ಬ್ರೇಕಿಂಗ್ ನ್ಯೂಸ್
17-01-26 05:12 pm Mangalore Correspondent ಕರಾವಳಿ
ಮಂಗಳೂರು, ಜ.17 : ಮಂಗಳೂರಿನ ಸೇಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅದರ ಹಳೆಯ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳಿಗಾಗಿ ನವೀನ ಮತ್ತು ಅಂತರ್ಗತ ರಸಪ್ರಶ್ನೆ ಕಾರ್ಯಕ್ರಮ "ಅಲೋಯ್ ಕ್ವಿಜ್ ವಿಜ್ - 2026" ಹಮ್ಮಿಕೊಂಡಿದೆ.
ಜನವರಿ 18ರ ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಕೊಡಿಯಾಲ್‌ಬೈಲಿನ ಶಾಲಾ ಆವರಣದಲ್ಲಿ ಸ್ಪರ್ಧೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸ್ಪರ್ಧೆಯು ವಿಶೇಷವಾಗಿದ್ದು, ಪ್ರತಿ ತಂಡವು ಒಬ್ಬ ದೃಷ್ಟಿಹೀನ ಸ್ಪರ್ಧಿ, ಒಬ್ಬ ಶ್ರವಣ ಮತ್ತು ವಾಕ್ ದೋಷವುಳ್ಳ ವಿದ್ಯಾರ್ಥಿ, ಒಬ್ಬ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮತ್ತು ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ವಿಶೇಷ ಚೇತನ ಮಕ್ಕಳ ಸಾಮರ್ಥ್ಯಗಳನ್ನು ಸಮಾಜಕ್ಕೆ ತೋರಿಸುವುದು ಮತ್ತು ಭವಿಷ್ಯದಲ್ಲಿ ಇಂತಹ ಮಕ್ಕಳೊಂದಿಗೆ ಬೆರೆಯುವಲ್ಲಿ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ಯುವ ವಿದ್ಯಾರ್ಥಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜೊಸಿಟ್ಟಾ ಸಿಕ್ವೇರಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯು ಎರಡು ಸೆಮಿಫೈನಲ್ ಮತ್ತು ಆರು ತಂಡಗಳ ಫೈನಲ್ ಹಂತಗಳನ್ನು ಹೊಂದಿದ್ದು, ಇದರಲ್ಲಿ ಬ್ರೈಲ್ ಆಧಾರಿತ ಪ್ರಶ್ನಾವಳಿ, "ಚಾರ್ಡ್ಸ್ - ಆಕ್ಷನ್ ಸ್ಪೀಕ್ ಲೌಡರ್" ಮತ್ತು "ಹಾರ್ಮನಿ ಇನ್ ಥಾಟ್" ನಂತಹ ಐದು ವೈವಿಧ್ಯಮಯ ಸುತ್ತುಗಳು ಇರಲಿವೆ. ನೀಲ್ ರೊಡ್ರಿಗಸ್ ಈ ಕಾರ್ಯಕ್ರಮವನ್ನು ಸಂಯೋಜಿಸುತ್ತಿದ್ದು, ಮಕ್ಕಳು ಅಡೆತಡೆಗಳನ್ನು ಮೆಟ್ಟಿ ನಿಂತು "ಅಲೋಯ್ ಕ್ವಿಜ್-ವಿಜ್ 2026" ಪ್ರಶಸ್ತಿಯನ್ನು ಗೆಲ್ಲಲು ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೀಲ್ ರೋಡ್ರಿಗಸ್, ರೋಹಿತ್ ಕರ್ಕಡ ಇದ್ದರು.
St Aloysius Higher Primary School, Mangaluru, along with its Alumni Association, is organising the innovative and inclusive quiz competition “Aloye Quiz Wiz – 2026” on January 18. The event brings together specially-abled students, government school students, and private school students in mixed teams to promote inclusion, sensitivity, and showcase the abilities of children with special needs.
17-01-26 05:53 pm
HK News Desk
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm