ಬ್ರೇಕಿಂಗ್ ನ್ಯೂಸ್
03-09-25 03:45 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.3 : ಸಿಐಡಿ ಮತ್ತು ಸಿಬಿಐ ತನಿಖೆಗೊಳಪಟ್ಟಿದ್ದರೂ 13 ವರ್ಷಗಳಿಂದಲೂ ರಾಜ್ಯದ ಗಮನಸೆಳೆದಿರುವ ಧರ್ಮಸ್ಥಳ ಸಮೀಪ ಕೊಲೆಯಾದ ಸೌಜನ್ಯಾ ಪ್ರಕರಣ ಮತ್ತೆ ಮರು ತನಿಖೆಯಾಗುತ್ತಾ ಎಂಬ ವದಂತಿ ಹರಡಿದೆ. ಈಗಾಗಲೇ ಧರ್ಮಸ್ಥಳದ ಅಸಹಜ ಸಾವಿನ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವಾಗಲೇ ಸೌಜನ್ಯಾ ಪ್ರಕರಣವೂ ಮುನ್ನೆಲೆಗೆ ಬಂದಿದ್ದು ಅದರಲ್ಲಿ ಆರೋಪಕ್ಕೀಡಾದ ಹಳೆ ಆರೋಪಿಗಳನ್ನು ವಿಚಾರಣೆಗೆ ಕರೆಯಲಾಗಿದೆ.
ಎರಡು ದಿನಗಳ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಪಾಂಗಾಳದ ಸೌಜನ್ಯಾ ನಿವಾಸಕ್ಕೆ ತೆರಳಿ, ತಾಯಿ ಕುಸುಮಾವತಿ ಜೊತೆಗೆ ಮಾತನಾಡಿದ್ದಲ್ಲದೆ, ಮರು ತನಿಖೆಗಾಗಿ ಸುಪ್ರೀಂ ಕೋರ್ಟಿಗೆ ಹೋಗುವುದಾದರೂ ಬಿಜೆಪಿಯಿಂದ ಸಹಕಾರ ನೀಡುವುದಾಗಿ ಹೇಳಿದ್ದು ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು, ಸೌಜನ್ಯಾ ಪ್ರಕರಣದಲ್ಲಿ ಆರೋಪಿಗಳೆಂದು ಹೇಳಲಾಗಿದ್ದ ಉದಯ ಜೈನ್, ಧೀರಜ್ ಕೆಲ್ಲ ಮತ್ತು ಮಲ್ಲಿಕ್ ಜೈನ್ ಅವರನ್ನು ವಿಚಾರಣೆಗೆ ಕರೆಸಿಕೊಂಡಿದೆ.
ಬುಧವಾರ ಬೆಳಗ್ಗೆ ಉದಯ ಕುಮಾರ್ ಜೈನ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದು, ಮಾಧ್ಯಮಕ್ಕೂ ಹೇಳಿಕೆ ನೀಡಿದ್ದಾರೆ. ತನ್ನನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಬರಹೇಳಿದ್ದಾರೆ. ಯಾವ ಕಾರಣಕ್ಕೆಂದು ಗೊತ್ತಿಲ್ಲ. ಹಿಂದೆ ಸಿಬಿಐ ತನಿಖೆ ನಡೆದಾಗ ನಮ್ಮನ್ನು ಬ್ರೈನ್ ಮ್ಯಾಪಿಂಗ್ ಮಾಡಿದ್ದರು. ಎಲ್ಲ ರೀತಿಯ ತನಿಖೆ ಮಾಡಿದ್ದರು. ಆದರೆ ಮಹೇಶ್ ಶೆಟ್ಟಿ ತಿಮರೋಡಿ ತಂಡದವರು ಮಾತ್ರ ನಮ್ಮನ್ನು ಕಳೆದ 13 ವರ್ಷಗಳಿಂದಲೂ ರೇಪ್ ಮಾಡುತ್ತಿದ್ದಾರೆ. ಹೊರಗಡೆ ಯಾವುದಕ್ಕೂ ಹೋಗದ ಸ್ಥಿತಿ ಮಾಡಿದ್ದಾರೆ. ನಮ್ಮನ್ನು ಜನರು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ. ಆದರೆ, ಈಗಲೂ ನಾವು ಯಾವ ತನಿಖೆಗೂ ಸಿದ್ಧರಿದ್ದೇವೆ ಎಂದು ಹೇಳಿದರು.
ನನಗೆ ನಿನ್ನೆ ಕರೆ ಮಾಡಿ ವಿಚಾರಣೆಗೆ ಬರಹೇಳಿದ್ದಾರೆ, ಧೀರಜ್ ಮತ್ತು ಮಲ್ಲಿಕ್ ಅವರಲ್ಲೂ ಕೇಳಿದೆ. ಅವರಿಗೂ ತನಿಖೆಗೆ ಬರುವಂತೆ ಹೇಳಿದ್ದಾರಂತೆ. ಮಧ್ಯಾಹ್ನ ಬರುವುದಾಗಿ ನನ್ನಲ್ಲಿ ತಿಳಿಸಿದ್ದಾರೆ ಎಂದು ಉದಯ್ ಜೈನ್ ತಿಳಿಸಿದ್ದಾರೆ. ಉದಯ ಕುಮಾರ್ ಜೈನ್ ಹಿಂದೆ ಆಟೋ ಚಾಲಕನಾಗಿದ್ದ. ಉಜಿರೆ ಎಸ್ಡಿಎಂ ಕಾಲೇಜಿಗೆ ಹೋಗಿ ಸಂಜೆ ಮರಳುತ್ತಿದ್ದ 17 ವರ್ಷದ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆಂದು ಆರೋಪ ಕೇಳಿಬಂದಿತ್ತು. ಮರುದಿನ ಬೆಳಗ್ಗೆ ಸೌಜನ್ಯಾ ಶವ ಅರೆನಗ್ನಳಾಗಿ ಪಾಂಗಾಳ ಬಳಿಯ ಮಣ್ಣಸಂಕ ಎಂಬಲ್ಲಿನ ಕಾಡಿನಲ್ಲಿ ಪತ್ತೆಯಾಗಿತ್ತು.
ಪ್ರಕರಣದ ಬಗ್ಗೆ ಧರ್ಮಸ್ಥಳದಲ್ಲಿ ಆಕ್ರೋಶ ಉಂಟಾಗಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬೆಳ್ತಂಗಡಿ ಠಾಣೆಗೂ ಮುತ್ತಿಗೆ ಹಾಕಿದ್ದರು. ಎರಡು ದಿನಗಳ ನಂತರ, ಬಾಹುಬಲಿ ಬೆಟ್ಟದಲ್ಲಿ ಮಲಗಿದ್ದ ವ್ಯಕ್ತಿಯನ್ನು ಆರೋಪಿಯೆಂದು ತೋರಿಸಲಾಗಿತ್ತು. ಮಾನಸಿಕ ಅಸ್ವಸ್ಥನಾಗಿದ್ದ ಸಂತೋಷ್ ರಾವ್ ನನ್ನು ಪೊಲೀಸರು ಆತನೇ ಆರೋಪಿಯೆಂದು ಬಂಧಿಸಿದ್ದರು. ಆನಂತರ, ಪ್ರಕರಣದ ಬಗ್ಗೆ ಸಿಐಡಿ ಮತ್ತು ಸಿಬಿಐ ತನಿಖೆ ನಡೆದರೂ ಬೇರೆ ಆರೋಪಿಗಳ ಬಂಧನ ಆಗಿರಲಿಲ್ಲ. ಸಂತೋಷ್ ರಾವ್ ಆರೋಪಿಯೆಂದು ಕೋರ್ಟಿಗೆ ಚಾರ್ಜ್ ಶೀಟ್ ಹಾಕಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ್ ರಾವ್ ಜೈಲಿನಿಂದ ಬಿಡುಗಡೆಯಾಗಿದ್ದ.
2022ರಲ್ಲಿ ಆರೋಪಿ ಜೈಲಿನಿಂದ ಬಿಡಗುಡೆಯಾದ ನಂತರ ಸೌಜನ್ಯಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತ್ತು. ಆರೋಪಿ ಆತ ಅಲ್ಲದಿದ್ದರೆ ಯಾರು ಎನ್ನುವ ಪ್ರಶ್ನೆ ಮುಂದಿಟ್ಟು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆದಿತ್ತು. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆದಿತ್ತು. ಆನಂತರ, ಈ ವಿಷಯ ಅಲ್ಲಿಗೇ ತಣ್ಣಗಾಗಿತ್ತು. ಇತ್ತೀಚೆಗೆ ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿಟ್ಟಿದ್ದೇನೆಂದು ಹೇಳಿ ಒಬ್ಬಾತ ದೂರು ನೀಡಿದ್ದು ಭಾರೀ ಸಂಚಲನ ಎಬ್ಬಿಸಿದ್ದರಿಂದ ರಾಜ್ಯ ಸರಕಾರ ತನಿಖೆಗೆ ಎಸ್ಐಟಿ ರಚಿಸಿತ್ತು. ಹೆಣಗಳನ್ನು ಹೂತಿರುವ ಬಗ್ಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲವಾದರೂ, ಪದ್ಮಲತಾ ಸೇರಿದಂತೆ ಅಸಹಜ ರೀತಿಯಲ್ಲಿ ಮೃತಪಟ್ಟ ಯುವತಿಯರ ಬಗ್ಗೆ ಕುಟುಂಬಸ್ಥರು ದೂರು ನೀಡಿರುವುದು ಎಸ್ಐಟಿಗೆ ಸವಾಲಾಗಿ ಪರಿಣಮಿಸಿತ್ತು.
ಇದರ ನಡುವಲ್ಲೇ ಹೆಣ ಹೂತ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನೇ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಆದರೆ ಇದಕ್ಕೂ ಮೊದಲೇ ಚಿನ್ನಯ್ಯ ಕೆಲವು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಈತನ ಬಂಧನ ಆಗುತ್ತಲೇ ಬಹಿರಂಗ ಆಗಿತ್ತು. ಇದರಲ್ಲಿ ಸೌಜನ್ಯಾಳನ್ನು ಅಪಹರಿಸಿಕೊಂಡು ಹೋಗಿದ್ದನ್ನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದು ಜಾಲತಾಣದಲ್ಲಿ ವೈರಲ್ ಆಗಿತ್ತು. ಇಷ್ಟಾಗುತ್ತಲೇ ಸೌಜನ್ಯಾ ತಾಯಿ ಕುಸುಮಾವತಿ, ಚಿನ್ನಯ್ಯನನ್ನು ಸಾಕ್ಷಿಯಾಗಿಸಿ ತನ್ನ ಮಗಳ ಕೊಲೆ ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದು ಎಸ್ಐಟಿಗೆ ದೂರು ನೀಡಿದ್ದರು. ಸದ್ಯಕ್ಕೆ ಚಿನ್ನಯ್ಯನ ಹೇಳಿಕೆ ಆಧರಿಸಿ ಎಸ್ಐಟಿ, ಹಳೆ ಆರೋಪಿಗಳನ್ನು ವಿಚಾರಣೆಗೆ ಕರೆದಿದ್ದೋ ಅಥವಾ ಹೆಣ ಹೂತ ಪ್ರಕರಣದಲ್ಲಿ ಕರೆದಿದ್ದೋ ಗೊತ್ತಿಲ್ಲ. ಒಟ್ಟಿನಲ್ಲಿ ಆರೋಪಕ್ಕೀಡಾದ ಮೂವರನ್ನು ಮತ್ತೆ ವಿಚಾರಣೆಗೆ ಕರೆದಿದ್ದು ಎಸ್ಐಟಿ ತನಿಖೆ ಬಗ್ಗೆ ಕುತೂಹಲಕ್ಕೀಡು ಮಾಡಿದೆ.
The infamous Soujanya murder case, which has haunted Karnataka for over 13 years, has resurfaced with new developments. The Special Investigation Team (SIT), already probing multiple mysterious deaths near Dharmasthala, has now summoned three individuals earlier accused in the Soujanya case for fresh questioning.
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 03:07 pm
Mangalore Correspondent
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
21-10-25 05:12 pm
Mangalore Correspondent
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm