ಬ್ರೇಕಿಂಗ್ ನ್ಯೂಸ್
15-09-20 04:11 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟೆಂಬರ್ 15: ಅದು ಮಾಜಿ ಮುಖ್ಯಮಂತ್ರಿ ಒಬ್ಬರ ತವರೂರು. ಮೇಲಾಗಿ ಆ ಕ್ಷೇತ್ರದ ಶಾಸಕರದ್ದೇ ಊರು. ಅಲ್ಲಿನ ಮಂದಿ ಸಚಿವರು, ಸಂಸದರಾಗಿದ್ದಾರೆ. ಅಲ್ಲಿನ ಮಂದಿ ರಾಜ್ಯದ ಉನ್ನತ ಅಧಿಕಾರದ ಹುದ್ದೆಗಳನ್ನೂ ಪಡೆದಿದ್ದಾರೆ. ಈಗಿನ ಶಾಸಕರಿಗಂತೂ ಈ ಗ್ರಾಮವೇ ಹುಟ್ಟೂರು. ಇದೆಲ್ಲ ಹೆಗ್ಗಳಿಕೆ ಇದ್ದರೇನು ಬಂತು, ಕುಗ್ರಾಮದ ಜನರ ಬಹುಕಾಲದ ಬೇಡಿಕೆ ಮಾತ್ರ ಈಡೇರಲೇ ಇಲ್ಲ. 40 ವರ್ಷಗಳಿಂದ ಜನರು ಕೂಗು ಹಾಕಿದ್ದೇ ಬಂತು. ಈ ಬಾರಿ ಮಾತ್ರ ರೊಚ್ಚಿಗೆದ್ದಿರುವ ಅಲ್ಲಿನ ಜನ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
ಅದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೇಬಂಡಾಡಿ ಸಮೀಪದ ಅಗರಿ ಎಂಬ ಕುಗ್ರಾಮ. ಅಲ್ಲಿ 12 ದಲಿತ ಕುಟುಂಬಗಳು ವಾಸ್ತವ್ಯವಿದ್ದರೆ, 25ಕ್ಕೂ ಹೆಚ್ಚು ಇತರ ಕುಟುಂಬಗಳಿವೆ. ಉಪ್ಪಿನಂಗಡಿ - ಕಡಬ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲು ಇಲ್ಲಿನ ಜನ ಕಿರು ಹೊಳೆ ಒಂದನ್ನು ದಾಟಿ ಹೋಗಬೇಕು. ಮಳೆಗಾಲದಲ್ಲಿ ದ್ವೀಪದಂತಾಗುವ ಈ ಭಾಗದ ಜನರು ಒಂದು ಸೇತುವೆಗಾಗಿ ಪಡಬಾರದ ಕಷ್ಟ ಅನುಭವಿಸಿದ್ದಾರೆ. ಸೇತುವೆಗಾಗಿ ಇಲ್ಲಿನ ಜನ ಕಳೆದ ನಾಲ್ಕು ದಶಕಗಳಿಂದ ಮನವಿ ನೀಡುತ್ತಲೇ ಇದ್ದಾರೆ. ಆದರೆ ಯಾವ ಅಧಿಕಾರಿಗಳೂ, ಜನಪ್ರತಿನಿಧಿಗಳು ಈ ಜನತೆಯ ಕೂಗಿಗೆ ಓಗೊಟ್ಟಿಲ್ಲ.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪುತ್ತೂರಿನ ಶಾಸಕರಿದ್ದಾಗ ಅಗರಿ ದಲಿತ ಕಾಲೊನಿ ಸಂಪರ್ಕಿಸುವ ರಸ್ತೆಗೆ ಸೇತುವೆ ನಿರ್ಮಾಣ ಮಾಡುವಂತೆ ಈ ಭಾಗದ ಜನ ಮನವಿ ನೀಡಲು ಆರಂಭಿಸಿದ್ದರು. ನಂತರ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಶಾಸಕರಾದಾಗಲೂ ಮನವಿ ನೀಡಲಾಗಿತ್ತು. ಇದೀಗ ಇದೇ ಗ್ರಾಮದ ನಿವಾಸಿ ಸಂಜೀವ ಮಠಂದೂರು ಪುತ್ತೂರಿನಲ್ಲಿ ಶಾಸಕರಾಗಿದ್ದಾರೆ. ಅವರಿಗೂ ಎರಡು ಬಾರಿ ಇಲ್ಲಿನ ಜನತೆ ಮನವಿ ಮಾಡಿದ್ದಾರೆ. ಶಾಸಕರಾಗಿದ್ದ ಡಿವಿ ಮುಖ್ಯಮಂತ್ರಿಯಾದರೂ ಊರ ಜನರ ಗೋಳು ಕೇಳಲೇ ಇಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಯಡಿಯೂರಪ್ಪ ಅವರಿಗೂ ಇಲ್ಲಿನ ಜನತೆ ವಿಧಾನಸಭೆಯ ಮೆಟ್ಟಲು ಹತ್ತಿ ಸೇತುವೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಇಲ್ಲಿನ ಜನತೆಯ ಎಲ್ಲಾ ಕೆಲಸಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗಾಗಿದೆ. ಯಾವ ಪಕ್ಷದ ಜನಪ್ರತಿನಿಧಿಗಳು ಕೂಡ ಜನರ ಮನವಿಗೆ ಸ್ಪಂದಿಸಲೇ ಇಲ್ಲ..

ಸುಮಾರು 35 ಕ್ಕೂ ಹೆಚ್ಚು ಕುಟುಂಬಗಳು ಬಳಸುವ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಯಾಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಈ ನಡುವೆ ಹಲವು ವರ್ಷಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಟ್ಟದ ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆಯಲ್ಲೂ ಈ ಸೇತುವೆಗಾಗಿ ಇಲ್ಲಿನ ಸ್ಥಳೀಯರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಿರುಹೊಳೆಯನ್ನು ಶಾಲಾ ಮಕ್ಕಳು ದಾಟಲು ಹರಸಾಹಸ ಪಡಬೇಕು. ಜನರು ಹಾಲು ಸೊಸೈಟಿಗೆ ತರಬೇಕಾದರೆ ಸುಮಾರು 6 ಕಿಮೀ ದೂರ ಸುತ್ತಬೇಕು. ಅನಾರೋಗ್ಯಕ್ಕೆ ಈಡಾದರೆ ಆಸ್ಪತ್ರೆಗೆ ಒಯ್ಯುವುದಕ್ಕೂ ರಸ್ತೆ ಇಲ್ಲ. ವಾಹನ ಇಲ್ಲದೆ ಹೊತ್ತೊಯ್ಯಬೇಕಾದ ಪ್ರಸಂಗ ಬರುತ್ತದೆ. ಇಷ್ಟೊಂದು ಅವ್ಯವಸ್ಥೆ ತುಂಬಿರುವ ಈ ಹಳ್ಳಿಯ ಜನರ ಸೇತುವೆ ಬೇಡಿಕೆ ಬಗ್ಗೆ ಆಡಳಿತ ಅಸಡ್ಡೆ ವಹಿಸಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳ ವಿರುದ್ಧ ಈಗ ಜನ ತಿರುಗಿ ಬಿದ್ದಿದ್ದು ಮುಂದಿನ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪಂಚಾಯತ್ ಚುನಾವಣೆ ಬಹಿಷ್ಕರಿಸಿದರೆ ಹೆಚ್ಚು ಬಿಸಿ ಮುಟ್ಟಬಹುದೆಂಬ ಲೆಕ್ಕಾಚಾರದಲ್ಲಿ ಜನ ಇದ್ದಾರೆ.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm