ಬ್ರೇಕಿಂಗ್ ನ್ಯೂಸ್
17-03-22 11:51 am Mangalore Correspondent ಕರಾವಳಿ
ಮಂಗಳೂರು, ಮಾ.17: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಮುಷ್ಕರದ ಕರೆಗೆ ಮುಸ್ಲಿಮ್ ವರ್ತಕರು ಓಗೊಟ್ಟಿದ್ದಾರೆ. ಮಂಗಳೂರಿನಲ್ಲಿ ಮುಸ್ಲಿಮರ ಅಂಗಡಿ, ವ್ಯಾಪಾರ ಸಂಸ್ಥೆಗಳು ಪೂರ್ತಿಯಾಗಿ ಬಂದ್ ಆಗಿವೆ. ಅಲ್ಲದೆ, ಯಾವತ್ತೂ ಗಿಜಿಗುಟ್ಟುವ ಮೀನುಗಾರಿಕಾ ದಕ್ಕೆ ಪೂರ್ತಿ ಸ್ತಬ್ಧ ಆಗಿದೆ.
ಮಂಗಳೂರು ನಗರದ ಸೆಂಟ್ರಲ್ ಮಾರುಕಟ್ಟೆ ಆಸುಪಾಸಿನಲ್ಲಿರುವ ಅಂಗಡಿಗಳು, ಸ್ಟೇಟ್ ಬ್ಯಾಂಕ್ ಪರಿಸರದಲ್ಲಿನ ಅಂಗಡಿಗಳು ಹೆಚ್ಚಿನವು ಬಂದ್ ಆಗಿವೆ. ಬಂದರು ರಸ್ತೆಯಲ್ಲಿ ಅತಿ ಹೆಚ್ಚು ಮುಸ್ಲಿಂ ವರ್ತಕರಿದ್ದು, ತಮ್ಮ ವ್ಯಾಪಾರ, ವಹಿವಾಟಿಗೆ ಶಟರ್ ಎಳೆದು ಹಿಜಾಬ್ ತೀರ್ಪಿಗೆ ಅಸಮ್ಮತಿ ಸೂಚಿಸಿದ್ದಾರೆ.



ಉಳ್ಳಾಲ, ತೊಕ್ಕೊಟ್ಟಿನಲ್ಲೂ ಮುಸ್ಲಿಮ್ ವರ್ತಕರು ವ್ಯಾಪಕ ಬೆಂಬಲ ನೀಡಿದ್ದು, ಎಲ್ಲ ರೀತಿಯ ವಹಿವಾಟನ್ನು ಸ್ಧಗಿತಗೊಳಿಸಿದ್ದಾರೆ. ಮೆಡಿಕಲ್, ಬಟ್ಟೆ ಮಳಿಗೆ, ಜೀನಸಿ ಅಂಗಡಿಗಳು ಸೇರಿ ಇನ್ನಿತರ ಹಾರ್ಡ್ ವೇರ್, ಚಪ್ಪಲಿ ಅಂಗಡಿ, ಪೈಂಟ್ ಎಲ್ಲ ರೀತಿಯ ಅಂಗಡಿಗಳು ಬಂದ್ ಆಗಿವೆ. ಇದರಿಂದಾಗಿ ಉಳ್ಳಾಲ ಬಿಕೋ ಎನ್ನುತ್ತಿದ್ದು, ಜನರ ಸಂಚಾರವೂ ಕಡಿಮೆಯಾಗಿ ಖಾಲಿ ಖಾಲಿಯಾಗಿದೆ. ಇದಲ್ಲದ, ಉಳ್ಳಾಲದಲ್ಲಿ ಮುಸ್ಲಿಮರ ಮಾಲೀಕತ್ವದ ಶಾಲೆ, ಕಾಲೇಜುಗಳು ಕೂಡ ಬಂದ್ ಆಗಿವೆ.




ಮೀನು ವಹಿವಾಟಿಗೆ ಕೋಟ್ಯಂತರ ನಷ್ಟ
ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಹಿಂದು- ಮುಸ್ಲಿಮರ ಬೋಟ್ ಗಳಿದ್ದರೂ, ದಕ್ಕೆಯಲ್ಲಿ ಮೀನು ಏಲಂ ವಹಿವಾಟು ನಡೆಸುವುದರಲ್ಲಿ ಮುಸ್ಲಿಮರದ್ದೇ ಎತ್ತಿದ ಕೈ. ಹೀಗಾಗಿ ಬೋಟ್ ಗಳು ಬಂದರೂ ಮೀನುಗಳನ್ನು ನಿಯಮಿತವಾಗಿ ಏಲಂ ನಡೆಸಲಾಗುತ್ತಿಲ್ಲ. ಅಲ್ಲದೆ, ಮೀನು ವ್ಯಾಪಾರದಲ್ಲಿ ಮುಸ್ಲಿಮರೇ ಹೆಚ್ಚಿರುವುದರಿಂದ ಮೀನು ವಹಿವಾಟು ಪೂರ್ತಿ ಸ್ತಬ್ಧ ಆಗುವಂತಾಗಿದೆ. ಮಂಗಳೂರಿನ ದಕ್ಕೆಯಲ್ಲಿ ಮುಸ್ಲಿಮರದ್ದೇ ಹೆಚ್ಚು ಬೋಟ್ ಇರುವುದು ಮತ್ತು ವ್ಯಾಪಾರಸ್ಥರು ಕೂಡ ಮುಸ್ಲಿಮರೇ ಹೆಚ್ಚಿದ್ದಾರೆ. ಇದರಿಂದಾಗಿ ಮುಸ್ಲಿಮರ ಮುಷ್ಕರದಿಂದ ಮಂಗಳೂರಿನಲ್ಲಿ ಮೀನು ವಹಿವಾಟಿಗೆ ದೊಡ್ಡ ಪೆಟ್ಟು ಬಿದ್ದಿದೆ.



ಮಂಗಳೂರು ನಗರ, ಉಳ್ಳಾಲ, ತೊಕ್ಕೊಟ್ಟು ಸೇರಿದಂತೆ ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಕಡೆ ಮುಸ್ಲಿಮ್ ಆಟೋ ಚಾಲಕರು ಕೂಡ ತಮ್ಮ ಕರ್ತವ್ಯಕ್ಕೆ ಇಳಿದಿಲ್ಲ. ಹಿಜಾಬ್ ತೀರ್ಪು ವಿರೋಧಿಸಿ ತಮ್ಮ ಕೆಲಸ ಸ್ಥಗಿತಗೊಳಿಸಿದ್ದಾರೆ. ಉಳಿದಂತೆ, ಯಾವುದೇ ಮೆರವಣಿಗೆ, ಗಲಾಟೆ ನಡೆದಿಲ್ಲ. ಸ್ವಯಂಪ್ರೇರಿತವಾಗಿ ಮುಷ್ಕರ ನಡೆಸಿದ್ದು ಸಾತ್ವಿಕ ಸಿಟ್ಟನ್ನು ತೋರಿಸಿದ್ದಾರೆ.
Muslim organizations in the state have called for a day's state-wide bandh on Thursday March 17 in protest against the verdict delivered by the state high court in Hijab case. The organizations, which had fully supported the students who went to the high court against the insistence of the educational institutions which had barred the students with Hijabs from attending schools and colleges. The organizations are peeved over the high court order that mentions that the Holy Quran does not have mention about the wearing of the Hijabs.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 08:41 pm
HK News Desk
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm