ಬ್ರೇಕಿಂಗ್ ನ್ಯೂಸ್
30-08-25 04:23 pm Mangalore Correspondent ಕರಾವಳಿ
ಮಂಗಳೂರು, ಆ.30: ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ಡಿಕ್ಕಿಯಾಗಿ ಆರು ಮಂದಿ ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಬಸ್ಸುಗಳ ಸುಸ್ಥಿತಿ ಬಗ್ಗೆ ಪ್ರಶ್ನೆ ಎದುರಾಗಿದೆ. ಕಾಸರಗೋಡು, ಮಂಜೇಶ್ವರ ಭಾಗದ ಸಾರ್ವಜನಿಕರು ಅಧಿಕಾರಿಗಳ ಜೊತೆಗೆ ಗಡಿಭಾಗ ತಲಪಾಡಿಗೆ ಬಂದು ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ತಪಾಸಣೆ ಮಾಡಿಸಿದ್ದಾರೆ.
ತಲಪಾಡಿಯಲ್ಲಿ ಕಾಸರಗೋಡು ಆರ್ ಟಿಓ ಅಧಿಕಾರಿಗಳು ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದು ಈ ವೇಳೆ ಆರು ಬಸ್ಸುಗಳನ್ನು ಪರೀಕ್ಷೆ ಮಾಡಿದ್ದಾರೆ. ಈ ಪೈಕಿ ಮೂರರಲ್ಲಿ ಟೈರ್ ಚೆನ್ನಾಗಿಲ್ಲ ಎಂದು ಹೇಳಿದ್ದರಿಂದ ಸ್ಥಳೀಯ ಕಾರ್ಯಕರ್ತರು, ಮೂರು ಬಸ್ಸುಗಳಿಂದ ಪ್ರಯಾಣಿಕರನ್ನು ಇಳಿಸಿ ಬೇರೆ ಬಸ್ಸುಗಳಿಗೆ ಹತ್ತಿಸಿದ್ದಾರೆ.
ರಸ್ತೆ ಸುರಕ್ಷತಾ ಏಕ್ಷನ್ ಕಮಿಟಿಯ ಜಕರಿಯಾ ಮಂಜೇಶ್ವರ ಮತ್ತಿತರರು, ಮಂಜೇಶ್ವರ ಠಾಣೆ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಗಡಿ ಪ್ರದೇಶಕ್ಕೆ ಆಗಮಿಸಿದ್ದರು. ಜನರ ಜೀವದ ಪ್ರಶ್ನೆ ಇದಾಗಿದ್ದು ಅಸುರಕ್ಷಿತ ಸಾರಿಗೆ ಬಸ್ ಗಳಲ್ಲಿ ಸಾರ್ವಜನಿಕರು ಸಂಚಾರ ಮಾಡುವಂತೆ ಆಗಬಾರದು ಎಂದು ಹೇಳಿ ಟೈರ್ ಸವೆದಿದ್ದ ಬಸ್ಸುಗಳಿಂದ ಜನರನ್ನು ಇಳಿಸಿ ಮತ್ತೊಂದು ಬಸ್ಸಿಗೆ ಹತ್ತಿಸಿದ್ದಾರೆ.
ಕರ್ನಾಟಕ ಕೆಎಸ್ಸಾರ್ಟಿಸಿ ಪರವಾಗಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಕೇರಳದ ಸಾರಿಗೆ ಅಧಿಕಾರಿಗಳು ಆರು ಬಸ್ಸುಗಳ ಟೈರ್ ಸವೆದಿರುವ ಆರೋಪ ಮಾಡಿದ್ದಾರೆ. ನಮ್ಮ ಬಸ್ಗಳು ಉತ್ತಮ ಫಿಟ್ನೆಸ್ ಹೊಂದಿದ್ದು ಸರ್ಟಿಫಿಕೇಟ್ ಇದೆ. ನಾವು ಈ ವಿಚಾರದಲ್ಲಿ ವಾದ ಮುಂದುವರೆಸುವುದಿಲ್ಲ. ಪ್ರಯಾಣಿಕರ ಸುರಕ್ಷೆ ನಮ್ಮ ಆದ್ಯತೆಯಾಗಿದ್ದು ಬಸ್ಸುಗಳನ್ನು ಸುಸ್ಥಿತಿಯಲ್ಲಿ ಇಡುತ್ತೇವೆ ಎಂದಿದ್ದಾರೆ. ಮೊನ್ನೆಯ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಕಾರಣ. ಅದರಲ್ಲಿ ಟೈರ್ ಸವೆದಿರುವುದರ ಪಾತ್ರ ಇಲ್ಲ. ಟೈರ್ ಹಾಳಾಗಿದ್ದರೆ ಆನಂತರ ಇನ್ನೊಬ್ಬ ಚಾಲಕ ಅದೇ ಬಸ್ಸನ್ನು ಹೇಗೆ ಚಲಾಯಿಸಿಕೊಂಡು ಹೋಗಿದ್ದರು. ಅಂಥದ್ದೇನೂ ಪ್ರಶ್ನೆ ಇಲ್ಲ ಎಂದು ರಾಜೇಶ್ ಶೆಟ್ಟಿ ಹೇಳಿದ್ದಾರೆ.
ಅಪಘಾತಕ್ಕೀಡಾದ ಬಸ್ಸನ್ನು ಕಾಸರಗೋಡು ಸಾರಿಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದು ತಾಂತ್ರಿಕವಾಗಿ ಬಸ್ ಸುಸ್ಥಿತಿಯಲ್ಲಿ ಇದೆ, ಆದರೆ ಟೈರ್ ಸವೆದು ಫ್ಲಾಟ್ ಆಗಿದೆ. ರಸ್ತೆ ನೇರ ಮತ್ತು ನಯವಾಗಿದ್ದು ಮಳೆಯಿಂದಾಗಿ ಒದ್ದೆಯಾಗಿತ್ತು. ಟೈರ್ ಫ್ಲಾಟ್ ಆಗಿದ್ದರಿಂದ ಬ್ರೇಕ್ ಹಾಕಿದ್ರೂ ಹಿಡಿಯದೆ ಅಪಘಾತಕ್ಕೆ ಕಾರಣವಾಗಿತ್ತು ಎಂದಿದ್ದಾರೆ. ಇದಲ್ಲದೆ, ಬಸ್ಸುಗಳಿಗೆ ಡೋರ್ ಅಳವಡಿಸಬೇಕೆಂದು ಮಂಗಳೂರು ಆರ್ ಟಿಓಗೆ ಪತ್ರ ಬರೆದಿದ್ದರೂ ಅದನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದೂ ಆರೋಪಿಸಿದ್ದಾರೆ.
ನಮ್ಮ ಬಸ್ಸುಗಳನ್ನು ನಿಲ್ಲಿಸುವುದಕ್ಕೆ ಯಾರಿಗೂ ಅಧಿಕಾರ ಇಲ್ಲ. ಗಡಿಯಲ್ಲಿ ಬಸ್ಸುಗಳನ್ನು ನಿಲ್ಲಿಸಿದ್ದರ ವಿಡಿಯೋ ನೋಡಿದ್ದೇವೆ. ಖಾಸಗಿ ಬಸ್ಸುಗಳು, ಆಟೋಗಳ ಲಿಂಕ್ ಇರಿಸಿಕೊಂಡವರು ಅದರಲ್ಲಿದ್ದಾರೆ. ಮಂಜೇಶ್ವರ ಪೊಲೀಸರು ಕರೆ ಮಾಡಿ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಬಸ್ ನಿಲ್ಲಿಸಿದವರ ಬಗ್ಗೆ ದೂರು ನೀಡಲು ಅವಕಾಶ ಇತ್ತು. ಪೊಲೀಸರ ಮಾತಿಗೆ ಒಪ್ಪಿ ದೂರು ನೀಡಿಲ್ಲ ಎಂದು ಮಂಗಳೂರು ಆರ್ ಟಿಓ ಅಧಿಕಾರಿಗಳು ತಿಳಿಸಿದ್ದಾರೆ.
Following a tragic accident near Talapady involving a KSRTC bus and an auto-rickshaw that claimed six lives, questions are being raised about the roadworthiness of Karnataka’s public transport buses. In response, officials and local residents from Kasaragod and Manjeshwar conducted surprise inspections of KSRTC buses at the Karnataka-Kerala border in Talapady.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
21-10-25 10:51 pm
Mangalore Correspondent
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm