ಬ್ರೇಕಿಂಗ್ ನ್ಯೂಸ್
14-02-26 04:38 pm Mangaluru Staffer ಕರಾವಳಿ
ಮಂಗಳೂರು, ಫೆ.13: ಮಂಗಳೂರಿನ ಹೆಸರಾಂತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿ ಆರಾಧ್ಯಾ ಎಂಬವರ ಮೇಲೆ ಬರ್ಕೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನುಷ್ ಶೆಟ್ಟಿ ಅವರ ಖಾಸಗಿ ದೂರಿನಂತೆ ಮಂಗಳೂರಿನ ಆರನೇ ಜೆಎಂಎಫ್ ಕೋರ್ಟ್ ಆದೇಶದಂತೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2024ರ ಅಕ್ಟೋಬರ್ 9ರಂದು ತನುಷ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಂಕಿತ್ ಶೆಟ್ಟಿ ಎಂಬವರು ಜಿತೇಂದ್ರ ಕೊಟ್ಟಾರಿ ಜೊತೆಗೆ ಮಾತಿಗೆ ಮಾತು ಬೆಳೆಸಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾಗಿ ಎಫ್ಐಆರ್ ದಾಖಲಾಗಿತ್ತು. ಇದರಂತೆ, ತನುಷ್ ಮತ್ತು ಅಂಕಿತ್ ಜೈಲು ಸೇರಿದ್ದರು. ಆದರೆ ತಾವೇನೂ ಹಲ್ಲೆ ಮಾಡಿಲ್ಲ, ತಮ್ಮ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಪುತ್ರಿ ಪೊಲೀಸರ ಎದುರಲ್ಲೇ ಅವರನ್ನು ಗನ್ನಲ್ಲಿ ಶೂಟ್ ಮಾಡಿ ಕೊಲ್ಲುವಂತೆ ತಂದೆಗೆ ಪ್ರಚೋದನೆ ನೀಡಿದ್ದರು. ಈ ಬಗ್ಗೆ ಪ್ರತಿ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲು ಮಾಡಿರಲಿಲ್ಲ.

ಜೈಲಿನಿಂದ ಹೊರಬಂದ ಯುವಕರಿಬ್ಬರು ಮಂಗಳೂರು ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿ ಅವಾಚ್ಯ ನಿಂದಿಸಿ ಬೆದರಿಕೆ ಹಾಕಿದ ಬಗ್ಗೆ ವಿಡಿಯೋ ನೀಡುವಂತೆ ಆರ್ಟಿಐನಡಿ ಮಾಹಿತಿ ಕೇಳಿದ್ದರು. ಆದರೆ ಪೊಲೀಸರು ಅಪರಾಧ ತನಿಖೆಯಲ್ಲಿರುವ ನೆಪವೊಡ್ಡಿ ವಿಡಿಯೋ ಫೂಟೇಜ್ ನೀಡಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದ್ದರು. ಯುವಕರ ಹೇಳಿಕೆ ಮತ್ತು ತಮ್ಮ ಮೇಲೆ ಗನ್ ತೋರಿಸಿ ಬೆದರಿಕೆ ಹಾಕಿದ್ದನ್ನು ತನಿಖೆ ಮಾಡುವ ಸಲುವಾಗಿ ಕೋರ್ಟ್ ಪೊಲೀಸರಿಗೆ ತನಿಖೆ ಮಾಡುವಂತೆ ಒಂದು ವರ್ಷದ ಬಳಿಕ ಆದೇಶ ಮಾಡಿದೆ. ಇದರಂತೆ ಪೊಲೀಸರು ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿಯ ಮೇಲೆ ಫೆ.5ರಂದು ಎಫ್ಐಆರ್ ದಾಖಲಿಸಿದ್ದಾರೆ.
ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಬಜ್ಪೆಯಿಂದ ಕದ್ರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ಜಿತೇಂದ್ರ ಕೊಟ್ಟಾರಿ ತಮ್ಮ ಆಡಿ ಕಾರಿನಲ್ಲಿ ಬಂದಿದ್ದು ಈ ವೇಳೆ ಬೋಂದೆಲ್ ನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಯುವಕರಿಬ್ಬರು ಆಬಳಿಕ ಕೊಟ್ಟಾರಿ ಅವರಿದ್ದ ಕಾರನ್ನು ಬೆನ್ನತ್ತಿ ಬಂದಿದ್ದು ಕೊಡಿಯಾಲ್ ಬೈಲಿನ ಮನೆಯ ಕಂಪೌಂಡ್ ಒಳಗಡೆಗೂ ಬಂದಿದ್ದಾರೆ. ಈ ವೇಳೆ, ಜಿತೇಂದ್ರ ಕೊಟ್ಟಾರಿ ತನ್ನ ಗನ್ ತೆಗೆದು ಶೂಟ್ ಮಾಡುವುದಾಗಿ ಬೆದರಿಸಿದ್ದಾರೆ. ಆದರೆ ಪ್ರತಿಯಾಗಿ ಕೊಟ್ಟಾರಿ ಕೈಯನ್ನು ಎಳೆದು ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಅವರ ಪುತ್ರಿ ಮೊಬೈಲಿನಲ್ಲಿ ಶೂಟ್ ಮಾಡಿದ್ದು ಅವರನ್ನು ಬಿಡಬೇಡ, ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ್ದರೆಂದು ತನುಷ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
An FIR has been registered at Barke Police Station against noted city builder and BJP leader Jithendra Kottary and his daughter Aradhya, following directions from the Sixth JMFC Court in Mangaluru. The case stems from a private complaint filed by Tanush Shetty in connection with a road rage incident that occurred in October 2024. According to the complaint, the incident dates back to October 9, 2024, when Tanush Shetty and his friend Ankit Shetty allegedly had a heated exchange with Kottari over a “giving way” issue near Bondel while travelling from Bajpe to Kadri. Kottari was reportedly driving an Audi car at the time.
13-02-26 10:45 pm
HK News Desk
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
ಖರೀದಿಸಿದ ಕೆಲವೇ ದಿನಗಳಲ್ಲಿ ಕೈಕೊಟ್ಟ ₹52 ಲಕ್ಷದ ಹಿ...
11-02-26 11:02 pm
Breast Cancer Awareness Drive Goes Nationwide...
11-02-26 01:34 pm
14-02-26 01:51 pm
Supritha Jain
80 ವರ್ಷಗಳ ಬಳಿಕ ಪ್ರಧಾನಿ ಕಚೇರಿಗೆ ಹೊಸ ಭವನ, 'ಸೇವಾ...
13-02-26 11:00 pm
ವಂದೇ ಮಾತರಂ ಕಡ್ಡಾಯ ಕ್ರಮಕ್ಕೆ ಜಮಾತೆ ಉಲೆಮಾ ಹಿಂದ್...
12-02-26 10:51 pm
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
14-02-26 05:16 pm
Mangaluru Staffer
Builder Jithendra Kottary, FIR: ಗನ್ ಹಿಡಿದು ಜೀ...
14-02-26 04:38 pm
ವಿದೇಶಿ ಉದ್ಯೋಗ ; ಗಲ್ಫ್, ದಕ್ಷಿಣ ಏಷ್ಯಾ ರಾಷ್ಟ್ರಗ...
13-02-26 09:52 pm
Pilikula zoo, Mangalore: ಪಿಲಿಕುಳ ಪ್ರಾಣಿ ಸಂಗ್ರ...
13-02-26 06:38 pm
ಪರ್ಸೆಂಟೇಜ್ ಈಗ ಹೆಚ್ಚಾಗಿದೆ, ರಾಜ್ಯದಲ್ಲಿ 37 ಸಾವಿರ...
13-02-26 01:28 pm
13-02-26 03:35 pm
Mangalore Correspondent
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆ ಪತ್ತೆ...
13-02-26 11:52 am
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ; ಕೊನೆಗೂ ಭೈರತಿ ಬ...
13-02-26 12:54 am
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm