ಬ್ರೇಕಿಂಗ್ ನ್ಯೂಸ್
28-04-21 05:55 pm Mangalore Correspondent ಕರಾವಳಿ
ಮಂಗಳೂರು, ಎ.28: ಲಾಕ್ಡೌನ್ ಅಂದ್ರೆ, ಅತ್ತ ಮನೆಯೂ ಇಲ್ಲ. ಅತ್ತ ಕೆಲಸಕ್ಕೆ ಹೋಗದೆ ಇರುವಂತೆಯೂ ಇಲ್ಲ ಎನ್ನುವ ಸ್ಥಿತಿ ಪೊಲೀಸರದ್ದು. ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರಿಗೆ ಊಟ, ನಿದ್ದೆ, ನೀರು ಕೂಡ ಸಕಾಲಕ್ಕೆ ಸಿಗುವುದಿಲ್ಲ. ರಾತ್ರಿ ವೇಳೆ, ಬೀದಿ ಕಾಯಬೇಕಾದ ಪೊಲೀಸರು ಸೊಳ್ಳೆ ಕಚ್ಚಿಸಿಕೊಂಡು ಕೊರೊನಾ ಕಾಟವನ್ನೂ ಸಹಿಸಿಕೊಂಡು ಕರ್ತವ್ಯ ಮಾಡಬೇಕಾಗುತ್ತದೆ. ಆದರೆ, ಈ ಬಾರಿ ಮಧ್ಯಾಹ್ನ ಮತ್ತು ರಾತ್ರಿಗೆ ಸಕಾಲದಲ್ಲಿ ಊಟ ಒದಗಿಸುವ ವ್ಯವಸ್ಥೆಗೆ ಪೊಲೀಸ್ ಕಮಿಷನರ್ ಮುಂದಾಗಿದ್ದಾರೆ.









ಈಗಾಗ್ಲೇ ಮಧ್ಯಾಹ್ನದ ಊಟವನ್ನು ಕಮಿಷನರ್ ಕಟೇರಿಯ ಪೊಲೀಸ್ ಗ್ರೌಂಡಿನಲ್ಲಿ ನಡೆಸಲಾಗುತ್ತಿದೆ. ಇಂದು ಸಂಜೆಯಿಂದ ಇಸ್ಕಾನ್ ಸಂಸ್ಥೆಯ ವತಿಯಿಂದ ರಾತ್ರಿ ಊಟವನ್ನೂ ಅಲ್ಲಿಯೇ ಕೊಡಲಾಗುತ್ತಿದೆ. ಮಂಗಳೂರಿನ ಇಸ್ಕಾನ್ ಸಂಸ್ಥೆಯ ಕುಡುಪುಕಟ್ಟೆ ಜಗನ್ನಾಥ ಮಂದಿರದ ವತಿಯಿಂದ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮೊದಲ ದಿನ 300 ಮಂದಿಗೆ ಊಟಕ್ಕೆ ಸೋಯಾ ಪುಲಾವ್ ರೆಡಿ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ಕುಡುಪುಕಟ್ಟೆ ಜಗನ್ನಾಥ ಮಂದಿರದ ಟ್ರಸ್ಟಿ ಲಕ್ಷ್ಮೀಕಾಂತ್ ಕಾಮತ್, ಪೊಲೀಸರು ಕೊರೊನಾ ವಾರಿಯರ್ಸ್ ಆಗಿದ್ದು ಅವರಿಗೆ ಊಟ ಕೊಡುತ್ತಿರುವುದು ತುಂಬ ಖುಷಿ ನೀಡಿದೆ. ಊಟ ನೀಡುವುದಕ್ಕಾಗಿ ನಾವು ಕಮಿಷನರನ್ನು ಭೇಟಿಯಾದಾಗ ರಾತ್ರಿ ಊಟಕ್ಕೆ ಒಪ್ಪಿಕೊಂಡಿದ್ದಾರೆ. ನಮ್ಮದು ಪವಿತ್ರ ಪ್ರಸಾದ, ದಿನವೂ ಲಕ್ಷಾಂತರ ಮಂದಿಗೆ ಅನ್ನ ಪ್ರಸಾದ ಕೊಡುತ್ತೇವೆ. ಇದರ ಜೊತೆಗೆ ಮಂಗಳೂರಿನಲ್ಲಿ ಪೊಲೀಸರಿಗೆ ಸೇವೆ ಮಾಡುವ ಖುಷಿ ಸಿಕ್ಕಿದೆ, ದಿನವೂ ವೆರೈಟಿ ಕೊಡುವುದು ನಮ್ಮ ಸ್ಪೆಷಾಲಿಟಿ ಎಂದು ಹೇಳಿದರು.
Also Read: ಹೊಟೇಲ್, ಕ್ಯಾಂಟೀನ್ ಇಲ್ಲವೆಂದು ಪರದಾಟ ಬೇಡ, ಪೊಲೀಸರಿಗೆ ಮೈದಾನದಲ್ಲೇ ಊಟ ರೆಡಿ !
Free dinner arrangements made for the police personnel during covid pandemic lockdown was launched at the police commissionerate office grounds by Iskon Kudupukatte was inaugurated along with City Police Commissioner Shahsi Kumar.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm