ಅಪಹಾಸ್ಯದ ಬಗ್ಗೆ ಕೊರಗಜ್ಜನಿಗೆ ದೂರು ; ಯಾವ ರೀತಿ ಕುಣಿಸಿದ್ದಾರೋ ಅದೇ ರೀತಿ ಬೀದಿಯಲ್ಲಿ ಅಲೆದಾಡಿಸುತ್ತೇನೆ !

08-01-22 01:41 pm       HK Desk news   ಕರಾವಳಿ

ಕೊರಗಜ್ಜ ದೇವದ ವೇಷ ತೊಟ್ಟು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ವಿಚಾರ ಹಿಂದುಗಳ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ಈ ಬಗ್ಗೆ ಕೊರಗಜ್ಜನ ಕೋಲದಲ್ಲಿ ಭಕ್ತರು ದೂರು ಹೇಳಿಕೊಂಡಿದ್ದಾರೆ.

ಮಂಗಳೂರು, ಜ.8 : ಕೊರಗಜ್ಜ ದೇವದ ವೇಷ ತೊಟ್ಟು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ವಿಚಾರ ಹಿಂದುಗಳ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ಈ ಬಗ್ಗೆ ಕೊರಗಜ್ಜನ ಕೋಲದಲ್ಲಿ ಭಕ್ತರು ದೂರು ಹೇಳಿಕೊಂಡಿದ್ದಾರೆ. ಅತ್ತಾವರದಲ್ಲಿ ನಡೆದ ಕೋಲದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದು, ದೈವದ ಪಾತ್ರಧಾರಿ, ನನ್ನನ್ನು ಯಾವ ರೀತಿ ಕುಣಿಸಿದ್ದಾರೋ ಅದೇ ರೀತಿಯಲ್ಲಿ ಅವರನ್ನು ಒಂದು ತಿಂಗಳ ಒಳಗೆ ಬೀದಿಯಲ್ಲಿ ಅಲೆದಾಡಿಸುತ್ತೇನೆ ಎಂದು ಅಭಯ ನೀಡಿರುವ ವಿಡಿಯೋ ವೈರಲ್ ಆಗಿದೆ.

ವಿಟ್ಲದ ಬಳಿಯ ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಜನವರಿ 6ರಂದು ರಾತ್ರಿ ಮುಸ್ಲಿಮ್ ಯುವಕರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಮದುಮಗನಿಗೆ ಕೊರಗಜ್ಜನ ರೀತಿ ವೇಷ ಹಾಕಿ, ಬೀದಿಯಲ್ಲಿ ಕುಣಿಯುತ್ತಾ ಬಂದಿದ್ದರು. ಕೊರಗಜ್ಜನಿಗೆ ಅಪಹಾಸ್ಯ ಮಾಡುವ ರೀತಿ ವರ್ತಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಸಾಲೆತ್ತೂರಿನ ಮದುವೆ ಮನೆಗೆ ಮುತ್ತಿಗೆ ಹಾಕುವ ಯತ್ನ ನಡೆದಿತ್ತು. ಬಳಿಕ ಬಜರಂಗದಳ ಕಾರ್ಯಕರ್ತರನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.

ಇದರ ನಡುವಲ್ಲೇ ಮಂಗಳೂರಿನ ಅತ್ತಾವರದಲ್ಲಿ ಕೊರಗಜ್ಜ ದೈವದ ಕೋಲ ನಡೆದಿದೆ ಎನ್ನಲಾಗುತ್ತಿದ್ದು, ಅಲ್ಲಿ ಭಕ್ತರೊಬ್ಬರು ಅನ್ಯಧರ್ಮದ ಯುವಕರು ಅಪಹಾಸ್ಯ ಮಾಡಿದ ಬಗ್ಗೆ ಕೊರಗಜ್ಜನಲ್ಲಿ ಅರುಹಿದ್ದಾರೆ. ನಾವು ನಂಬುವ ಅಜ್ಜನ ವೇಷವನ್ನು ಹಾಕಿ ಅಪಹಾಸ್ಯ ಮಾಡಿದ್ದಾರೆ, ಈ ರೀತಿಯ ಕೃತ್ಯ ಪದೇ ಪದೇ ಮರುಕಳಿಸುತ್ತಿದೆ ಎಂದು ದೂರು ಹೇಳಿದ್ದಾರೆ. ಪ್ರತಿಕ್ರಿಯೆ ನೀಡಿದ ಕೊರಗಜ್ಜ ಪಾತ್ರಧಾರಿ, ಅವರನ್ನು ಮಂಕು ಮರುಳು ಮಾಡಿ ಬೀದಿಯಲ್ಲಿ ಕುಣಿಸುತ್ತೇನೆ ಎಂದು ಹೇಳಿದ್ದು, ಇದರ ಸಣ್ಣ ವಿಡಿಯೋ ತುಣುಕು ವೈರಲ್ ಆಗಿದೆ.

ಉಪ್ಪಳದ ಮದುಮಗ ಉಮರುಲ್ ಬಾಶಿತ್ ಎಂಬಾತ ಮದುವೆ ದಿನ ಸಾಲೆತ್ತೂರಿನ ವಧುವಿನ ಮನೆಗೆ ಬಂದಿದ್ದ ವೇಳೆ ಕೊರಗಜ್ಜನ ರೀತಿ ವೇಷ ಹಾಕಿ ಕುಣಿಯುತ್ತಾ ಅಪಹಾಸ್ಯ ಮಾಡಿದ್ದು, ಇದರ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಸ್ಲಿಂ ಮದುವೆ ಸಂಭ್ರಮ ; ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಯುವಕರು, ಆಕ್ರೋಶ 

ಮುಸ್ಲಿಂ ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ ;  ಸಾಲೆತ್ತೂರಿನ ಮನೆಗೆ ಬಜರಂಗದಳ ಮುತ್ತಿಗೆ ಯತ್ನ, ಬಂಧನ

Mnagalore Muslim groom dressed as Koragajja goes viral and creates controversy. Last night the Koragajja temple Attavar has cursed the bride to go mad within a span of a month. A video had been going viral on social media in which a Muslim bridegroom allegedly dressed as Hindu deity Koragajja is seen dancing at a wedding reception party. The incident has sparked outrage, and a case has been filed against the youth for hurting religious sentiments.