ಬ್ರೇಕಿಂಗ್ ನ್ಯೂಸ್
07-10-21 01:05 pm Mangaluru Correspondent ಕರಾವಳಿ
ಮಂಗಳೂರು, ಅ.7: ಹಿಂದುಗಳನ್ನು ಅನ್ಯಧರ್ಮೀಯರ ವಿರುದ್ಧ ಎತ್ತಿಕಟ್ಟುವ ರೀತಿ ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಅ.5ರಂದು ಬಜರಂಗದಳ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯಲ್ಲಿ ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿದ್ದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿ, ಚೈತ್ರಾ ಕುಂದಾಪುರ ಮತ್ತು ಕಾರ್ಯಕ್ರಮ ಹಮ್ಮಿಕೊಂಡ ಬಜರಂಗದಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತುಳುನಾಡಿನ ವೀರಪುರುಷರಾದ ಕೋಟಿ, ಚೆನ್ನಯರ ಸುರ್ಯವನ್ನು ಬಜರಂಗದಳ ಕಾರ್ಯಕರ್ತರ ತಲ್ವಾರಿಗೆ ಹೋಲಿಸಿದ್ದು ಅಕ್ಷಮ್ಯ. ಇದು ತುಳುವರ ಧಾರ್ಮಿಕ ನಂಬಿಕೆಗೆ ಘಾಸಿ ಉಂಟು ಮಾಡುವ ಪ್ರಯತ್ನ. ಈಕೆಯ ಭಾಷಣದಿಂದ ಎರಡು ಧರ್ಮಗಳ ನಡುವೆ ದ್ವೇಷ ಹರಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಯಿದೆ. ಒಂದು ಕೋಮಿನ ಜನರನ್ನು ಅವಮಾನಿಸಿದ್ದಲ್ಲದೆ, ಇನ್ನೊಂದು ಕೋಮಿನ ವಿರುದ್ಧ ಎತ್ತಿಕಟ್ಟುವ ರೀತಿ ಭಾಷಣ ಮಾಡಿರುವ ಚೈತ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೊಂಡಾಲ ಚಿತ್ತರಂಜನ್ ಶೆಟ್ಟಿ ಆಗ್ರಹಿಸಿದ್ದಾರೆ.

ಇದಲ್ಲದೆ, ಕಾಂಗ್ರೆಸ್ ಪಕ್ಷದ ಬಂಟ ಸಮುದಾಯಕ್ಕೆ ಸೇರಿದ ಮಾಜಿ ಸಚಿವರೊಬ್ಬರ ಮಗಳು ಮುಸ್ಲಿಂ ಯುವಕನ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಆತನನ್ನು ಮದುವೆಯಾಗಲು ಹಠ ಹಿಡಿದಿದ್ದಾಳೆಂದು ಭಾಷಣದಲ್ಲಿ ಉಲ್ಲೇಖಿಸಿ, ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಬಗ್ಗೆ ಸುಳ್ಳು ಮಾಹಿತಿಯನ್ನು ಸಾರ್ವಜನಿಕವಾಗಿ ಹೇಳಿ, ಅವಮಾನಿಸಿದ್ದು ಅತ್ಯಂತ ಕೆಟ್ಟ ನಡವಳಿಕೆಯಾಗಿದೆ. ಇದರಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು. ಪೊಲೀಸರ ಸಮ್ಮುಖದಲ್ಲಿಯೇ ಈ ರೀತಿಯ ಹೇಳಿಕೆ ನೀಡಿರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚಿತ್ತರಂಜನ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಅಬ್ದುಲ್ ಖಾದರ್ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಚೋದನಾತ್ಮಕ ಭಾಷಣದ ಮೂಲಕ ಒಂದು ಸಮುದಾಯವನ್ನು ನಿಂದಿಸಿರುವ ಚೈತ್ರಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಕೂಡ ಪ್ರಚೋದನಕಾರಿ ಮತ್ತು ಸಮುದಾಯವನ್ನು ಎತ್ತಿಕಟ್ಟುವ ರೀತಿ ಹೇಳಿಕೆ ನೀಡಿರುವ ಚೈತ್ರಾ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Hindu right-wing orator Chaitra Kundapura speech in Mangaluru at Surathkal hasww sparked controversy. She spoke about love jihad and religious conversions and said we need to wake up.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm