ಬ್ರೇಕಿಂಗ್ ನ್ಯೂಸ್
11-01-22 11:22 am Mangalore Correspondent ಕರಾವಳಿ
ಉಳ್ಳಾಲ, ಜ.11 : ಪಕ್ಷದ ಶಿಸ್ತು, ಸಿದ್ಧಾಂತ ಉಲ್ಲಂಘಿಸಿ, ಕೊರಗಜ್ಜನಿಗೆ ನಿಂದನೆ ಮಾಡಿದ ಆರೋಪಿಯ ರಕ್ಷಣೆ ಮಾಡಿದ ಆರೋಪದಡಿ ಮುಡಿಪು ಸಾಂಬಾರ್ ತೋಟದ ವಕೀಲ, ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ ಮಹಮ್ಮದ್ ಅಸ್ಗರನ್ನು ಬಿಜೆಪಿ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ.
ಜ.6 ರಂದು ವಿಟ್ಲ ಸಾಲೆತ್ತೂರಿನ ಮುಸ್ಲಿಂ ಸಮುದಾಯದ ಮದುವೆಯ ಔತಣ ಕೂಟದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಅಪಮಾನ ಮಾಡಿರುವುದಾಗಿ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಟ್ಲ ಪೊಲೀಸರು ಜ.8 ರಂದು ಬಾಷಿತ್ ಸಹೋದರ ಅರ್ಷದ್ ನನ್ನು ಬಂಧಿಸಿದ್ದರು. ಆದರೆ ಅದೇ ದಿನ ಸಂಜೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ, ವಕೀಲ ಅಸ್ಗರ್ ಬಂಧಿತ ಆರೋಪಿಯನ್ನ ಜಾಮೀನಿನ ಮೇಲೆ ಬಿಡಿಸಿದ್ದು ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಹಮ್ಮದ್ ಅಸ್ಗರ್ ಈ ಹಿಂದೆಯೂ ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಬಗ್ಗೆ ಆರೋಪಗಳಿವೆ. ಬಿಜೆಪಿ ಮಂಗಳೂರು ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಜಾಲತಾಣಗಳಲ್ಲಿ ಹರಿತವಾದ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸ್ಥಾನದಿಂದ ತೆರವಾಗಿದ್ದ. ಸದ್ಯ ಮುಡಿಪು ಸಾಂಬಾರ್ ತೋಟದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನಾಗಿರುವ ಅಸ್ಗರ್ ಮತ್ತೊಮ್ಮೆ ಪಕ್ಷದ ಶಿಸ್ತು, ಸಿದ್ಧಾಂತಗಳನ್ನ ಮೀರಿದಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಸೂಚನೆಯಂತೆ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರು ಅಸ್ಗರನ್ನ ಪಕ್ಷದಿಂದಲೇ ಉಚ್ಚಾಟಿಸಿ ಆದೇಶ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಭಯೋತ್ಪಾದಕ ಕೃತ್ಯಗಳ ನಿಯಂತ್ರಣಕ್ಕಾಗಿ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಬೇಕೆಂಬ ಪ್ರಸ್ತಾಪ ಕೇಳಿಬಂದಿತ್ತು. ಆಗ ರಾಷ್ಟ್ರೀಯ ಭದ್ರತೆಗಾಗಿ ಬುರ್ಖಾ ನಿಷೇಧ ಭಾರತದಲ್ಲಿಯೂ ಆಗಬೇಕು ಎನ್ನುವ ಬಗ್ಗೆ ಫೇಸ್ಬುಕ್ ಚರ್ಚೆ ನಡೆದಿತ್ತು. ಈ ವೇಳೆ, ಬಿಜೆಪಿ ನಾಯಕ ಮಹಮ್ಮದ್ ಅಸ್ಗರ್ ತನ್ನ ಫೇಸ್ಬುಕ್ ವಾಲಲ್ಲಿ ಬುರ್ಖಾ ಪರವಾಗಿ ಪೋಸ್ಟ್ ಹಾಕಿದ್ದ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಎಷ್ಟು ಸುರಕ್ಷಿತವೋ, ಮುಸ್ಲಿಂ ಹೆಣ್ಮಕ್ಕಳಿಗೆ ಬುರ್ಖಾನೂ ಅಷ್ಟೇ ಸುರಕ್ಷಿತ ಎಂದು ಅಸ್ಗರ್ ಫೇಸ್ಬುಕ್ ವಾಲಿನಲ್ಲಿ ಬರೆದಿದ್ದನ್ನ ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದರು. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪಕ್ಷದ ಸಿದ್ಧಾಂತ ಮೀರಿ ವರ್ತಿಸಿದ್ದ ಅಸ್ಗರ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ತನ್ನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಅಸ್ಗರ್ ಫೇಸ್ಬುಕ್ ವಾಲ್ ನಿಂದ ಬುರ್ಖಾ ಬಗ್ಗೆ ಹಾಕಿದ್ದ ಪೋಸ್ಟನ್ನು ಅಸ್ಗರ್ ಡಿಲೀಟ್ ಮಾಡಿದ್ದ.
ಇತ್ತೀಚೆಗೆ ಮೈಸೂರಿನ ನಂಜನಗೂಡು ಮೂಲದ 21 ವರ್ಷದ ಹುಡುಗಿಯನ್ನು ಮುಡಿಪು ಸಾಂಬಾರ್ ತೋಟದ ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದು ಹೆಸರು ಹೇಳಿಕೊಂಡು ಮೋಸದಿಂದ ಪ್ರೇಮದ ಬಲೆಗೆ ಬೀಳಿಸಿದ್ದಲ್ಲದೆ, ಆಕೆಯ ಅಶ್ಲೀಲ ವಿಡಿಯೋ ಸೆರೆಹಿಡಿದು ಅವಳನ್ನು ಬ್ಲಾಕ್ಮೇಲ್ ಮಾಡಿ 28 ಲಕ್ಷ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಬಿಜೆಪಿ ನಾಯಕ ಅಸ್ಗರ್, ಆರೋಪಿ ಯುವಕ ತನ್ನ ಊರಿನವನೆಂದು ರಕ್ಷಣೆ ಮಾಡಲು ಹೋಗಿದ್ದ. ಯುವತಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಆರೋಪಿಯ ಸಾಂಬಾರ್ ತೋಟದ ಮನೆಗೆ ಬಂದು ಹಣ ಹಿಂದಿರುಗಿಸುವಂತೆ ಹೇಳಿ ಅಂಗಲಾಚಿದ್ದಳು. ಆದರೆ ಆರೋಪಿ ಮನೆಯವರು ಯುವತಿಗೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣದಲ್ಲಿ ವಕೀಲ ಅಸ್ಗರ್ ಆರೋಪಿಯನ್ನು ರಕ್ಷಿಸಿದಲ್ಲದೆ, ಯುವತಿಗೆ ದೂರು ನೀಡದಂತೆ ಬೆದರಿಸಿದ್ದ ಎನ್ನುವ ಬಗ್ಗೆ ಆರೋಪ ಕೇಳಿಬಂದಿತ್ತು.
ಮುಸ್ಲಿಂ ಮದುವೆ ಸಂಭ್ರಮ ; ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಯುವಕರು, ಆಕ್ರೋಶ
ಮುಸ್ಲಿಂ ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ ; ಸಾಲೆತ್ತೂರಿನ ಮನೆಗೆ ಬಜರಂಗದಳ ಮುತ್ತಿಗೆ ಯತ್ನ, ಬಂಧನ
ಅಪಹಾಸ್ಯದ ಬಗ್ಗೆ ಕೊರಗಜ್ಜನಿಗೆ ದೂರು ; ಯಾವ ರೀತಿ ಕುಣಿಸಿದ್ದಾರೋ ಅದೇ ರೀತಿ ಬೀದಿಯಲ್ಲಿ ಅಲೆದಾಡಿಸುತ್ತೇನೆ !
Mangalore BJP leader removed from party for helping in release of youths arrested over wearing Korajagga costume. The leader has been identified as Lawyer Mohammad Asgar. A video has been going viral on social media in which a Muslim bridegroom allegedly dressed as Hindu deity Koragajja is seen dancing at a wedding reception party. The incident has sparked outrage, and a case has been filed against the youth for hurting religious sentiments.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm