ಬ್ರೇಕಿಂಗ್ ನ್ಯೂಸ್
31-08-25 10:34 pm Mangalore Correspondent ಕರಾವಳಿ
ಮಂಗಳೂರು, ಆ.31 : ನಗರದ ಕೆಪಿಟಿ- ನಂತೂರು ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ಮರಣ ಗುಂಡಿಯಂತಾಗಿವೆ. ಶನಿವಾರ ರಾತ್ರಿ ಸ್ಕೂಟರ್ ಸವಾರನೊಬ್ಬ ನಂತೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಪಲ್ಟಿಯಾಗಿದ್ದು ಹಿಂದೆ ಇದ್ದ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಅದೃಷ್ಟವಶಾತ್ ಜೀವ ಉಳಿದಿದೆ.
ಕೆಪಿಟಿ ವೃತ್ತದಿಂದ ನಂತೂರು ಕಡೆಗೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಎದುರಿನ ವಾಹನವನ್ನು ಹಿಂದಿಕ್ಕಲೆಂದು ಸ್ಕೂಟರ್ ಸವಾರ ಒಮ್ಮೆಲೇ ವೇಗ ಪಡೆದಿದ್ದು ಅಷ್ಟರಲ್ಲೇ ರಸ್ತೆ ಗುಂಡಿಗೆ ಬಿದ್ದು ಸವಾರ ನೆಲಕ್ಕುರುಳಿದ್ದಾನೆ. ಇದೇ ವೇಳೆ ರಾಜಲಕ್ಷ್ಮಿ ಎನ್ನುವ ಹೆಸರಿನ ಖಾಸಗಿ ಬಸ್ ಹಿಂದಿನಿಂದ ಬರ್ತಿದ್ದು ಚಾಲಕ ಶಶಿಧರ್ ಶೆಟ್ಟಿ ಹಠಾತ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದಾರೆ. ಇದರಿಂದ ಸ್ಕೂಟರ್ ಸವಾರನ ಮೇಲೆ ಸಾಗಬೇಕಿದ್ದ ಬಸ್ ಅಲ್ಲಿಯೇ ನಿಂತು ಬಿಟ್ಟಿದೆ. ಈ ಘಟನೆಯ ವಿಡಿಯೋ ಬಸ್ಸಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೇರಾವುದೇ ವಾಹನ ಆಗುತ್ತಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎನ್ನೋದು ವಿಡಿಯೋ ನೋಡಿದರೆ ಗಮನಕ್ಕೆ ಬರುತ್ತದೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುವಂತಾಗಿದೆ.
ಕೆಪಿಟಿ ವೃತ್ತದಿಂದ ನಂತೂರಿಗೆ ಸಾಗಲು ಒಂದು ಕಿಮೀ ಅಂತರವಿದ್ದು ಒಂದು ಬದಿಯ ರಸ್ತೆಯಲ್ಲೇ ಅತಿ ಹೆಚ್ಚು ಗುಂಡಿಗಳು ಬಿದ್ದಿವೆ. ಕೆಲವು ಗುಂಡಿಗಳಂತೂ ದ್ವಿಚಕ್ರ ವಾಹನಗಳಲ್ಲದೆ ಕಾರುಗಳು ಬಿದ್ದರೂ ಅದರಿಂದ ಮೇಲೆ ಏರಲಾಗದಷ್ಟು ಆಳ ಹೊಂದಿದೆ. ಇಷ್ಟೊಂದು ಗುಂಡಿಗಳು ಬಿದ್ದರೂ ಹೈವೇ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ನಂತೂರಿನ ಹೆದ್ದಾರಿ ಬದಿಯಲ್ಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಚೇರಿ ಇದೆ. ದಿನವೂ ಈ ಗುಂಡಿ ಬಿದ್ದಿರುವ ರಸ್ತೆಯಲ್ಲಿಯೇ ಇಲಾಖೆ ಅಧಿಕಾರಿಗಳು ಸಾಗುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯವರು, ಶಾಸಕ- ಸಂಸದರು ಸೇರಿ ಎಲ್ಲರೂ ತಮ್ಮ ವಾಹನಗಳಲ್ಲಿ ದಿನವೂ ಇದೇ ಹೆದ್ದಾರಿಯಲ್ಲಿ ಸಾಗಬೇಕು. ಸಚಿವರು ಬಂದರೆ ರಸ್ತೆಯನ್ನು ಬಂದ್ ಮಾಡಿ ಪೊಲೀಸರು ಅವರನ್ನು ಇದೇ ಹೆದ್ದಾರಿಯಲ್ಲಿ ಸರಕ್ಕನೆ ಒಯ್ದು ಬಿಡುತ್ತಾರೆ.
ಆದರೆ ಹೆದ್ದಾರಿಯಲ್ಲಿ ಬಿದ್ದಿರುವ ಈ ಗುಂಡಿಗಳನ್ನು ಮುಚ್ಚಬೇಕು, ಇದನ್ನು ಹಾಗೆಯೇ ಬಿಟ್ಟರೆ ಬಡಪಾಯಿ ದ್ವಿಚಕ್ರ ಸವಾರರ ಜೀವಕ್ಕೆ ಹಾನಿ ಆಗಬಹುದು ಎಂಬ ಕಿಂಚಿತ್ ಕಾಳಜಿ ಇವರಿಗೆ ಬಂದಿಲ್ಲ. ಇತ್ತೀಚೆಗೆ ನಂತೂರು ವೃತ್ತದಿಂದ ಸುರತ್ಕಲ್ ವರೆಗೆ ಹೆದ್ದಾರಿ ಗುಂಡಿ ಮುಚ್ಚುವುದಕ್ಕಾಗಿ ಹೈವೇ ಇಲಾಖೆಯಿಂದ ವಾಹನ ಸವಾರರಿಗೆ ಸೂಚನೆ ನೀಡಲಾಗಿತ್ತು. ಕೊಟ್ಟಾರ, ಕುಳೂರು, ಪಣಂಬೂರಿನಲ್ಲಿ ಕೆಲವು ಗುಂಡಿಗಳನ್ನು ಮುಚ್ಚಲಾಗಿದ್ದರೂ, ಕಳೆದೊಂದು ವಾರದಿಂದ ಬಿದ್ದ ಮಳೆಯಿಂದಾಗಿ ಮತ್ತೆ ಗುಂಡಿಗಳು ಬಾಯ್ದೆರೆದು ನಿಂತಿವೆ.
ಇಲ್ಲಿ ಕೊಟ್ಟಿರುವ ಫೋಟೊಗಳು ಕೆಪಿಟಿ ವೃತ್ತದಿಂದ ನಂತೂರು ವೃತ್ತದ ನಡುವಿನ ಒಂದು ಬದಿಯ ರಸ್ತೆ ಗುಂಡಿಗಳು ಮಾತ್ರ. ಸರಿಯಾಗಿ ಲೆಕ್ಕ ಹಾಕಿದರೆ 20ಕ್ಕೂ ಹೆಚ್ಚು ಗುಂಡಿಗಳಿದ್ದು ಕೆಲವಂತೂ ಸವಾರರ ಪ್ರಾಣ ಕಿತ್ತುಕೊಳ್ಳುವ ರೀತಿ ಇದೆ. ಈ ಗುಂಡಿಗೆ ಬಿದ್ದು ಯಾರೋ ಪ್ರಾಣ ಕಳಕೊಳ್ಳುವಷ್ಟರ ಮಟ್ಟಿಗೆ ಅಧಿಕಾರಿಗಳು ಕಾಯೋದನ್ನು ಮಾಡಬೇಡಿ. ಅದರ ಮೊದಲು ಈ ಗುಂಡಿಗಳನ್ನು ಕಲ್ಲು ಮಣ್ಣು ಹಾಕಿಯಾದರೂ ಮುಚ್ಚಿ ಬಿಡಿ ಎನ್ನುವುದು ಜನಸಾಮಾನ್ಯರ ಕಾಳಜಿ.
The #KPT–#Nantoor #highway stretch has become a death trap for two-wheeler riders. On Saturday night, a #Biker crashed into a deep #pothole near Nanthur—saved only by a bus driver’s quick reflexes. How many close calls before authorities wake up? #Mangaluru #PotholeDeathtrap pic.twitter.com/COMR3zKh2I
— Headline Karnataka (@hknewsonline) August 31, 2025
The stretch of highway between KPT Junction and Nanthur has turned into a death trap for two-wheeler riders, with massive potholes posing a serious risk to commuters. On Saturday night, a scooter rider fell into a deep pothole near Nanthur, skidding and crashing to the ground. His life was spared only due to the alertness of a private bus driver, who applied sudden brakes just in time.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
21-10-25 10:51 pm
Mangalore Correspondent
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm