YouTuber Sameer MD, Beltangady Police Station: ವಿಚಾರಣೆಗೆ ನಾಲ್ವರು ವಕೀಲರ ಜೊತೆ ಬೆಳ್ತಂಗಡಿ ಠಾಣೆಗೆ ಬಂದ ಸಮೀರ್​ ; ದಾಖಲೆ ಸಮೇತ ಠಾಣೆಗೆ ಯೂಟ್ಯೂಬರ್ ಎಂಟ್ರಿ 

24-08-25 02:48 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿರುವ ಅಪರಾಧ ಕೃತ್ಯಗಳ ಆರೋಪ ಬಗ್ಗೆ AI ವಿಡಿಯೋ ಮಾಡಿದ್ದ ಯೂಟ್ಯೂಬರ್​ ಸಮೀರ್​ ವಿರುದ್ಧ ಕೇಸ್ ದಾಖಲಾಗಿದೆ. ಬಂಧನ ಭೀತಿಯಲ್ಲಿದ್ದ ಯುಟ್ಯೂಬರ್ ಎಂಡಿ ಸಮೀರ್​ಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಬೆಳ್ತಂಗಡಿ, ಆ 24 : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿರುವ ಅಪರಾಧ ಕೃತ್ಯಗಳ ಆರೋಪ ಬಗ್ಗೆ AI ವಿಡಿಯೋ ಮಾಡಿದ್ದ ಯೂಟ್ಯೂಬರ್​ ಸಮೀರ್​ ವಿರುದ್ಧ ಕೇಸ್ ದಾಖಲಾಗಿದೆ. ಬಂಧನ ಭೀತಿಯಲ್ಲಿದ್ದ ಯುಟ್ಯೂಬರ್ ಎಂಡಿ ಸಮೀರ್​ಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜೊತೆಗೆ ಕರೆದಾಗ ವಿಚಾರಣೆಗೆ ಹಾಜರಾಗಲು ಆದೇಶ ನೀಡಿತ್ತು. ಈ ಹಿನ್ನೆಲೆ ಇಂದು ಸಮೀರ್​ ಬೆಳ್ತಂಗಡಿ ಪೊಲೀಸ್​ ಠಾಣೆಗೆ ವಿಚಾರಣೆಗೆಂದು ಆಗಮಿಸಿದ್ದಾರೆ.

ಸೌಜನ್ಯ ಕೇಸ್​ ಹೋರಾಟಗಾರ ಮಹೇಶ್ ತಿಮರೋಡಿ ಅವರ ಕಾರಿನಲ್ಲಿ ನಾಲ್ವರು ವಕೀಲರ ಜೊತೆ ಯೂಟ್ಯೂಬರ್ ಸಮೀರ್​ ಬೆಳ್ತಂಗಡಿ ಪೊಲೀಸ್​ ಠಾಣೆಗೆ ಹಾಜರಾಗಿದ್ದಾರೆ. ​ನೋಟಿಸ್​ ನೀಡಿದ್ದ ಹಿನ್ನೆಲೆ ಸಮೀರ್​ ವಿಚಾರಣೆಗೆ ಹಾಜರಾಗಿದ್ದಾರೆ.

ನಾಲ್ವರು ವಕೀಲರ ಜೊತೆ ಬಂದ ಸಮೀರ್ : 

ತಿಮರೋಡಿಯ ಕಾರಿನಲ್ಲಿ ನಾಲ್ವರು ವಕೀಲರ ಜೊತೆ ಬಂದ ಸಮೀರ್ ವಿಚಾರಣೆಗೆಂದು ಠಾಣೆ ಒಳಗೆ ಹೋಗಿದ್ದಾರೆ. ಕಳೆದೆರಡು ದಿನಗಳಿಂದ ಧರ್ಮಸ್ಥಳ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಆತನ ಮನೆಗೆ ನೋಟಿಸ್‌ ಅಂಟಿಸಿ ಬಂದಿದ್ರು.

ಕ್ರೈಮ್ ನಂ 42/2025 ಕೇಸ್ ಸಂಬಂಧಿಸಿದಂತೆ ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈಗಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ರು. ಸಮೀರ್​ ಹಾಜರಾಗಿರಲಿಲ್ಲ.

ಬಂಧನ ಭೀತಿಯಲ್ಲಿದ್ದ ಸಮೀರ್​ಗೆ ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ವಿಚಾರಣೆಗೆ ಸಹಕರಿಸುವಂತೆ ಆದೇಶದಲ್ಲಿ ಸ್ಪಷ್ಟವಾಗಿ ‌ಉಲ್ಲೇಖ ಮಾಡಲಾಗಿದೆ.

YouTuber M.D. Sameer, who had created an AI-generated video related to alleged criminal incidents in Dharmasthala, appeared for police inquiry today at the Beltangady Police Station, accompanied by four lawyers. A case had been registered against him in connection with the video, and he was recently granted anticipatory bail by the Dakshina Kannada District Sessions Court.