ್ಲಿ ನನ್ನ ಪಕ್ಕದಲ್ಲಿ ನಮ್ಮ ಸರ್ಕಾರದ ಪರ ಇರುವವರನ್ನೇ ಕೂರಿಸಬೇಕು ಎಂದು ಹೇಳಿದರೆ, ಅಂತ ಏರ್ಪಾಡು ಮಾಡಿಕೊಂಡರೆ ಅದು ಸರಿಯಾಗುತ್ತಿತ್ತೆ? ಖಂಡಿತಾ ಇಲ್ಲ. ಯಾರು ಬಂದು ಕುಳಿತರೂ ಸ್ವಲ್ಪ ಹೊತ್ತು ಮಾತಾಡಿ ಬೀಳ್ಕೊಡುವುದು ಯಾವುದೇ ಸಿಎಂ ಆದವರ ಕೆಲಸ. ಬದಲಿಗೆ ಅಲ್ಲಿಗೆ ಬರುವ ಹೋಗುವವರನ್ನು ನಿಯಂತ್ರಣ ಮಾಡುವುದಲ್ಲ. ಹೀಗಾಗಿ, ಈ ಚಿತ್ರ ಇಟ್ಟುಕೊಂಡು ಸಿದ್ದರಾಮಯ್ಯ ಅವರೇ ಚಡ್ಡಿ ಪತ್ರಕರ್ತರನ್ನು ತಮ್ಮ ಜೊತೆ ಕೂರಿಸಿಕೊಂಡಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ನನ್ನ ಭಾವನೆ. ಈ ಜಾಗದಲ್ಲಿ ಬಿಜೆಪಿ ಸಿಎಂ ಇರಲಿ ಕಾಂಗ್ರೆಸ್ ಸಿಎಂ ಇರಲಿ. ಯಾವ ಲಜ್ಜೆಯಿಲ್ಲದೆ ಹೋಗಿ ಕುಳಿತುಕೊಳ್ಳುವುದು ಬಲಪಂಥೀಯ ಪತ್ರಕರ್ತರೇ ಎಂಬುದು ನಾನು ಕಂಡಿರುವ ಸಂಗತಿ. ಇಲ್ಲಿ ಕಾಣುವುದು ಈ ಚೆಡ್ಡಿ ಪತ್ರಕರ್ತರ ಭಂಡತನ ಮತ್ತು ಸಿದ್ದರಾಮಯ್ಯ ಅವರ ಲಿಬರಲ್ ಡೆಮಕ್ರಟಿಕ್ ಆದ ವರ್ತನೆ. ಆದರೆ ಇಲ್ಲಿ ಒಂದು ವಿಷಯ ಹೇಳಬೇಕು. ಸಿಎಂ ಸಿದ್ದರಾಮಯ್ಯ ಅವರು ವಿಶ್ವೇಶ್ವರ ಭಟ್ಟನಂತ ಕೆಟ್ಟ ಹುಳವನ್ನು ಮಾತ್ರ ತಮ್ಮ ಸುತ್ತ ಬಿಟ್ಟುಕೊಳ್ಳುವುದು ಅವರ ಅಜ್ಞಾನವೇನೂ ಆಗಿರೆಲು ಸಾಧ್ಯವಿಲ್ಲ. ಅವರ ಈ ವರ್ತನೆ ಬಹಳ ಜನರಲ್ಲಿ ಬೇಸರ ತಂದಿರುವ ಸಂಗತಿ ಅವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಮೊನ್ನೆ ಮತ್ತೊಬ್ಬ ಕೆಟ್ಟ ಹುಳ ಪವರ್ ಟಿವಿಯ ರಾಕೇಶ್ ಶೆಟ್ಟಿಯ ಮನೆಗೆ ಸಿಎಂ ಹೋಗಿದ್ದಾಗಲೂ ಅಸಹ್ಯ ಎನಿಸಿತು. ಇದರಲ್ಲಿ ಸಿದ್ದರಾಮಯ್ಯ ಅವರ ಆಯ್ಕೆ ಪ್ರಶ್ನಾರ್ಹ. ಸಹಜವಾಗಿ ಇದು ಅವರ ಕುರಿತು ಅಸಮಧಾನವನ್ನು ಪ್ರಗತಿಪರರ ವಲಯದಲ್ಲಿ ಹುಟ್ಟುಹಾಕಿದೆ. ಇದೇ ಟೈಮಲ್ಲಿ ಈ ಬಗೆಯ ಸಂಗತಿಗಳು ದುಷ್ಟರ, ಕೋಮುಕ್ರಿಮಿಗಳ ಮ್ಯಾನ್ಯೂವರಿಂಗ್ ಕೆಪಾಸಿಟಿಯನ್ನೂ ತಿಳಿಸಿಕೊಡುತ್ತವೆಯಲ್ಲವೆ?

ಇನ್ನು ಸಿಎಂ ಕಚೇರಿಯಲ್ಲಿ ಆರೆಸ್ಸೆಸ್ ನಂಟಿನ ಕುರಿತು. ಫೇಸ್ಬುಕ್ಕಿನಲ್ಲಿ ನೋಡಿದ ಒಂದು ಪೋಸ್ಟ್ ಮತ್ತು ವೆಬ್ ಪೋರ್ಟಲ್ ಒಂದರಲ್ಲಿ ಈ ಕುರಿತು ಪ್ರಕಟವಾಗಿದ್ದ ಸ್ಟೋರಿಯಲ್ಲಿ ಸಿಎಂ ಕಚೇರಿಯಲ್ಲಿ ಅಧಿಕಾರಿಗಳು ಆರೆಸ್ಸೆಸ್ ನಾಯಕರೊಂದಿಗೆ ನಂಟು ಹೊಂದಿದ್ದಾರೆ, ಈ ಕುರಿತು ಸಿದ್ದರಾಮಯ್ಯ ಎಚ್ಚರವಹಿಸಬೇಕು ಎಂಬ ವಿಚಾರವಿದೆ. ಆದರೆ ಈ ವರದಿ ಮಾಡಿದವರು ಅಥವಾ ಪೋಸ್ಟ್ ಹಾಕಿದವರು ಆ ಅಧಿಕಾರಿಯ ಹೆಸರನ್ನು ಪ್ರಕಟಿಸಿ ಸೂಕ್ತ ಸಾಕ್ಷ್ಯವನ್ನು ನೀಡಬೇಕಲ್ಲವೆ? ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆದು ಗುಮಾನಿ ಹುಟ್ಟಿಸಿಬಿಟ್ಟರೆ ಸರಿಯೆ? ಅಷ್ಟು ಖಚಿತತೆಯಿದ್ದರೆ ನಿಮ್ಮ ಬಳಿ ಇರುವ ದಾಖಲೆ ಇಟ್ಟು ಅದನ್ನು ಸಾಬೀತುಮಾಡಬೇಕಲ್ಲವೆ? ಅಷ್ಟನ್ನು ಮಾಡಲಾಗದಿದ್ದರೆ ಅದು ಹಾಗೆ ಮಾಡಿದವರ ಕುರಿತೇ ಗುಮಾನಿ ಹುಟ್ಟಿಸುತ್ತದೆ. ಈಗ ಆಗಿರುವುದು ಹಾಗೇ.
ಈ ವಿಷಯಕ್ಕೆ ನಾನು ಇಲ್ಲಿ ಪ್ರತಿಕ್ರಿಯಿಸಲು ಒಂದು ಕಾರಣವಿದೆ. ನಾನೇನೂ ದಿನವೂ ಸಿಎಂ ಕಚೇರಿಗೆ ಹೋಗುವುದಿಲ್ಲ. ಅಂತ ಕೆಲಸವೂ ಅಲ್ಲಿ ನನಗಿಲ್ಲ. ಆದರೆ ಸಿಎಂ ಕಚೇರಿಯಲ್ಲಿ ಅತ್ಯಂತ ಬದ್ದತೆಯಿಂದ ಕೆಲಸ ಮಾಡುವ ನೆಲ್ಲಕುಂಟೆ ವೆಂಕಟೇಶಯ್ಯ ಸರ್ ನಮಗೆ ಇಷ್ಟ ಎಂಬ ಕಾರಣಕ್ಕೆ ಆ ಕಡೆ ಹೋದಾಗ ಅವರನ್ನು ಸ್ವಲ್ಪ ಹೊತ್ತು ಮಾತಾಡಿಸಿಕೊಂಡು ಬರಬೇಕೆಂದು ಹೋಗಿರುತ್ತೇನೆ. ಒಂದು ಹತ್ತು ನಿಮಿಷ ಸಿಕ್ಕಿದರೂ ಅದೆಲ್ಲೆಲ್ಲಿಂದಲೋ ತಾವು ಓದಿದ ರಾಶಿ ಮಾಹಿತಿ, ಡೇಟಾಗಳನ್ನು ನಮ್ಮ ತಲೆಗೆ ಹಾಕಿ ಇದರ ಬಗ್ಗೆ ಯೋಚಿಸಿ ಅಂತ ಹೇಳಿ ಮತ್ತೆ ತಮ್ಮ ಕೆಲಸಗಳಲ್ಲಿ ಅವರು ಬ್ಯುಸಿಯಾಗುತ್ತಾರೆ. ಅವರ ಕಾರ್ಯವೈಕರಿಯ ಕಾರಣಕ್ಕೇ ನನ್ನಂತ ಅನೇಕರು ಈ ಸರ್ಕಾರದ ಮೇಲೆ ಒಂದಿಷ್ಟು ಭರವಸೆ ಇಟ್ಟುಕೊಂಡಿರುವುದು ಎಂದು ಖಚಿತವಾಗಿ ಹೇಳಬಲ್ಲೆ. ಏನಿಲ್ಲವೆಂದರೂ ಸರ್ಕಾರದ ಕೆಲ ನಡೆಗಳ ಕುರಿತು ನಮ್ಮ ಅಸಮಧಾನವನ್ನು ಹೇಳಲಾದರೂ ಅವರೊಬ್ಬರಿದ್ದಾರೆ ಎಂಬ ಸಮಾಧಾನ. ಒಳಮೀಸಲಾತಿಯಂತಹ ಕೆಲವು ವಿಷಯಗಳಲ್ಲಿ ಸರ್ಕಾರ ನಮ್ಮನ್ನು ಭ್ರಮನಿರಸನಗೊಳಿಸಿದೆ ನಿಜ. ಆದರೆ, ಕಳೆದ ಎರಡೂ ವರೆ ವರ್ಷಗಳಲ್ಲಿ ಹಲವಾರು ಸನ್ನಿವೇಶಗಳಲ್ಲಿ ಸಿಎಂ ಕಚೇರಿ ಜನಸ್ನೇಹಿಯಾಗಿ, ವಿಚಾರ ಸ್ಪಷ್ಟತೆಯಿಂದ, ಸೆಕ್ಯುಲರ್ ನಿಲುವಿನಿಂದ ಕೆಲಸ ಮಾಡಿದೆ ಎಂದರೆ ಅದಕ್ಕೆ ಅಲ್ಲಿರುವ ಕೆಲವೇ ದಕ್ಷ ಅಧಿಕಾರಿಗಳು ಕಾರಣ. ಅಂತಹ ಅಧಿಕಾರಿಗಳಲ್ಲಿ ನೆಲ್ಲಕುಂಟೆ ವೆಂಕಟೇಶಯ್ಯ ಸರ್ ಕೂಡಾ ಒಬ್ಬರು ಎಂದು ಹೆಮ್ಮೆಯಿಂದ ಹೇಳಬಲ್ಲೆ.
ಸಿಎಂ ಕಚೇರಿಯಲ್ಲಿ ಆರೆಸ್ಸೆಸ್ ನಂಟು ಎನ್ನುವ ರೀತಿಯಲ್ಲಿ ಆದಾರವಿಲ್ಲದೆ ಕೆಲವು ʼಸ್ನೇಹಿತರುʼ ಬರೆದಾಗ, ಯಾವ ಅಧಿಕಾರಿ ಎಂದು ನಿರ್ದಿಷ್ಟಪಡಿಸದೇ ಬೇಜವಾಬ್ದಾರಿಯಿಂದ ಗಾಳಿಯಲ್ಲಿ ಗುಂಡು ಹೊಡೆದಾಗ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಅನೇಕರಿಗೆ ಘಾಸಿಯಾಗುವುದಿಲ್ಲವೆ? ಇದೇ ರೀತಿಯ ಒಂದು ಆರೋಪವನ್ನು ಕೆಲ ದಿನಗಳ ಹಿಂದೆ ಒಬ್ಬರು ಫೇಸ್ಬುಕ್ಕಲ್ಲಿ ಬರೆದುಕೊಂಡು ನಂತರ ಡಿಲೀಟ್ ಮಾಡಿಕೊಂಡಿದ್ದರು. ಕೊನೆಗೆ ತಿಳಿಯಿತು ಅದನ್ನು ಅವರು ತಮ್ಮ ಸ್ವಂತ ಬುದ್ದಿಯಿಂದ ಬರೆದಿರಲಿಲ್ಲ ಅವರ ಹೆಸರಿನಲ್ಲಿ ಬೇನಾಮಿಯೊಬ್ಬರು ಬರೆದ ಬರಹವಾಗಿತ್ತದು ಎಂದು. ತಮಗೇ ಸ್ಪಷ್ಟವಿಲ್ಲದ ವಿಷಯಗಳನ್ನು ಅವರು ಕಾರಿಕೊಳ್ಳುವುದಾದರೂ ಯಾಕೆ ಮತ್ತೆ ಅದನ್ನು ಡಿಲೀಟ್ ಮಾಡುವುದಾದರೂ ಯಾಕೆ? ಇದು ನನಗೆ ಈ ವರೆಗೆ ಅರ್ಥವಾಗಿಲ್ಲ.

ಒಂದು ಮೂಲೆಯಲ್ಲಿ ಒಂದು ಅನುಮಾನ ಕಾಡುತ್ತಿರುವುದೇನೆಂದರೆ, ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ದುರ್ಬಲಗೊಳಿಸಲು, ಅವರ ಕಚೇರಿಯ ಮೂಲಕ ಹೊರಬರುತ್ತಿರುವ ವೈಚಾರಿಕ ಶಕ್ತಿಯನ್ನು ಕುಂದಿಸಲು ಒಂದು ವ್ಯವಸ್ಥಿತ ಪಿತೂರಿಯೇನಾದರೂ ನಮ್ಮ ವಲಯದಲ್ಲೇ ನಡೆಯುತ್ತಿದೆಯೆ? ಈಗ ನಿಧಾನಕ್ಕೆ ಸಿಎಂ ಕಚೇರಿಯನ್ನು ಗುರಿಪಡಿಸಿಕೊಂಡು ದಾಳಿ ಮಾಡುತ್ತಾ, ಸಾರ್ವಜನಿಕರಲ್ಲಿ ಅದರಲ್ಲೂ ಸೆಕ್ಯುಲರ್ ಇರುವವರಲ್ಲಿ ಗುಮಾನಿ ಬರುವಂತೆ ಮಾಡಿ ತಪ್ಪು ಸಂದೇಶ ನೀಡಲು ಇದೊಂದು ಚಿತಾವಣೆಯಾಗಿರಬಹುದೆ? ಅಥವಾ ಈ ಸರ್ಕಾರ ಬದಲಾದರೆ ಮುಂದೆ ತಮಗೂ ಒಂದು ಅವಕಾಶ ಇರಲಿ ಎಂದು ʼದೂರಾಲೋಚನೆಯಿಂದʼ ಏನಾದರೂ ಹಕೀಕತ್ತು ನಡೆದಿರಬಹುದೆ?
ಸಿಎಂ ಸಿದ್ದರಾಮಯ್ಯ ಅವರ ವಿರೋಧಿ ಬಣವೇನಾದರೂ ಇದರಲ್ಲೆಲ್ಲಾ ಸಕ್ರಿಯವಾಗಿರಬಹುದೆ? ಇಂತಹ ಪ್ರಶ್ನೆಗಳಿಗೆಲ್ಲಾ ಕಾಲವೇ ಉತ್ತರ ಹೇಳಬೇಕು.
- ಹರ್ಷಕುಮಾರ್ ಕುಗ್ವೆ, ಹಿರಿಯ ಪತ್ರಕರ್ತರು
08-03-26 10:17 pm
HK News Staffer
ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯುವ ಗುಲಾಮ ಮೋದಿ ; ಇ...
08-03-26 07:51 pm
ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು 958 ಮಂದಿ ತೇರ್ಗಡೆ...
08-03-26 07:38 pm
ಅಮಾನುಷ ಕೃತ್ಯ ; 90 ವರ್ಷದ ಅಜ್ಜಿಯನ್ನೂ ಬಿಡದ ಕಾಮುಕ...
08-03-26 04:47 pm
ಮಾನಹಾನಿ ಸುದ್ದಿಗಳ ಜಾಲತಾಣ ಲಿಂಕ್ ತೆರವು ಕೋರಿ ಕರ್ನ...
08-03-26 03:41 pm
07-03-26 11:58 am
HK News Staffer
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
07-03-26 11:31 pm
HK News Desk
ಮಂಗಳೂರು ರಿಫೈನರಿ ಸ್ಥಗಿತ ವದಂತಿ ತಳ್ಳಿಹಾಕಿದ ಎಂಆರ್...
07-03-26 10:17 pm
ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ; ಹೆರಿಗೆ ಸ...
07-03-26 09:45 pm
ನೇತ್ರಾವತಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್...
07-03-26 07:20 pm
ಬಜೆಟ್ ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಬಂಪರ್; ಉಚಿ...
06-03-26 07:01 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm