ಬ್ರೇಕಿಂಗ್ ನ್ಯೂಸ್
16-02-26 11:06 pm Mangaluru Staffer ಕರಾವಳಿ
ಮಂಗಳೂರು, ಫೆ.16: ನಗರದ ಪದವು ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಿರುವ ನೂತನ ರಂಗಮಂಟಪ ಹಾಗೂ ಇಟರ್ಲಾಕ್ ಸೌಕರ್ಯವನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕಾಮತ್, 'ಕಲಿತ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಭಾವನೆ ಇದ್ದರೆ, ಆ ಶಿಕ್ಷಣ ಸಂಸ್ಥೆ ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಶಾಲೆ ಉದಾಹರಣೆ. ಐದಾರು ವರ್ಷಗಳಲ್ಲಿ ಶಾಲೆ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಎರಡು ವಿವೇಕ ಕೊಠಡಿಗಳಿಗೆ ₹ 45 ಲಕ್ಷ ಅನುದಾನವೂ ಸೇರಿದಂತೆ ₹1 ಕೋಟಿಗೂ ಹೆಚ್ಚು ಅನುದಾನ ಶಾಲೆಗೆ ಬಂದಿದೆ' ಎಂದರು.

ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾಗಿದ್ದ ರಮೇಶ್ ಕಂಡೆಟ್ಟು ಅವರು ಒದಗಿಸಿದ ₹15 ಲಕ್ಷ ಅನುದಾನದಲ್ಲಿ ಶಾಲೆಯಲ್ಲಿ ಇಂಟರ್ ಲಾಕ್ ಅಳವಡಿಸಿ, ರಂಗಮಂಟಪ ನಿರ್ಮಿಸಲಾಗಿದೆ. ಇಲ್ಲಿ ಕಂಪ್ಯೂಟರ್ ತರಬೇತಿ ನೀಡಲು ಹಾಗೂ ಸುಸಜ್ಜಿತ ಪ್ರಯೋಗಾಲಯ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತೇನೆ' ಎಂದರು.
ದೇಶದ ಶ್ರೇಷ್ಠ ವಿಜ್ಞಾನಿಗಳು, ಸಾಧಕರು ವ್ಯಾಸಂಗ ಮಾಡಿದ್ದು ಸರ್ಕಾರಿ ಶಾಲೆಗಳಲ್ಲಿ. ಗಮನಾರ್ಹ ಸಾಧನೆ ಮಾಡಿದ ತುಳುನಾಡಿನ ಗಣ್ಯರು ಕಲಿತದ್ದೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ. ಸರ್ಕಾರಿ ಶಾಲೆಗಳಲ್ಲಿರುವ ಸಮರ್ಪಣಾ ಭಾವದ ಅಧ್ಯಾಪಕರೇ ಇವರೆಲ್ಲರ ಸಾಧನೆಗೆ ಪ್ರೇರಣೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
'ಮಕ್ಕಳಿಗೆ ಸುಂದರ ವಾತಾವರಣದ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ಈ ಭಾಗದ ಬಂಧುಮಿತ್ರರು, ಹಳೆ ವಿದ್ಯಾರ್ಥಿಗಳು ದುಡಿಯುತ್ತಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ವಿದ್ಯಾರ್ಥಿಗಳು ಶಾಲೆಗೆ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗೆ ಬರುವಂತೆ ಮಾಡುವ ಜವಾಬ್ದಾರಿ ಅಧ್ಯಾಪಕ ವೃಂದದ ಮೇಲಿದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಮೇಶ್ ಕಂಡೆಟ್ಟು , 'ಈ ಶಾಲೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ನಾನು ಇಲ್ಲಿನ ವಿದ್ಯಾರ್ಥಿಯಾಗಿದ್ದಾಗ ಈ ಶಾಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದರು. ಕೊಠಡಿ ಸಾಲದೇ ಮರದ ಬುಡದಲ್ಲಿ ಪಾಠ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ 68ಕ್ಕೆ ಕುಸಿದಿತ್ತು. ಇನ್ನೇನು ಶಾಲೆ ಮುಚ್ಚಬೇಕಾಗುತ್ತದೋ ಎಂಬ ಆತಂಕ ಎದುರಾಗಿತ್ತು. ಈಗ ವಿದ್ಯಾರ್ಥಿಗಳ ಸಂಖ್ಯೆ 268 ಕ್ಕೆ ಏರಿಕೆ ಕಂಡಿದೆ. ಶಾಕೆಯಲ್ಲೀಗ 13 ಶಿಕ್ಷಕರಿದ್ದಾರೆ. ಶಾಲೆಯ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷೆ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಂಜೀವ ಮರೋಳಿ, ನಿಕಟಪೂರ್ವ ಪಾಲಿಕೆ ಸದಸ್ಯೆ ಕಾವ್ಯಾ ನಟರಾಜ್, ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ, ಮುಖ್ಯ ಶಿಕ್ಷಕಿ ರಾಜೀವಿ ಎಂ., ಪ್ರಮುಖರಾದ ಡಾ.ಗಣೇಶ್ ಕುಮಾರ್, ಪೋಷಕಿ ಸಬಿತಾ ಸಂತೋಷ್ ಕುಮಾರ್, ಪದವು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕುಮುದಿನಿ ಭಾಗವಹಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶೈಲಜಾ ಸುರೇಶ್ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಆಕರ್ಷಕ ಹುಲಿ ವೇಷ ಕುಣಿತ ಪ್ರದರ್ಶಿಸಿದರು.
A newly constructed stage and interlock paving facility at the Government Higher Primary School in Padavu Bikarnakatte were inaugurated on Monday by MLA Vedavyas Kamath. The infrastructure, built at a cost of ₹15 lakh, was funded through grants facilitated by nominated corporator Ramesh Kandetttu. The project includes a new stage (rangamantapa) and interlock flooring aimed at improving school facilities.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm