ಬ್ರೇಕಿಂಗ್ ನ್ಯೂಸ್
22-09-20 01:38 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 22: ಸುರತ್ಕಲ್ ಬಳಿಯ ಮನೆಯೊಂದರಲ್ಲಿ ನಗದು ಮತ್ತು ಚಿನ್ನಾಭರಣ ಲೂಟಿ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 15 ರಂದು ಸುರತ್ಕಲ್ ಬಳಿಯ ಇಡ್ಯಾದಲ್ಲಿರುವ ಜಾರ್ಡಿನ್ ಅಪಾರ್ಟ್ಮೆಂಟಿನ ವಿದ್ಯಾ ಪ್ರಭು ಎಂಬವರ ಮನೆಯಿಂದ ಕಳವು ನಡೆದಿತ್ತು. ಮನೆಯಲ್ಲಿದ್ದ 51 ಲಕ್ಷ ನಗದು, 224 ಗ್ರಾಂ ಚಿನ್ನ ಕಳವಾದ ಬಗ್ಗೆ ವಿದ್ಯಾ ಪ್ರಭು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಅಪಾರ್ಟ್ಮೆಂಟ್ ಸೆಕ್ರೆಟರಿ ನವೀನ್ ಎಂಬಾತನ ಮೇಲೆ ಸಂಶಯ ಬಂದು ತನಿಖೆ ಕೇಂದ್ರೀಕರಿಸಿದ್ದಾರೆ. ತನಿಖೆಯಲ್ಲಿ ನವೀನ್ ಕಳ್ಳತನಕ್ಕೆ ಸಂಚು ರೂಪಿಸಿದ್ದು ತಿಳಿದುಬಂದಿದ್ದಲ್ಲದೆ ನಾಲ್ವರನ್ನು ಬಂಧಿಸಿದ್ದಾರೆ.
ಸುರತ್ಕಲ್ ನಲ್ಲಿ ಬಾರ್ ಮ್ಯಾನೇಜರ್ ಆಗಿದ್ದ ನವೀನ್ ಸೇನೆಯಲ್ಲಿ 15 ವರ್ಷ ಕೆಲಸ ಮಾಡಿ ವಾಲ್ಯುಂಟರಿ ರಿಟೈರ್ಮೆಂಟ್ ಪಡೆದು ಬಂದಿದ್ದ. ಪೆಟ್ರೋಲ್ ಬಂಕ್ ಮಾಲಕಿಯಾಗಿರುವ ವಿದ್ಯಾ ಪ್ರಭು ಫ್ಲಾಟ್ ಹೊಂದಿರುವುದು ಮತ್ತು ಆಗಾಗ ಬಂದು ಹೋಗುತ್ತಿದ್ದ ಮಾಹಿತಿ ಇದ್ದ ನವೀನ್ ಅಲಿಯಾಸ್ ಲೋಕನಾಥ್, ಕಳ್ಳತನಕ್ಕೆ ಪ್ಲಾನ್ ಹಾಕಿದ್ದಾನೆ. ಬಾರ್ ನಲ್ಲಿ ವೈಟರ್ ಆಗಿದ್ದ ಸಂತೋಷ್ ನೆರವು ಪಡೆದು ಕೇರಳದ ತಿರುವನಂತಪುರ ಮೂಲದ ರಘು, ಅಮೇಶ್ ಎಂಬವರ ಮೂಲಕ ಕೃತ್ಯ ನಡೆಸಿದ್ದಾನೆ. ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳಿಂದ 30.85 ಲಕ್ಷ ನಗದು ಮತ್ತು 224 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದಲ್ಲಿ ಕೇರಳ ಮೂಲದ ಇನ್ನಿಬ್ಬರು ಪಾಲ್ಗೊಂಡಿದ್ದು ಅವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸುರತ್ಕಲ್ ಬಳಿ ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ಮತ್ತು ಪತಿ ಕಡಂಬೋಡಿಯಲ್ಲಿ ಮನೆ ಹೊಂದಿದ್ದರು. ಆದರೆ, ಇನ್ನಿತರ ವ್ಯವಹಾರವನ್ನು ಫ್ಲಾಟ್ ನಲ್ಲಿದ್ದುಕೊಂಡು ಮಾಡುತ್ತಿದ್ದರು. ಪಂಪ್ ನಲ್ಲಿ ಸಂಗ್ರಹವಾಗುತ್ತಿದ್ದ ನಗದನ್ನು ಕೆಲವೊಮ್ಮೆ ಫ್ಲಾಟ್ ನಲ್ಲಿ ಇಟ್ಟು ಹೋಗುತ್ತಿದ್ದರು. ಆ ಮನೆಯಲ್ಲಿ ಬೇರೆ ಯಾರೂ ಇರುತ್ತಿರಲಿಲ್ಲ. ಈ ಬಗ್ಗೆ ಅರಿತಿದ್ದ ಫ್ಲಾಟ್ ಸೆಕ್ರೆಟರಿ ನವೀನ್ ಕಳ್ಳತನಕ್ಕೆ ಪ್ಲಾನ್ ಹಾಕಿದ್ದ. ಮಹತ್ವದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಎಸಿಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಭೇದಿಸಿದ್ದಾರೆ ಎಂದು ಕಮಿಷನರ್ ವಿಕಾಸ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
Join our WhatsApp group for latest news updates
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 05:45 pm
HK News Desk
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm