ಬ್ರೇಕಿಂಗ್ ನ್ಯೂಸ್
02-09-25 02:17 pm Mangalore Correspondent ಕರಾವಳಿ
ಪುತ್ತೂರು, ಸೆ.2 : ಲೋಕಾಯುಕ್ತ ದಾಳಿ ಬಳಿಕ ನಾಪತ್ತೆಯಾದ ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಇನ್ನೂ ಪತ್ತೆಯಾಗಿಲ್ಲ. ತಹಸೀಲ್ದಾರ್ ಕೂಡ ಲಂಚದಲ್ಲಿ ಆರೋಪಿ ಎಂದು ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದರು. ಅದರ ಬೆನ್ನಲ್ಲೇ ಕೂಡಲಗಿ ಯಾರಿಗೂ ಸಿಗದೆ ನಾಪತ್ತೆಯಾಗಿದ್ದಾರೆ.
ಆ.28ರಂದು ಅಕ್ರಮ-ಸಕ್ರಮದ ದರ್ಖಾಸು ಜಮೀನಿಗೆ ನಿರಾಕ್ಷೇಪಣಾ ಪತ್ರ ನೀಡಲು 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪುತ್ತೂರು ತಾಲೂಕು ಆಡಳಿತ ಕಚೇರಿಯ ಕೇಸ್ ವರ್ಕರ್ ಸುನೀಲ್ ಎಂಬವರನ್ನು ಬಂಧಿಸಿದ್ದರು. ತಹಸೀಲ್ದಾರ್ಗೆ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರಿಂದ ತಹಸೀಲ್ದಾರ್ ಮೇಲೂ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ತಹಸೀಲ್ದಾರ್ ದಾಳಿ ನಡೆದ ದಿನದಿಂದ ಇಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಸದ್ಯಕ್ಕೆ ಅವರ ಕೆಲಸಗಳನ್ನು ಉಪ ತಹಸೀಲ್ದಾರ್ ಮಾಡುತ್ತಿದ್ದು, ಮುಂದೆ ಅವರು ಹಾಜರಾಗದೆ ಇದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ತಿಳಿಸಿದ್ದಾರೆ.
ದರ್ಖಾಸು ಜಾಗದ ಬಗ್ಗೆ ವಾರಿಸುದಾರರು ವೀಲು ಬರೆದಿಟ್ಟಿದ್ದು ಅದರ ಪ್ರಕಾರ 65 ಸೆಂಟ್ಸ್ ಜಮೀನಿನ ಹಕ್ಕು ದೂರುದಾರರಿಗೆ ಸೇರಿತ್ತು. 27 ವರ್ಷಗಳ ಹಿಂದೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಇದಾಗಿತ್ತು. ಜಾಗವನ್ನು ಪ್ರಸ್ತುತ ಮಾರಾಟ ಮಾಡುವ ಉದ್ದೇಶದಿಂದ ದೂರುದಾರರ ಚಿಕ್ಕಪ್ಪ ತಹಸೀಲ್ದಾರ್ ಕಚೇರಿಯಿಂದ ನಿರಕ್ಷೇಪಣಾ ಪತ್ರ ಕೋರಿ 2024ರ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಎನ್ಒಸಿ ಸಿಗದ ಕಾರಣ ಅದರ ಬಗ್ಗೆ ವಿಚಾರಿಸುವಂತೆ ಚಿಕ್ಕಪ್ಪ ಹೇಳಿದ ಪ್ರಕಾರ ದೂರುದಾರರು ಕಳೆದ ಜೂನ್ 26ರಂದು ಕೇಸ್ ವರ್ಕರ್ ಸುನಿಲ್ ಅವರಲ್ಲಿ ಕೇಳಿದ್ದರು.
ತಹಸೀಲ್ದಾರ್ ಸಹಿಗೆ ಬಾಕಿ ಇದೆ. ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ. ತಹಸೀಲ್ದಾರರಿಗೆ 10 ಸಾವಿರ ರೂ. ಕೊಡಬೇಕಾಗುತ್ತದೆ. ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆಗಸ್ಟ್ 29ರ ಸಂಜೆ ಕೇಸ್ ವರ್ಕರ್ ಸುನಿಲ್ ದೂರುದಾರರಿಂದ 12 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ. ಈ ವೇಳೆ, ತಹಸೀಲ್ದಾರ್ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ ಕೇಸು ದಾಖಲಾಗುತ್ತಲೇ ತಹಸೀಲ್ದಾರ್ ಕೂಡಲಗಿ ಪುತ್ತೂರು ಬಿಟ್ಟು ಹೋಗಿದ್ದಾರೆ.
The Puttur Tahsildar, S.B. Koodalagi, has gone missing following a Lokayukta raid at the taluk office, where officials uncovered a bribery case involving land documents. Despite being served a notice to appear for questioning, the Tahsildar has neither reported to duty nor responded to the summons.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm