ಬ್ರೇಕಿಂಗ್ ನ್ಯೂಸ್
12-02-26 10:36 pm Mangalore Correspondent ಕರಾವಳಿ
ಉಳ್ಳಾಲ, ಫೆ.12 : ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಅರ್ಹ ಅಶಕ್ತ ಕುಟುಂಬಗಳಿಗೆ ಈಗಾಗಲೇ ವೈಯಕ್ತಿಕ ನೆಲೆಯಲ್ಲಿ ಆರು ಮನೆಗಳನ್ನ ನಿರ್ಮಿಸಿ ಕೊಡಲಾಗಿದೆ. ಇದೀಗ ಅಡ್ಕ ಶ್ರೀ ಭಗವತಿ ಕ್ಷೇತ್ರದ ದರ್ಶನ ಪಾತ್ರಿ ಶ್ರವಣ್ ಬೆಳ್ಚಪ್ಪಾಡ ಅವರ ಕುಟುಂಬಕ್ಕೆ ಏಳನೇ "ನಮೋ ಕುಟೀರ" ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗಿದ್ದು ಫಲಾನುಭವಿ ದಂಪತಿಯ ಮುಖದಲ್ಲಿ ಮೂಡಿದ ಮಂದಹಾಸವೇ ನನ್ನ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆಯೆಂದು ಬಿಜೆಪಿ ಮುಖಂಡರು ಹಾಗೂ ದಿ ಮೈಸೂರು ಇಲೆಕ್ಟ್ರಿಕಲ್ಸ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಕದಲ್ಲಿರುವ ದೊಡ್ಡಮನೆ ತರವಾಡು ಫಲಾನುಭವಿಗಳ ನಿವೇಶನದಲ್ಲಿ ಅಡ್ಕ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ದರ್ಶನ ಪಾತ್ರಿಗಳಾದ ಶ್ರವಣ್ ಬೆಳ್ಚಪ್ಪಾಡ ಅವರ ಕುಟುಂಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ನಿರ್ಮಿಸಿ ಕೊಡುತ್ತಿರುವ ಏಳನೇ(ನಮೋ ಕುಟೀರ) ಮನೆಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದಾನ ಕೊಡಲು ಮತ್ತು ಪಡೆಯಲು ನಮಗೆ ಯೋಗವಿರಬೇಕಷ್ಟೆ. ಇಲ್ಲಿ ಅತಿ ಶೀಘ್ರದಲ್ಲೇ ಸುಂದರವಾದ ಮನೆಯನ್ನು ನಿರ್ಮಿಸಿ, ವಾಸ್ತು ಪೂಜೆ, ಗಣ ಹೋಮ, ಊಟೋಪಚಾರವುಳ್ಳ ಸಂಭ್ರಮದ ಗೃಹಪ್ರವೇಶ ಸಮಾರಂಭವನ್ನು ನಡೆಸಲಾಗುವುದು. ಮನೆಯ ಶಿಲಾನ್ಯಾಸದಿಂದ ಹಿಡಿದು ಗೃಹ ಪ್ರವೇಶದ ಸಂಪೂರ್ಣ ಖರ್ಚನ್ನು ವೈಯಕ್ತಿಕ ನೆಲೆಯಲ್ಲಿ ಭರಿಸಲಾಗುವುದು. ನೂತನ ನಿರ್ಮಾಣಗೊಳ್ಳುವ ಮನೆಯಲ್ಲಿ ಶ್ರವಣ್ ಗುರಿಕಾರರ ಕುಟುಂಬವು ಸಂತೋಷ, ನೆಮ್ಮದಿಯಿಂದ ಬಾಳುವಂತಾಗಲಿ ಎಂದರು.


ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ವೃದ್ಧ ದಂಪತಿಗೆ ನಿರ್ಮಿಸಲಾದ ಮನೆ ಕೇವಲ ಎರಡೂವರೆ ತಿಂಗಳಲ್ಲೇ ಸಂಪೂರ್ಣಗೊಂಡಿದೆ. ನೂತನ ಮನೆಯ ಗೃಹ ಪ್ರವೇಶವು ಇದೇ ಫೆ.25 ರಂದು ನಡೆಯಲಿದೆ. ಅರ್ಹ ಹತ್ತು ಅಶಕ್ತ ಕುಟುಂಬಗಳಿಗೆ ನಮೋ ಕುಟೀರಗಳ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡಿದ್ದು ಅತಿ ಶೀಘ್ರ ಮತ್ತೆ ಮೂರು ಮನೆಗಳ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರೆವೇರಿಸಲಾಗುವುದು. ದೇವರು ಹರಸಿದರೆ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನ ಮುಂದುವರೆಸುವುದಾಗಿ ಸಂತೋಷ್ ಬೋಳಿಯಾರು ಹೇಳಿದರು.
ಕೋಟೆಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ಕ್ಷೇತ್ರದ ಅಧ್ಯಕ್ಷರಾದ ಸುಂದರ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು. ಅಡ್ಕ ಶ್ರೀ ಭಗವತಿ ಕ್ಷೇತ್ರದ ಮೂಲ ಅರ್ಚಕರಾದ ವಸಂತ ಪೂಜಾರಿ, ದರ್ಶನ ಪಾತ್ರಿ ನವೀನ್ ಬೆಳ್ಚಪ್ಪಾಡ, ಅಶೋಕ್ ಕಾರ್ನವರ್, ರಾಜ ಕಾರ್ನವರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ನಾಗೇಶ್ ಕುಂಪಲ, ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯ ಶೆಟ್ಟಿ, ಉಪಾಧ್ಯಕ್ಷರಾದ ಪ್ರವೀಣ್ ಐ.ಬಗಂಬಿಲ, ಪ.ಪಂ ಸದಸ್ಯರಾದ ಸುಜಿತ್ ಮಾಡೂರು, ರಾಘವ ಗಟ್ಟಿ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು, ಸದಸ್ಯರಾದ ಜಯಶ್ರೀ ಉಚ್ಚಿಲ್, ಪ್ರಮುಖರಾದ ನಾರಾಯಣ ಕುಂಪಲ, ಸಮ್ಯಕ್ತ್ ರೈ ಬೋಳಿಯಾರ್, ರಾಜೇಶ್ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am