ಬ್ರೇಕಿಂಗ್ ನ್ಯೂಸ್
18-02-26 10:24 pm Mangaluru Staffer ಕರಾವಳಿ
ಮಂಗಳೂರು, ಫೆ.18: ಸೋಲಾರ್ ಪ್ಯಾನಲ್ಗಳಿಂದಲೇ ಕಟ್ಟಡವನ್ನು ನಿರ್ಮಾಣ ಮಾಡಿ, ಅದರಿಂದ ವಿದ್ಯುತ್ ಉತ್ಪಾದನೆ ಮಾಡುವ ಇಟಲಿ ಮೂಲದ ಮೀರ್ ಗ್ರೂಪ್ ಕಂಪನಿಯು ಭಾರತದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದ್ದು, ಇದೇ ಫೆ.21ರಂದು ಮಂಗಳೂರು ಎಸ್ಇಝೆಡ್ ವ್ಯಾಪ್ತಿಯಲ್ಲಿ ಘಟಕದ ಶಿಲಾನ್ಯಾಸ ನಡೆಯಲಿದೆ.
ಇದೇ ವೇಳೆ, ಫೆ.20ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಮೀರ್ ನೆಟ್ ಝೀರೋ -ವಿಶನ್ 2047 ಎನ್ನುವ ಪರಿಕಲ್ಪನೆಯಡಿ ಕಾರ್ಬನ್ ಮಾಲಿನ್ಯ ರಹಿತ ಭವಿಷ್ಯದ ನಗರಗಳು ಎಂಬ ವಿಚಾರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಇಟಲಿ ಸೇರಿದಂತೆ ವಿವಿಧ ದೇಶಗಳ ಖಾಸಗಿ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶ್ರೀಪಾದ್ ನಾಯ್ಕ್, ರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಆರ್ ಇಡಿಎಲ್ ಚೇರ್ಮನ್ ಟಿಡಿ ರಾಜೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ನಗರದಲ್ಲಿ ಮೀರ್ ಗ್ರೂಪ್ ಕಂಪನಿಯ ಗಲ್ಫ್ ವಿಭಾಗದ ಡೈರೆಕ್ಟರ್, ಮಂಗಳೂರಿನವರೇ ಆದ ನಿತಿಕ್ ರತ್ನಾಕರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಉದ್ಯಮ ಹೂಡಿಕೆ ಕುರಿತಾಗಿ ಖಾಸಗಿ ಕಂಪನಿಯೊಂದು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಮಾವೇಶ ಏರ್ಪಡಿಸಿದ್ದಲ್ಲದೆ, ವಿದೇಶಿ ಕಂಪನಿಗಳನ್ನು ಹೂಡಿಕೆ ಮಾಡುವಂತೆ ಆಕರ್ಷಿಸಲು ಮುಂದಾಗಿದೆ. ತನ್ನ 1500 ಕೋಟಿ ಹೂಡಿಕೆಯ ಜೊತೆಗೆ, ಇತರೇ ಕಂಪನಿಗಳನ್ನೂ ದೊಡ್ಡ ಮೊತ್ತದ ಹೂಡಿಕೆ ಮಾಡುವಂತೆ ಮಂಗಳೂರಿನಲ್ಲೇ ಸಮಾವೇಶ ಏರ್ಪಡಿಸಿದೆ.
ನೆಟ್ ಝೀರೋ ಇಕಾನಮಿ ಹೆಸರಲ್ಲಿ ಮಾಲಿನ್ಯ ರಹಿತ ನಗರಗಳನ್ನು ಸೃಷ್ಟಿಸಲು ರೋಮ್ ಟು ನ್ಯೂ ಡೆಲ್ಲಿ ಹೆಸರಲ್ಲಿ ವಿಭಿನ್ನ ರೀತಿಯ ಗೋಷ್ಟಿಗಳನ್ನು ಇಟ್ಟುಕೊಂಡಿದ್ದು, ದೇಶ- ವಿದೇಶದ ವಿಷಯ ತಜ್ಞರು, ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಸೋಲಾರ್ ಪ್ಯಾನಲ್ ಆಧರಿತ ಉತ್ಪನ್ನಗಳು, ಕಾರ್ಬನ್ ರಹಿತ ಅಭಿವೃದ್ಧಿ ಪರಿಕಲ್ಪನೆಗಳು, ಸೂರ್ಯ ಶಕ್ತಿಯನ್ನು ಬಳಸಿಕೊಂಡು ಉದ್ಯಮ ಸೃಷ್ಟಿ, ಇಟಾಲಿಯನ್ ಡಿಸೈನ್ ಬಗ್ಗೆ ಇಂಜಿನಿಯರಿಂಗ್, ಸೋಲಾರ್ ಇಂಟಗ್ರೇಶನ್ ಮತ್ತು ಗ್ಲಾಸ್ ಟೆಕ್ನಾಲಜಿ, ಪರ್ಯಾಯ ಇಂಧನಗಳ ಕುರಿತಾಗಿ ಗೋಷ್ಟಿ- ಚರ್ಚೆಗಳು ನಡೆಯಲಿವೆ.


ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳು, ಸುರತ್ಕಲ್ ಎನ್ಐಟಿಕೆ ಪ್ರಾಧ್ಯಾಪಕರು ಸೇರಿದಂತೆ ಅಲ್ಲಿನ ಮತ್ತು ಇತರೇ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಬ್ಯಾಕ್ ಟು ಊರು ಪರಿಕಲ್ಪನೆಯಡಿ ವಿದೇಶದಲ್ಲಿ ಕಂಪನಿಗಳನ್ನು ಕಟ್ಟಿರುವ ಮಂಗಳೂರು ಮೂಲದ ಉದ್ಯಮಿಗಳು ಮರಳಿ ಊರಿಗೆ ಬಂದು ಉದ್ಯಮಗಳನ್ನು ಬೆಳೆಸಲು ಮುಂದಾಗಿದ್ದು ಇದೇ ಆಧಾರದಲ್ಲಿ ಮೀರ್ ಗ್ರೂಪ್ ಒಂದು ವರ್ಷದ ಹಿಂದೆಯೇ ಮಂಗಳೂರು ಎಸ್ಇಝೆಡ್ ಜೊತೆಗೆ 1500 ಕೋಟಿ ಮೊತ್ತದ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ಎಸ್ಇಝೆಡ್ ನಲ್ಲಿ 40 ಎಕ್ರೆ ಜಾಗವನ್ನು ಕಂಪನಿಗೆ ಕೊಡಲಾಗಿದೆ. ಒಂದು ವರ್ಷ ಕಾಲ ಭಾರತ ಸರಕಾರದ ಜೊತೆಗಿನ ಒಪ್ಪಂದ ಮತ್ತು ಇನ್ನಿತರ ಒಪ್ಪಂದಗಳ ಬಳಿಕ ಇದೀಗ ಫೆ.21ರಂದು ಮಂಗಳೂರು ಬಿಷಪ್ ಮೂಲಕ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನಡೆಸುತ್ತಿದೆ.
ಸುದ್ದಿಗೋಷ್ಟಿಯಲ್ಲಿ ಮೀರ್ ಗ್ರೂಪ್ ಸಿಇಓ ರಫೇಲೆ ಮರಾಝೋ, ಮೀರ್ ಗ್ರೂಪ್ ಸಂಸ್ಥೆಯ ಸಾಯಿ ಚಂದು, ಲಾಂಡ್ರಿಯಾ ಲಾ ಮರ್ಸಾ, ಗೌರವ್ ಹೆಗ್ಡೆ, ಸಿಎ ನಿತಿನ್ ಶೆಟ್ಟಿ ಉಪಸ್ಥಿತರಿದ್ದರು.
Join our WhatsApp Group for regular news updates and exclusive stories from Headline Karnataka:
https://t.ly/yCmFN
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 10:19 am
HK News Staffer
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm