ಬ್ರೇಕಿಂಗ್ ನ್ಯೂಸ್
26-08-25 10:57 pm Mangalore Correspondent ಕರಾವಳಿ
ಮಂಗಳೂರು, ಆ.26 : ಧರ್ಮಸ್ಥಳ ಪ್ರಕರಣದಲ್ಲಿ ಸಮಾಜ ವಿರೋಧಿ ಶಕ್ತಿಗಳು ಒಗ್ಗೂಡಿದ್ದು ಹಿಂದುಗಳ ಶ್ರದ್ಧಾಕೇಂದ್ರವನ್ನು ಅಪಮಾನಿಸುವ ಕೆಲಸ ಮಾಡುತ್ತಿದ್ದಾರೆ. ಸಮೀರ್ ಎಂ.ಡಿ ಎಂಬಾತ ಸಾವಿರಾರು ಜನರನ್ನು ಹೂತು ಹಾಕಲಾಗಿದೆ ಎಂದು ಸುದ್ದಿ ಹಬ್ಬಿಸಿದರೆ, ಈಗ ಕ್ರಿಶ್ಚಿಯನ್ ಪಾದ್ರಿಯೊಬ್ಬ ನಕಲಿ ಮಾನವ ಹಕ್ಕು ಆಯೋಗದ ಹೆಸರಲ್ಲಿ ರೌಡಿಶೀಟರ್ ಜೊತೆಗೆ ತನಿಖೆಗೆ ಬಂದಿದ್ದಾನೆ. ಇದನ್ನು ನೋಡಿದರೆ ಇದರಲ್ಲಿ ಭಾರೀ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟವಾಗುತ್ತಿದೆ. ಕ್ರಿಶ್ಚಿಯನ್ ಮತ ಪ್ರಚಾರಕನಿಗೆ ಧರ್ಮಸ್ಥಳ ಕ್ಷೇತ್ರದಲ್ಲೇನು ಕೆಲಸ, ಇವರಿಗೆಲ್ಲ ಫಂಡಿಂಗ್ ಮಾಡಿರೋದು ಯಾರು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿ ನಡೆಸಿದ ಅವರು, ಜಾನ್ ಶೈಮನ್ ಎಂಬಾತ ನಕಲಿ ಮಾನವ ಹಕ್ಕುಗಳ ಆಯೋಗದ ಹೆಸರಲ್ಲಿ ಬೆಳ್ತಂಗಡಿಗೆ ಬಂದಿದ್ದಾನೆ. ಜೊತೆಗೆ ಹುಬ್ಬಳ್ಳಿಯ ರೌಡಿ ಶೀಟರ್ ಮದನ್ ಬುಗಡಿ ಎಂಬಾತನನ್ನೂ ಆಯೋಗದ ಅಧಿಕಾರಿಯೆಂದು ಕರೆತಂದಿದ್ದಾನೆ. ಇವರಿಗೆ ಧರ್ಮಸ್ಥಳದಲ್ಲಿ ಯಾವ ರೀತಿಯ ಕೆಲಸ ಎಂಬುದನ್ನು ತನಿಖೆ ಮಾಡಬೇಕು. ಇಂತಹ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್ ಆಗಿದೆ, ವ್ಗವಸ್ಥಿತವಾಗಿ ಸಂಚು ನಡೆಸಿದ್ದಾರೆಂಬ ಸಂಶಯ ಜನರಲ್ಲಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಆಗಬೇಕು ಎಂದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಸಮೀರನಿಗೆ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಲು ಸಾಕಷ್ಟು ಫಂಡಿಂಗ್ ಆಗಿದೆ. ವಿದೇಶದಿಂದ ಹಣ ರವಾನೆ ಆಗಿರುವುದನ್ನು ಪತ್ತೆ ಮಾಡಲು ಎನ್ಐಎ ತನಿಖೆ ಮಾಡಬೇಕು ಎಂದರು. ಆದರೆ ಎಸ್ಐಟಿ ತನಿಖೆ ಆಗ್ತಿರುವಾಗ ಎನ್ಐಎ ಯಾಕೆ ಬೇಕು ಎಂದು ಕೇಳಿದ ಪ್ರಶ್ನೆಗೆ, ಎಸ್ಐಟಿ ತನಿಖೆ ಆಗ್ತಾ ಇದೆ. ವಿದೇಶಿ ಫಂಡಿಂಗ್, ಷಡ್ಯಂತ್ರದ ಬಗ್ಗೆ ಮಾತ್ರ ತನಿಖೆಯನ್ನು ಕೇಂದ್ರೀಯ ಏಜೆನ್ಸಿಗಳು ಮಾಡಬೇಕು. ಅದರಿಂದ ತನಿಖೆಗೆ ಹೆಚ್ಚು ಅನುಕೂಲ ಎಂದರು. ಸುದ್ದಿಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ವಸಂತ ಪೂಜಾರಿ ಮತ್ತಿತರರಿದ್ದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಚಾರ ನಡೆಸುವುದನ್ನು ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಸೆ.1ರಂದು ಇಡೀ ರಾಜ್ಯದಿಂದ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳಕ್ಕೆ ಬರಲಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನೆಯಂತೆ ಎಲ್ಲ ಜಿಲ್ಲೆಗಳಿಂದಲೂ ಕಾರು, ಬಸ್ ಗಳಲ್ಲಿ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬರಲಿದ್ದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಬಲ ತುಂಬಲಿದ್ದಾರೆ ಎಂದು ಸತೀಶ್ ಕುಂಪಲ ಹೇಳಿದರು.
BJP leaders have alleged a major conspiracy behind the recent controversies surrounding Dharmasthala, claiming that anti-social forces are deliberately attempting to tarnish the sanctity of one of the most revered Hindu religious centers. BJP Dakshina Kannada district president Satish Kumpala has demanded a National Investigation Agency (NIA) probe into suspected foreign funding and the alleged involvement of Christian evangelist John Shamine under the guise of human rights activists.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm