ಬ್ರೇಕಿಂಗ್ ನ್ಯೂಸ್
12-02-26 09:31 pm HK News Desk ದೇಶ - ವಿದೇಶ
ಪುಣೆ, ಫೆ.12 : 85 ವರ್ಷದ ವೃದ್ಧನಿಗೆ ₹22.03 ಕೋಟಿ ವಂಚಿಸಿದ ಎಂಟು ಮಂದಿ ಸೈಬರ್ ವಂಚಕರನ್ನು ಬಂಧಿಸುವಲ್ಲಿ ಪುಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ನಗರದಲ್ಲಿ ನಡೆದ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣಗಳಲ್ಲಿ ಒಂದಾಗಿದ್ದು, ಪ್ರಕರಣವು 2025ರ ಅಕ್ಟೋಬರ್ 25ರಿಂದ 2026ರ ಜನವರಿ 17ರ ವರೆಗೆ ಹಡಪ್ಸರ್‌ನ ಮಗರಪಟ್ಟ ಪ್ರದೇಶದಲ್ಲಿ ನಡೆದಿದೆ.
ಮೊದಲಿಗೆ ಆರೋಪಿಗಳು ವೃದ್ಧ ವ್ಯಕ್ತಿಯ ವಿಶ್ವಾಸವನ್ನು ಗಳಿಸಿ, ನಂತರ ಅವರನ್ನು ವಾಟ್ಸಾಪ್ ಗುಂಪಿಗೆ ಸೇರಿಸಿ ನಕಲಿ ಹೂಡಿಕೆ ಆ್ಯಪ್ ಡೌನ್‌ಲೋಡ್ ಮಾಡಲು ಪ್ರೇರೇಪಿಸಿದ್ದಾರೆ. ಆ ಆ್ಯಪ್‌ನಲ್ಲಿ ತೋರಿಸಲಾದ ಲಾಭದ ಅಂಕಿ ಅಂಶಗಳಿಂದ ತಾವು ಹಾಕಿರುವ ಹಣ ನಿರಂತರ ಲಾಭದತ್ತ ಸಾಗುತ್ತಿದೆ ಎಂಬ ಭ್ರಮೆಯನ್ನು ವೃದ್ಧನ ಮನಸ್ಸಿನಲ್ಲಿ ಸೃಷ್ಟಿಸಿತ್ತು. ನಕಲಿ ಲಾಭವನ್ನು ನಂಬಿದ ವೃದ್ಧ ಆರೋಪಿಗಳು ಹೇಳಿದಂತೆ ಏಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದರು. ಆದರೆ, ಹೂಡಿಕೆಯ ಮೂಲಧನ ಮತ್ತು ಭರವಸೆ ನೀಡಲಾದ ಲಾಭ ವಾಪಸು ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಸೈಬರ್ ಪೊಲೀಸರ ಮೊರೆ ಹೋಗಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಸ್ವಪ್ನಾಲಿ ಶಿಂದೆ ನೇತೃತ್ವದ ತಂಡ ತಾಂತ್ರಿಕ ವಿಶ್ಲೇಷಣೆ ಮತ್ತು ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಹಣದ ವಹಿವಾಟನ್ನು ಪತ್ತೆಹಚ್ಚಿದ್ದಾರೆ. ವ್ಯಕ್ತಿ ಅಂಬರ್‌ನಾಥ್‌ನ ಯೆಸ್ ಬ್ಯಾಂಕ್ ಖಾತೆಗೆ ₹1 ಕೋಟಿ, ಛತ್ರಪತಿ ಸಂಭಾಜಿನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾತೆಗೆ ₹1.9 ಲಕ್ಷ ಮತ್ತು ಇತರೆ ಖಾತೆಗಳಲ್ಲಿ ₹3.2 ಲಕ್ಷ ಹೂಡಿಕೆ ಜಮಾ ಮಾಡಿದ್ದರು. ಪ್ರಕರಣದಲ್ಲಿ ಮುನಿಲ್ ಸುರೇಂದ್ರಸಿಂಗ್ (51), ಆಕಾಶ್ ಮರಾಠೆ (27), ಲಾಲಾ ಉಮಾಪ್ (26), ಪರಮೇಶ್ವರ ದಾಭಾಡೆ (23), ಸಾಹಿಲ್ ಶಿವಸುದಾರ್ (22), ವಿಶ್ವಜೀತ್ ಖಂಡಾರೆ, ಅಭಿಜಿತ್ ನಾಡೆ (21) ಮತ್ತು ದಿಶಾಂತ್ ಕಾಂಬಳೆ (22) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳಿಂದ ಇದುವರೆಗೆ ₹3.24 ಕೋಟಿ ಮೊತ್ತವನ್ನು ಫ್ರೀಜ್ ಮಾಡಲಾಗಿದೆ.
ಪೊಲೀಸ್ ತನಿಖೆಯಲ್ಲಿ ಸೈಬರ್ ವಂಚನೆ ಪ್ರಕರಣವು ಅಂತರಾಜ್ಯ ಮಟ್ಟದ ಸೈಬರ್ ವಂಚನಾ ಜಾಲದ ಭಾಗವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಉಳಿದ ಹಣ ವಶಪಡಿಸಿಕೊಳ್ಳಲು ಮತ್ತು ಪ್ರಮುಖ ಸೂತ್ರಧಾರರನ್ನು ಪತ್ತೆಹಚ್ಚಲು ತನಿಖೆ ಮುಂದುವರಿಯುತ್ತಿದೆ. ಈ ಘಟನೆ ನಾಗರಿಕರಿಗೆ ಎಚ್ಚರಿಕೆ ನೀಡುವಂತಿದ್ದು, ಸೈಬರ್ ವಂಚನೆ ಮತ್ತು ನಕಲಿ ಹೂಡಿಕೆ ಆಪ್‌ಗಳ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ.
Pune police arrested eight cyber fraudsters for cheating an 85-year-old man of ₹22.03 crore through a fake stock investment app promising high returns. The accused gained his trust via WhatsApp, showed fake profits, and convinced him to transfer money to multiple bank accounts. So far, ₹3.24 crore has been frozen. Police suspect an interstate cyber fraud network and have intensified the investigation.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am