ಬ್ರೇಕಿಂಗ್ ನ್ಯೂಸ್
31-08-25 08:20 pm Mangalore Correspondent ಕರಾವಳಿ
ಉಳ್ಳಾಲ, ಆ.31 : ಯುವ ಸಮುದಾಯಕ್ಕೆ ಭತ್ತವನ್ನ ಹೇಗೆ ಬೆಳೆಸಲಾಗುವುದು ಮತ್ತು ಅದರ ಬಗ್ಗೆ ಸಮಗ್ರ ಮಾಹಿತಿಯ ಜೊತೆಗೆ ಕೃಷಿ ಕಾಯಕದಲ್ಲೂ ಅವರನ್ನ ತೊಡಗಿಸುವ ಕಾರ್ಯ ಅತ್ಯಂತ ಅರ್ಥ ಪೂರ್ಣವಾಗಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯ ಹಡಿಲು ಬಿದ್ದ ಕೃಷಿ ಭೂಮಿಗಳನ್ನ ಸರ್ವೆ ಮಾಡಿಸಿ ಕೃಷಿ ಇಲಾಖೆ ಮೂಲಕ ಗ್ರಾಮವಾರು ಕೇಂದ್ರೀಕರಿಸಿ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿ ಫಲವತ್ತಾದ ಉಳ್ಳಾಲ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗುವುದೆಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ, ಮಾಧ್ಯಮ ಕೇಂದ್ರ ತೊಕ್ಕೊಟ್ಟು, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೇತೃತ್ವದಲ್ಲಿ ಕೃಷಿ ಇಲಾಖೆ ಮಂಗಳೂರು, ಪಿಲಾರಿನ ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಯ ಸಹಯೋಗ ಮತ್ತು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಮಾರ್ಗದರ್ಶನದೊಂದಿಗೆ ಗ್ರಾಮ ಸಂಪರ್ಕ ಅಭಿಯಾನದ ಅಂಗವಾಗಿ ಸೋಮೇಶ್ವರ ಗ್ರಾಮದ ಪಿಲಾರು ಬೈಲಿನ ಹಡಿಲು ಗದ್ದೆಯಲ್ಲಿ "ಕೃಷಿಯೆಡೆಗೆ ವಿದ್ಯಾರ್ಥಿ ಸಮೂಹ ಹಾಗೂ ಯುವಜನತೆಯ ನಡೆ" ಕೃಷಿ ಅಧ್ಯಯನ ಹಾಗೂ ಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.








ತುಳುನಾಡಿನ ಸಂಸ್ಕೃತಿಯನ್ನು ಗದ್ದೆಗಳಲ್ಲಿ ಕಾಣಲು ಸಾಧ್ಯ. ರೈತರ ಕಷ್ಟಗಳನ್ನು ಅನುಭವಿಸಿದಾಗಲೇ ನಾವು ತಿನ್ನುವ ಅನ್ನದ ಮೌಲ್ಯ ತಿಳಿಯುತ್ತದೆ. ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಸುವುದು ಸಾಮಾಜಿಕ ಕಳಕಳಿಯ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳ ಯಶಸ್ಸಿಗೆ ಸಂಘ ಸಂಸ್ಥೆಗಳ ಬೆಂಬಲ ಅಗತ್ಯವಿದೆ. ಮುಂದಿನ ಜನವರಿ ತಿಂಗಳ ಮೊದಲು ಭತ್ತ ಕೃಷಿ ಬಗ್ಗೆ ಚರ್ಚಿಸಿ ಮಾದರಿ ಯೋಜನೆ ರೂಪಿಸಲಾಗುವುದು ಎಂದರು.
ಕೃಷಿ ಚಟುವಟಿಕೆಯಲ್ಲಿ ತೊಡಗಿಸಲೆಂದೇ ಜೆರ್ಸಿ ತೊಟ್ಟು ಪೂರ್ವ ತಯಾರಿಯಲ್ಲಿ ಬಂದಿದ್ದ ಸ್ಪೀಕರ್ ಖಾದರ್ ಅವರು ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಗದ್ದೆಯಲ್ಲೇ ಉಳಿದು ಪತ್ರಕರ್ತರು ಮತ್ತು ವಿದ್ಯಾರ್ಥಿಗಳೊಂದಿಗೆ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನ ತೊಡಗಿಸಿ ನಾಟಿ ಕಾರ್ಯ ನಡೆಸಿದರು. ಟಿಲ್ಲರ್ ಯಂತ್ರವನ್ನು ಸ್ವತಃ ಚಲಾಯಿಸಿ ಒಂದು ಗದ್ದೆಯನ್ನು ಸಂಪೂರ್ಣವಾಗಿ ಉಳುಮೆ ಮಾಡುವ ಮೂಲಕ ತಮ್ಮೊಳಗಿನ ಕೃಷಿ ಪ್ರೇಮವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೂ ಭತ್ತ ನಾಟಿಯ ಬಗ್ಗೆ ಮಾಹಿತಿ ಹಂಚಿದರು. ಕೃಷಿ ಗೀತೆಗೆ ಹೆಜ್ಜೆ ಹಾಕಿ ಕುಣಿದ ವಿದ್ಯಾರ್ಥಿ ಸಮೂಹಕ್ಕೆ ಕರತಾಡನ ನೀಡುವ ಮೂಲಕ ಸ್ಪೀಕರ್ ಖಾದರ್ ಅವರು ಪ್ರೋತ್ಸಾಹ ನೀಡಿದರು.
ಕೋಟೆಕಾರು ವ್ಯ.ಸೇ.ಸ. ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ಸೀತಾರಾಮ ಶೆಟ್ಟಿ ಪಿಲಾರು ಮೇಗಿನಮನೆ, ಸಮಾಜ ಸೇವಕರಾದ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಪ್ರ. ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲು ಮೊದಲಾದವರು ಉಪಸ್ಥಿತರಿದ್ದರು.
Mangalore Karnataka Legislative Assembly Speaker U.T. Khader has called for a survey of all fallow paddy fields in Ullal taluk with the aim of reviving them through coordinated efforts involving the agriculture department, local cooperative societies, and community organizations
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm