ಬ್ರೇಕಿಂಗ್ ನ್ಯೂಸ್
24-04-22 09:29 am Mangalore Correspondent ಕರಾವಳಿ
ಮಂಗಳೂರು, ಎ.23: ಶಾಲೆಗೆ ಹೋಗುವ ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟು ಕಳುಹಿಸಿದ್ದಾನೆಂದು ಬಾಲಕಿಯ ತಾಯಿಯೇ ಮಂಗಳೂರಿನ ಖಾಸಗಿ ಬಸ್ಸಿನ ಕಂಡಕ್ಟರನಿಗೆ ಹಿಗ್ಗಾಮುಗ್ಗಾ ಝಾಡಿಸಿದ ವಿಡಿಯೋ ವೈರಲ್ ಆಗಿದೆ.
ರಾತ್ರಿ ವೇಳೆ 19 ನಂಬರಿನ ಬಸ್ಸಿನಲ್ಲಿ ಬಂದಿದ್ದ ಮಹಿಳೆ, ಬೋಂದೇಲ್ ನಲ್ಲಿ ಇಳಿದು ಅದೇ ಬಸ್ಸಿನ ಕಂಡಕ್ಟರನಿಗೆ ದಬಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಸ್ಸಿನಲ್ಲಿ ಬಂದಿದ್ದ ಎಂಟನೇ ತರಗತಿ ಓದುವ ತನ್ನ ಮಗಳಿಗೆ ಚೀಟಿಯಲ್ಲಿ ಮೊಬೈಲ್ ನಂಬರ್ ಬರೆದುಕೊಟ್ಟಿದ್ದಾನೆ. ಫೋನ್ ಮಾಡಲು ಹೇಳಿದ್ದು ಕರೆ ಮಾಡಿದರೆ ಮನೆಯಲ್ಲಿ ಯಾರಿದ್ದಾರೆ ಎಂದು ಕೇಳಿದ್ದಾನೆ. ನಿನಗೆಷ್ಟು ಧೈರ್ಯ ನನ್ನ ಮಗಳಿಗೆ ನಂಬರ್ ಕೊಡುವುದಕ್ಕೆ. ಇದೇ ರೀತಿ ಎಷ್ಟು ಹೆಣ್ಮಕ್ಕಳಿಗೆ ನಂಬರ್ ಕೊಟ್ಟು ಚಕ್ಕಂದ ಆಡಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಬಸ್ಸಿನಿಂದ ಕೆಳಗಿಳಿಸಿ ಕಂಡಕ್ಟರ್ ಯುವಕನಿಗೆ ಬಾಲಕಿಯ ತಾಯಿ ಮುಖಕ್ಕೆ ಹೊಡೆದು ಪ್ರಶ್ನೆ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವಿಡಿಯೋದಲ್ಲಿ ಇತರ ಬಸ್ ಗಳ ಸಿಬಂದಿ ಅಲ್ಲಿ ಸೇರಿದ್ದು ಅವರು ಕೂಡ ದಬಾಯಿಸುತ್ತಾರೆ. ನೀನು ನಮ್ಮೆಲ್ಲರ ಮರ್ಯಾದೆ ತೆಗೀತೀಯಾ.. ಬಸ್ ಮಾಲಕರ ಮರ್ಯಾದೆ ತೆಗೀತೀಯಾ.. ನಿನಗ್ಯಾಕೆ ಮಾರಾಯ ಹುಡುಗಿಯರ ನಂಬರ್. ಅದು ಕೂಡ ಯೂನಿಫಾರ್ಮ್ ಹಾಕ್ಕೊಂಡು ಬಂದಿದ್ದ ಸಣ್ಣ ಹುಡುಗಿಗೆ ನಂಬರ್ ಕೊಟ್ಟಿದ್ದೀಯಲ್ಲಾ.. ನಿನಗೆ ಯಾರೂ ಅಕ್ಕ, ತಂಗಿ ಇಲ್ವಾ.. ಎಂದು ಜೋರು ಮಾಡಿದ್ದಾರೆ. ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎನ್ನಲಾಗುತ್ತಿದೆ.
Mangalore Bus conductor thrashed for giving his phone number to minor girl in Bondel, video goes viral.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm