ಬ್ರೇಕಿಂಗ್ ನ್ಯೂಸ್
12-02-26 01:40 pm HK News Desk ದೇಶ - ವಿದೇಶ
ನವದೆಹಲಿ, ಫೆ.12 : ಜೂನ್ 2025ರಲ್ಲಿ ಅಹಮದಾಬಾದ್ ಏರ್‌ಪೋರ್ಟ್‌ನಿಂದ ಟೇಕಾಫ್ ಆದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನವು ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ವಿಮಾನ ಹಾಸ್ಟೆಲ್ ಮೇಲೆ ಪತನಗೊಂಡಿದ್ದರಿಂದ ವಿಮಾನ ಪ್ರಯಾಣಿಕರು ಹಾಗೂ ಹಾಸ್ಟೆಲ್‌ನಲ್ಲಿ ಇರುವ ವಿದ್ಯಾರ್ಥಿಗಳು ಸೇರಿ ಒಟ್ಟು 260 ಜನರ ಜೀವ ಹಾನಿಯಾಗಿತ್ತು. ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಮಾತ್ರ ಪವಾಡ ಸದೃಶ ರೀತಿ ಬದುಕುಳಿದಿದ್ದರು.
ಘಟನೆ ನಡೆದು ಒಂಬತ್ತು ತಿಂಗಳು ಕಳೆದಿದ್ದರೂ ಘಟನೆಗೆ ನಿಖರ ಕಾರಣ ಏನು ಎಂಬುದು ಮಾತ್ರ ತಿಳಿದುಬಂದಿಲ್ಲ. ಇದೀಗ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿ ಮತ್ತು ಇಟಾಲಿಯನ್ ದಿನಪತ್ರಿಕೆ Corriere della Sera ವರದಿ ಅನ್ವಯ, ಈ ಪತನ ತಾಂತ್ರಿಕ ದೋಷದಿಂದ ಉಂಟಾಗಿಲ್ಲ, ಬದಲಾಗಿ ಉದ್ದೇಶಪೂರ್ವಕ ಕೃತ್ಯ ಆಗಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
AAIB ವರದಿ ಪೈಲಟ್‌ಗಳ ಕಾಕ್‌ಪಿಟ್ ಸಂಭಾಷಣೆಗಳನ್ನು ಒಳಗೊಂಡಿದ್ದು, ಓರ್ವ ಪೈಲಟ್ "ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಾ?" ಎಂದು ಕೇಳಿದರೆ, ಇನ್ನೊಬ್ಬ ಉತ್ತರವಾಗಿ "ನಾನು ಹಾಗೆ ಮಾಡಿಲ್ಲ" ಎಂದು ಪ್ರತಿಕ್ರಿಯಿಸಿದ್ದರು. ಈ ಸಂಭಾಷಣೆಗಳು ಪತನದ ಹಿನ್ನೆಲೆ ಕುರಿತು ಉದ್ದೇಶಪೂರ್ವಕ ಕೃತ್ಯದ ಬಗ್ಗೆ ಅನುಮಾನ ಹುಟ್ಟಿಸಿದೆ.
ವಿಮಾನವು ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಳ್ಳುವುದರಿಂದ ಪತನಗೊಂಡಿದೆ, ಆದರೆ ಯಾವುದೇ ತಾಂತ್ರಿಕ ದೋಷ ಕಾರಣವಾಗಿಲ್ಲ ಎಂದು ಭಾರತೀಯ ತನಿಖಾಧಿಕಾರಿಗಳು ನಿರ್ಣಯಿಸಿದ್ದಾರೆ. ಭಾರತದ ತಂಡದೊಂದಿಗೆ ಅಮೆರಿಕದ ತಜ್ಞರು ಸಹಾಯ ನೀಡುತ್ತಿದ್ದಾರೆ.
ತನಿಖಾಧಿಕಾರಿಗಳು ಅಂತಿಮ ನಿರ್ಣಯಕ್ಕೆ ಬರಲು ಸಮಯ ಬೇಕಾಗಿದ್ದು, ಈ ಬಗ್ಗೆ ತಜ್ಞರ ಜೊತೆಗೆ ಚರ್ಚೆಗಳು ನಡೆಯುತ್ತಿವೆ. ಪತನದ ವೇಳೆಯ ಕೊನೆಯ ಮಾತುಕತೆಗಳು, ತಾಂತ್ರಿಕ ವೈಫಲ್ಯಗಳು, ಉದ್ದೇಶಪೂರ್ವಕ ಕೃತ್ಯದ ಸಾಧ್ಯತೆ ಕುರಿತಾಗಿ ಅಂತಿಮ ವರದಿಯೊಂದಿಗೆ ಸ್ಪಷ್ಟನೆ ಸಿಗಲಿದೆ.
The 2025 Ahmedabad Air India Dreamliner crash that claimed 260 lives may have been caused by fuel supply being cut off, not a technical failure, according to preliminary findings. Cockpit voice recordings have raised suspicions of possible deliberate action, though investigators say the final conclusion is yet to be made.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am