ಬ್ರೇಕಿಂಗ್ ನ್ಯೂಸ್
22-09-20 03:02 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 22: ಕೊನೆಗೂ ಕರಾವಳಿಯ ಹೆಮ್ಮೆಯ ಸಾಧಕ, ವಿಜಯ ಬ್ಯಾಂಕಿನ ಔನ್ನತ್ಯಕ್ಕೆ ಕಾರಣರಾಗಿದ್ದ ಮುಲ್ಕಿ ಸುಂದರರಾಮ ಶೆಟ್ಟಿ ಅವರಿಗೆ ರಾಜ್ಯ ಸರಕಾರ ಗೌರವ ನೀಡಿದೆ. ಮೂರು ವರ್ಷಗಳ ಹಿಂದೆ ಜಟಾಪಟಿಗೆ ಕಾರಣವಾಗಿದ್ದ ಸುಂದರ ರಾಮ ಶೆಟ್ಟರ ಹೆಸರಿನಲ್ಲಿ ಮಂಗಳೂರಿನಲ್ಲಿ ರಸ್ತೆ ನಾಮಕರಣ ಮಾಡುವುದಕ್ಕೆ ನಗರಾಭಿವೃದ್ಧಿ ಸಚಿವಾಲಯ ಒಪ್ಪಿಕೊಂಡಿದ್ದು ಹಿಂದಿನ ಆದೇಶವನ್ನು ಮರು ಜಾರಿಗೆ ಸೂಚನೆ ನೀಡಿದೆ.
ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ, ಲೈಟ್ ಹೌಸ್ ಹಿಲ್ ಬಳಿಯ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರು ನಾಮಕರಣ ಮಾಡಲು 2017ರ ಮೇ 24ರಂದು ಆಗಿನ ರಾಜ್ಯ ಸರಕಾರ ಆದೇಶ ಮಾಡಿತ್ತು. ಆದರೆ, ಕೊನೆಕ್ಷಣದಲ್ಲಿ ಎಚ್ಚತ್ತುಕೊಂಡ ಅಲೋಶಿಯಸ್ ಕಾಲೇಜು ಆಡಳಿತ, ಆಗ ಮಂಗಳೂರು ಶಾಸಕರಾಗಿದ್ದ ಜೆ.ಆರ್ ಲೋಬೊ ಮೂಲಕ ಕೋರ್ಟಿನಿಂದ ತಡೆಯಾಜ್ಞೆ ತಂದಿತ್ತು. ಅಲ್ಲದೆ, ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರಿಡುವುದಕ್ಕೆ ಆಕ್ಷೇಪ ಸೂಚಿಸಿ ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಈ ವಿಚಾರ ಮಂಗಳೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಮಧ್ಯೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಬಂಟ ಸಮುದಾಯಕ್ಕೆ ಅವಮಾನ ಎಂಬ ನೆಲೆಯಲ್ಲಿ ಪ್ರಚಾರವನ್ನೂ ನಡೆಸಲಾಗಿತ್ತು. ಬಳಿಕ ಕೋರ್ಟ್ ಮತ್ತು ಮಹಾನಗರ ಪಾಲಿಕೆಯಲ್ಲಿ ಜಟಾಪಟಿ ನಡೆದು ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರಕಾರ ಬಂದರೆ ಒಂದೇ ತಿಂಗಳಲ್ಲಿ ರಸ್ತೆ ನಾಮಕರಣ ಮಾಡಿಸುವುದಾಗಿ ಮಾಜಿ ಸಚಿವ ನಾಗರಾಜ ಶೆಟ್ಟಿ ಕೊಚ್ಚಿಕೊಂಡಿದ್ದೂ ಆಗಿತ್ತು. ಆನಂತರ ಕೋರ್ಟಿನಲ್ಲಿ ವಾದ - ವಿವಾದ ನಡೆದಿದ್ದು ಮಹಾನಗರ ಪಾಲಿಕೆ ಕಮಿಷನರ್ ಅವರ ಅಭಿಪ್ರಾಯವನ್ನೂ ಕೇಳಲಾಗಿತ್ತು. ಎರಡೂ ಕಡೆಯ ವಾದ ಆಲಿಸಿದ ರಾಜ್ಯ ಹೈಕೋರ್ಟ್, 2019ರ ಎಪ್ರಿಲ್ 11 ರಂದು ಈ ಬಗ್ಗೆ ಪುನರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.
ಈಗ ದಿಢೀರ್ ಆಗಿ ಎಚ್ಚತ್ತ ರಾಜ್ಯದ ಬಿಜೆಪಿ ಸರಕಾರ, ಇತ್ತೀಚೆಗೆ 2020ರ ಸೆಪ್ಟಂಬರ್ 5 ರಂದು ಹಳೆಯ ಆದೇಶವನ್ನು ಊರ್ಜಿತಗೊಳಿಸಿ ನಗರಾಭಿವೃದ್ಧಿ ಸಚಿವಾಲಯದ ಮೂಲದ ಆದೇಶ ಮಾಡಿಸಿದೆ. ಅಲ್ಲಿಗೆ ಎರಡು ಸಮುದಾಯಗಳ ನಡುವಿನ ಪ್ರತಿಷ್ಠೆಗೆ ಕಾರಣವಾಗಿದ್ದ ರಸ್ತೆ ನಾಮಕರಣ ವಿವಾದಕ್ಕೆ ಇತಿಶ್ರೀ ಹಾಕಲಾಗಿದೆ.
Join our WhatsApp group for latest news updates
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm