ಬ್ರೇಕಿಂಗ್ ನ್ಯೂಸ್
09-09-25 04:47 pm Mangalore Correspondent ಕರಾವಳಿ
ಮಂಗಳೂರು, ಸೆ.9 : ಕಾನೂನು ನೆಪದಲ್ಲಿ ಈ ನೆಲದ ಸಂಸ್ಕೃತಿಯಾದ ಯಕ್ಷಗಾನ, ನಾಟಕ ಪ್ರದರ್ಶನಕ್ಕೆ ಅವಕಾಶ ನೀಡದೇ ಇದ್ದರೆ ನಾವು ಸುಮ್ಮನಿರಲ್ಲ. ಒಂದೆರಡು ದಿನದಲ್ಲಿ ಸಂಸದರ ನೇತೃತ್ವದಲ್ಲಿ ಜಿಲ್ಲಾಡಳಿತದ ಜೊತೆಗೆ ಮಾತುಕತೆ ಏರ್ಪಡಿಸುತ್ತೇವೆ. ಮಾತುಕತೆಗೆ ಬಗ್ಗದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ, ನಾವು ನಮ್ಮ ಸ್ಥಾನವನ್ನಾದ್ರೂ ಬಿಟ್ಟೇವು, ಸಂಪ್ರದಾಯಕ್ಕೆ ಧಕ್ಕೆ ತರಲು ಬಿಡಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಗುಡುಗಿದ್ದಾರೆ.
ಮಂಗಳೂರಿನ ಕದ್ರಿಯಲ್ಲಿ ಗೋರಕ್ಷನಾಥ ಸಭಾಂಗಣದಲ್ಲಿ ನಡೆದ ಯಕ್ಷಗಾನ, ನಾಟಕ ಕಲಾವಿದರು ಮತ್ತು ಸೌಂಡ್ಸ್, ಶಾಮಿಯಾನ ಇನ್ನಿತರ ಪೂರಕ ಚಟುವಟಿಕೆಗಳ ಮಾಲೀಕರು ಮತ್ತು ಕಾರ್ಮಿಕರನ್ನು ಒಟ್ಟುಗೂಡಿಸಿ ವಿಶ್ವ ಹಿಂದು ಪರಿಷತ್ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ವೇದವ್ಯಾಸ ಕಾಮತ್ ಮಾತನಾಡಿದರು. ಯಕ್ಷಗಾನ, ನಾಟಕಗಳಿಗೆ ಅಳವಡಿಸುವ ಧ್ವನಿವರ್ಧಕದ ಡೆಸಿಬಲ್ ಹೆಚ್ಚಿದೆ, ಹಾಗಾಗಿ ರಾತ್ರಿ ವೇಳೆಗೆ ಪರ್ಮಿಶನ್ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇವರಿಗೆ ಡೆಸಿಬಲ್ ಅಂದರೆ ಅರ್ಥವೇ ಗೊತ್ತಿಲ್ಲ. ಡೆಸಿಬಲ್ ಅನ್ನುವುದು ಯಾವುದೋ ಏಪ್ ನಲ್ಲಿ ಲೆಕ್ಕ ಹಾಕುವುದಲ್ಲ. ಒಂದು ಮೈದಾನದಲ್ಲಿ ಕಾರ್ಯಕ್ರಮ ನಡೆಸಿದರೆ, ಅಲ್ಲಿ ಸೇರಿರುವ ಜನಸಂಖ್ಯೆ ಮತ್ತು ಜಾಗದ ವಿಸ್ತೀರ್ಣದಿಂದ ಭಾಗಿಸಿದರೆ ಸಿಗುವ ಸಂಖ್ಯೆ ಡೆಸಿಬಲ್.




ನಮ್ಮಲ್ಲಿ ಯಕ್ಷಗಾನ, ನಾಟಕದ ಧ್ವನಿವರ್ಧಕ ಅಲ್ಲಿ ಸೇರುವ ಜನರಿಗಿಂತ ಹೆಚ್ಚಿರುತ್ತದೆಯೇ ಎಂದು ಲೆಕ್ಕ ಹಾಕಬೇಕು. ಕಾನೂನು ಏನೇ ಇರಲಿ, ನಮ್ಮ ಸಂಸ್ಕೃತಿಯ ಮೇಲೆ ಸವಾರಿ ಮಾಡುವ ಕಾನೂನು ನಮಗೆ ಬೇಡ. ಯಾವುದೇ ರಾಜಕೀಯ ಇಲ್ಲದೆ ಎಲ್ಲರನ್ನೂ ಬೆಂಗಳೂರಿಗೂ ಕರೆದೊಯ್ಯುತ್ತೇವೆ, ಒಟ್ಟಿಗಿದ್ದರೆ ಜೊತೆಗೆ, ಇಲ್ಲದಿದ್ದರೆ ತುಳಿದು ಅನ್ನುವ ಹಾಗೆ ಅಧಿಕಾರಿಗಳ ಜೊತೆಗೆ ಕಲಾವಿದರು ಮತ್ತು ಎಲ್ಲರನ್ನೂ ಒಳಗೊಂಡ ಸಭೆಯನ್ನು ಏರ್ಪಡಿಸುತ್ತೇವೆ. ಆನಂತರವೂ ಕೇಳದಿದ್ದರೆ ನಾವು ನಮ್ಮ ದಾರಿಯನ್ನು ಹುಡುಕಬೇಕಾಗುತ್ತದೆ ಎಂದು ಹೇಳಿದರು.
ಧಾರ್ಮಿಕ ಚಟುವಟಿಕೆಯೇ ಇಲ್ಲಿನ ಆರ್ಥಿಕತೆ
ವೇದವ್ಯಾಸ ಕಾಮತ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಭರತ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ ನಮ್ಮ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ನಾವು, ಕಲಾವಿದರು ಸೇರಿ ಎಲ್ಲರೂ ಬೀದಿಗಿಳಿಯಬೇಕಾದ ಅನಿವಾರ್ಯತೆ ಎದಾರಿಗಿದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ವಿಧಾನಸಭೆಯಲ್ಲಿ ಸಚಿವರೊಬ್ಬರು ಮಂಗಳೂರು ಎಂಟು ಗಂಟೆಗೆ ಬಂದ್ ಆಗುತ್ತೆ ಅಂತಾರೆ. ಅವರಿಗೆ ನಮ್ಮ ಸಂಸ್ಕೃತಿಯ ಅರಿವಿಲ್ಲ. ನಮ್ಮ ಹಳ್ಳಿಗಳಲ್ಲಿ ಎಂಟು ಗಂಟೆಯ ನಂತರವೇ ಯಕ್ಷಗಾನ, ನಾಟಕ, ಧಾರ್ಮಿಕ ಕಾರ್ಯಕ್ರಮ ಶುರುವಾಗೋದು ಅವರಿಗೆ ಗೊತ್ತಿಲ್ಲ. ಯಕ್ಷಗಾನ, ಆಚರಣೆ ಒಳಗೊಂಡು ಕರಾವಳಿಯ ಆರ್ಥಿಕತೆ ಇರುವುದೇ ಧಾರ್ಮಿಕ ಚಟುವಟಿಕೆಗಳಲ್ಲಿ. ಇದೇ ಇಲ್ಲಿನ ದೊಡ್ಡ ವಹಿವಾಟು. ಉಳಿದೆಲ್ಲವೂ ಅದಕ್ಕೆ ಪೂರಕವಾಗಿ ಇರುವಂಥದ್ದು. ಆದರೆ ಈ ನಮ್ಮ ಸಂಸ್ಕೃತಿಯ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ಹೇಳಿದರು.
ಕೆಂಡಕ್ಕೆ ದೂಡಿ ಹಾಕುವ ದಿನ ಬರಬಹುದು
ತುಳುನಾಡಿನ ಸಾಂಸ್ಕೃತಿಕ ವೇದಿಕೆಯ ಮೇಲೆ ಪಿತೂರಿ ನಡೆದಿದೆ, ಏನಿದ್ದರೂ ನಮ್ಮಲ್ಲಿ ಮೊದಲು ಪ್ರಯೋಗ ಮಾಡಿ ಆಮೇಲೆ ಇಡೀ ದೇಶಕ್ಕೆ ವಿಸ್ತರಿಸುತ್ತಾರೆ. ಅಂತಹದ್ದೇ ಪರಿಪಾಠ ಈಗ ಎದುರಾಗಿದೆ. ರಾತ್ರಿ ಕೋಲಕ್ಕೆ ಗೆಜ್ಜೆ ಕಟ್ಟಿದರೆ ಅದನ್ನು ನಿಲ್ಲಿಸುವ, ಕೆಂಡ ಸೇವೆಗೆ ಸಿದ್ಧತೆಯಾಗಿ 12 ಗಂಟೆ ಆಯ್ತು ಅಂತ ಅದನ್ನು ನಿಲ್ಲಿಸುವ ಕಾಲ ಬರಬಹುದು. ಆಗ ನಿಲ್ಲಿಸಲು ಬಂದವರನ್ನೂ ನಿಗಿ ನಿಗಿ ಕೆಂಡಕ್ಕೆ ದೂಡಿ ಹಾಕುವ ಸ್ಥಿತಿಯೂ ಬರಬಹುದು ಎಂದು ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಹೇಳಿದರು.
ಆರೆಸ್ಸೆಸ್ ಪ್ರಮುಖರಾದ ಪ್ರಕಾಶ್ ಪಿ.ಎಸ್ ಮಾತನಾಡಿ, ನಮಗೆ ಇತಿಹಾಸದ ಅರಿವು ಇರಬೇಕು, ಹಿಂದೆ ರಾಜರ ಕಾಲದಲ್ಲಿ ರಾತ್ರಿಯಿಡೀ ಸಂಗೀತ, ಗೋಷ್ಟಿಗಳನ್ನು ನಡೆಸುತ್ತಿದ್ದರು. ಆನಂತರ, ಯಕ್ಷಗಾನ, ನಾಟಕ, ಸಂಗೀತ ಕಚೇರಿ ನಡೆದುಬಂದಿತ್ತು. ಈಗ ಸರ್ಕಾರವೇ ಇದನ್ನು ಮಾಡಿಸಬೇಕಾಗಿದೆ. ಯಕ್ಷಗಾನದಲ್ಲಿ ಸತ್ಯ ಹರಿಶ್ಚಂದ್ರ, ಕರ್ಣನ ಕತೆ ಕೇಳಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡವರಿದ್ದಾರೆ. ಜನರಲ್ಲಿ ಸಂಸ್ಕೃತಿ, ಪರಂಪರೆಯನ್ನು ಬಿತ್ತುವ ಕಲೆಗಳನ್ನೇ ಹತ್ತಿಕ್ಕುವ ಕೆಲಸ ಆಗುತ್ತಿದೆ. ಇದನ್ನು ಇನ್ನಷ್ಟು ಗಟ್ಟಿ ಸ್ವರದಲ್ಲಿ ಪ್ರಶ್ನೆ ಮಾಡಬೇಕಾಗಿದೆ. ಕಾನೂನು ಇರಬೇಕಾದ್ದು ಜನರ ಒಳಿತಿಗಾಗಿ ವಿನಾ ತೊಂದರೆ ಕೊಡುವುದಕ್ಕಲ್ಲ ಎಂದು ಆಳುವ ವರ್ಗಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು, ಸೌಂಡ್ಸ್-ಲೈಟ್ಸ್ ಇನ್ನಿತರ ವರ್ಗದ ವೃತ್ತಿಪರರು ಸೇರಿದ್ದರು. ಸಭೆಯಲ್ಲಿ ದೇವದಾಸ ಕಾಪಿಕಾಡ್, ಸತೀಶ್ ಶೆಟ್ಟಿ ಪಟ್ಲ, ಶರಣ್ ಪಂಪ್ವೆಲ್, ಪುರುಷೋತ್ತಮ, ಭೋಜರಾಜ ವಾಮಂಜೂರು, ದಯಾನಂದ ಕತ್ತಲಸಾರ್, ಲಕ್ಷ್ಮಣ ಕುಮಾರ್ ಮಲ್ಲೂರು ಮತ್ತಿತರರಿದ್ದರು.
Strongly opposing restrictions on traditional Yakshagana and drama performances, MLA Vedavyas Kamath warned that artistes will launch district-wide protests if the administration fails to resolve the issue.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm