ಬ್ರೇಕಿಂಗ್ ನ್ಯೂಸ್
16-09-20 12:22 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟೆಂಬರ್ 16: ಚೀನಾ - ಭಾರತ ನಡುವೆ 'ಗಡಿಬಿಡಿ' ಆಗಿರೋದಕ್ಕೂ ಕರಾವಳಿಯ ಮೀನು ಉದ್ಯಮಕ್ಕೂ ಏನು ಸಂಬಂಧ ಹೇಳಿ.. ಗಡಿ ಸಂಕಷ್ಟಕ್ಕೂ ನಮ್ಮ ಕಡಲ ಮಕ್ಕಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತ ನೀವು ಕೇಳಬಹುದು. ಆದರೆ, ಅಲ್ಲಿ ಸಂಕಷ್ಟ ಆಗಿರೋದಕ್ಕೂ ಇಲ್ಲಿನ ಮೀನುಗಾರಿಕೆಗೂ ಸಂಬಂಧ ಇದೆ ಕಣ್ರೀ.. ಹೌದು.. ಅದೇ ಈಗ ನಮ್ಮ ಕಡಲ ಮಕ್ಕಳ ಉದ್ಯಮಕ್ಕೆ ಹೊಸ ಸಂಕಷ್ಟ ತಂದಿಟ್ಟಿದೆ.

ಈಗಾಗ್ಲೇ ಕೊರೊನಾ ಭೀತಿ, ಲಾಕ್ಡೌನ್ ಬಿಕ್ಕಟ್ಟು, ಕಾರ್ಮಿಕರ ಕೊರತೆಯಿಂದ ಶೋಚನೀಯ ಸ್ಥಿತಿಗೆ ಮುಟ್ಟಿರುವ ಮೀನುಗಾರಿಕೆ ಉದ್ಯಮಕ್ಕೆ ಹೊಸ ತಲೆನೋವು ಶುರುವಾಗಿದೆ. ಅದೇ ಚೀನಾ ಜೊತೆಗಿನ ಭಾರತದ ಶೀತಲ ಸಮರ. ಉಭಯ ರಾಷ್ಟ್ರಗಳು ವಾಣಿಜ್ಯ ನಿರ್ಬಂಧ ಹೆಸರಲ್ಲಿ ತಂಟೆ ಶುರು ಮಾಡ್ಕೊಂಡ್ರೆ ಮೀನು ವಹಿವಾಟನ್ನೇ ನಂಬ್ಕೊಂಡಿರೋ ಅದೆಷ್ಟೋ ಮಂದಿಗೆ ಈ ಬಾರಿಯೂ ಅಧೋಗತಿಯೇ ಸರಿ. ಇಷ್ಟಕ್ಕೂ ಕರಾವಳಿಯಿಂದ ಚೀನಾಕ್ಕೆ ಎಷ್ಟರಮಟ್ಟಿಗೆ ಮೀನು ಸಪ್ಲೈ ಆಗ್ತಿತ್ತು ಅಂತೀರಾ..
ಕರ್ನಾಟಕ ರಾಜ್ಯದಿಂದ ವರ್ಷಕ್ಕೆ ಸುಮಾರು 1 ಸಾವಿರ ಕಂಟೈನರ್ ಮೀನು ಚೀನಾಕ್ಕೆ ರಫ್ತು ಆಗ್ತಾ ಇತ್ತು. ಕಂಟೈನರ್ ಒಂದರಲ್ಲಿ ಥರಾವರಿ ಮೀನುಗಳಿದ್ದ 25 ಟನ್ ಮೀನು ಇರುತ್ತಿತ್ತು. ಆದರೆ, ಕೊರೋನಾ ವಕ್ಕರಿಸಿದ ಬಳಿಕ ಮೀನು ರಫ್ತೇ ಆಗಿಲ್ಲ. ಚೀನಾ ಬಿಡಿ, ಯಾವ ದೇಶಕ್ಕೂ ಹೋಗೇ ಇಲ್ಲ. ಹೀಗಾಗಿ ವಿದೇಶಕ್ಕೆ ರಫ್ತು ಆಗುತ್ತಿದ್ದ ಮೀನು ವಹಿವಾಟಿಗೆ ಭಾರೀ ಹೊಡೆತ ಬಿದ್ದಿದೆ.

ಇನ್ನು ಮೀನು ವಹಿವಾಟಿನದ್ದು ಕರಾವಳಿಗಿಂತಲೂ ವಿದೇಶದ್ದೇ ದೊಡ್ಡ ಮೊತ್ತ.. ಚೀನಾ ಸೇರಿ ಹಲವು ದೇಶಗಳಿಗೆ, ವರ್ಷಕ್ಕೆ ಏನಿಲ್ಲ ಅಂದ್ರೂ 1600 - 2 ಸಾವಿರ ಕೋಟಿ ಮೊತ್ತದ ಮೀನು ರಫ್ತಾಗತ್ತೆ. ಆದರೆ ಕಳೆದ ಆರು ತಿಂಗಳಲ್ಲಿ ಕೊರೋನಾ ಕಾಟ ಮೀನು ರಫ್ತಿನ ವಹಿವಾಟನ್ನೇ ಕಸಿದುಕೊಂಡಿದೆ. ಶೇಖರಿಸಿಟ್ಟ ಮೀನನ್ನು ರಫ್ತು ಮಾಡಲಾಗದೆ ಕರಾವಳಿಯ ಎಲ್ಲ ಸ್ಟೋರೇಜ್ ಮಾಲಕರು ಈ ಬಾರಿ ಮಳೆಗಾಲದಲ್ಲಿ ಮೀನು ಖಾಲಿ ಮಾಡೋದು ಹೇಗೆ ಅಂತಲೇ ತಲೆಕೆಡಿಸಿಕೊಂಡಿದ್ದರು. ಇತ್ತ ಮೀನುಗಾರಿಕೆಯೂ ಇಲ್ಲದ್ದರಿಂದ ಅಷ್ಟೂ ಸ್ಟೋರೇಜ್ ಫ್ಯಾಕ್ಟರಿಗಳಲ್ಲಿ ಶೇಖರಿಸಿಟ್ಟಿದ್ದ ಮೀನನ್ನು ಅಷ್ಟಿಷ್ಟಾಗಿಯೇ ಮಾರುಕಟ್ಟೆಗೆ ಬಿಟ್ಟು ಖಾಲಿ ಮಾಡಿದ್ರು. ಉಡುಪಿ ಹೊರತುಪಡಿಸಿ, ಬರೀ ಮಂಗಳೂರಿನಲ್ಲೇ ಮೀನು ರಫ್ತಿಗೆ ಅಂತಲೇ ಮಾಡಿರುವ 12 ರಷ್ಟು ಕೋಲ್ಡ್ ಸ್ಟೋರೇಜ್ ಫ್ಯಾಕ್ಟರಿಗಳಿವೆ. ಉಡುಪಿಯಲ್ಲೂ 10 ರಷ್ಟು ಇಂಥ ಸ್ಟೋರೇಜ್ ಘಟಕಗಳಿವೆ. ಆದರೆ ಇವೆಲ್ಲಕ್ಕೂ ಚೀನಾವೇ ದೊಡ್ಡ ಮಾರುಕಟ್ಟೆ.. ಕೊರೊನಾ ಬಿಕ್ಕಟ್ಟು ಕಳೆದು ಕೊನೆಗೂ ಮೀನುಗಾರಿಕೆ ಆಯ್ತು ಅಂದ್ಕೊಂಡ್ರೂ ಚೀನಾ ಗಡಿ ತಂಟೆ ಶುರು ಮಾಡಿರೋದು ಕೋಲ್ಡ್ ಸ್ಟೋರೇಜ್ ಮತ್ತು ಬೋಟ್ ಇರೋ ಉದ್ಯಮಿಗಳಲ್ಲಿ ಹೊಸ ತಲೆನೋವು ಶುರು ಹಚ್ಚಿದೆ. ಆರು ತಿಂಗಳ ನಷ್ಟವನ್ನು ಸರಿದೂಗಿಸೋ ಕನಸು ಕಂಡಿದ್ದ ಮಾಲಕರ ಕನಸು ಮತ್ತೆ ನುಚ್ಚುನೂರಾಗೋ ಸಾಧ್ಯತೆ ಕಂಡಿದೆ. ಈಗಾಗ್ಲೇ ಚೀನಾದ ಇಲೆಕ್ಟ್ರಾನಿಕ್ ವಹಿವಾಟಿಗೆ ಬ್ರೇಕ್ ಹಾಕಲು ಭಾರತ ಮುಂದಡಿ ಇಟ್ಟಿದೆ. ಹಾಗೆಯೇ ಭಾರತದಿಂದ ಆಹಾರ ವಸ್ತುಗಳ ಪೂರೈಕೆಗೆ ಚೀನಾ ಬ್ರೇಕ್ ಹಾಕಿದ್ರೆ ಅದ್ರ ನೇರ ಎಫೆಕ್ಟ್ ನಮ್ಮ ಮೀನು ವಹಿವಾಟಿಗೂ ತಟ್ಟಲಿದೆ.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm