ಬ್ರೇಕಿಂಗ್ ನ್ಯೂಸ್
20-08-25 04:28 pm Mangalore Correspondent ಕರಾವಳಿ
ಮಂಗಳೂರು, ಆ.20 : ಧರ್ಮಸ್ಥಳದಲ್ಲಿ 2003ರಲ್ಲಿ ಕಾಣೆಯಾಗಿದ್ದಾಳೆ ಎನ್ನಲಾದ ಅನನ್ಯಾ ಭಟ್ ಎಂಬ ಯವತಿಯ ತಾಯಿ ಸುಜಾತಾ ಭಟ್ ಪ್ರಕರಣ ದಿನದಿಂದ ದಿನಕ್ಕೆ ಗೋಜಲು ಗೋಜಲಾಗುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆ ಎಂದು ಅನಾಮಿಕ ದೂರುದಾರ ಪೊಲೀಸ್ ನೀಡಿದ ದೂರಿನ ಬೆನ್ನಲ್ಲೇ ಜುಲೈ 10ರಂದು ಸುಜಾತಾ ಭಟ್ ಮಂಗಳೂರಿನಲ್ಲಿ ಎಸ್ಪಿ ಭೇಟಿಯಾಗಿ ತನ್ನ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಆದರೆ ಈಗ ಮಗಳು ಅನನ್ಯಾ ಭಟ್ ಬಗ್ಗೆ ಮಾಹಿತಿಗಳನ್ನು ನೀಡುವುದರಲ್ಲಿ, ಫೋಟೋ ತೋರಿಸಿದ್ದರಲ್ಲಿ ಸುಜಾತಾ ಎಡವಟ್ಟು ಮಾಡಿಕೊಂಡಿದ್ದಾರೆಯೇ ಎನ್ನುವ ಸಂಶಯ ಬರತೊಡಗಿದೆ.
ಈ ನಡುವೆ, ಧರ್ಮಸ್ಥಳದಲ್ಲಿ ಶವ ಶೋಧಕ್ಕಾಗಿ ಅಗೆತ ಆಗುತ್ತಿದ್ದಾಗ ಆಗಿಂದಾಗ್ಗೆ ವೈಜ್ಞಾನಿಕ ಮಾದರಿಯಲ್ಲಿ ಶೋಧನೆ ಆಗಬೇಕು, ಜಿಪಿಆರ್ ತಂತ್ರಜ್ಞಾನ ಬಳಸಬೇಕು ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಅವರೂ ಉಲ್ಟಾ ಹೊಡೆದಿದ್ದಾರೆ. ಟಿವಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ತನಗೂ ಸುಜಾತಾ ಭಟ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಕಳೆದ ಜುಲೈ 10ರಂದು ಅವರು ಫೋನ್ ಮಾಡಿ ಕರೆಸಿಕೊಂಡಾಗಲೇ ಪರಿಚಯ ಆಗಿದ್ದು. ತನ್ನ ಗಂಡ ತೀರಿಕೊಂಡಿದ್ದಾರೆ, ಯಾರೂ ಇಲ್ಲ. ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಸಹಕಾರ ಬೇಕೆಂದು ಮಂಗಳೂರಿಗೆ ಕರೆಸಿಕೊಂಡಿದ್ದರು.
ಮಾಧ್ಯಮಗಳ ಪ್ರಶ್ನೆಯಿಂದಾಗಿ ಮಗಳ ಫೋಟೊ ತೋರಿಸುವಂತೆ ಹೇಳಿದಾಗ, ಮೊನ್ನೆ ಒಂದು ಫೋಟೋ ರಿಲೀಸ್ ಮಾಡಿದ್ದರು. ಅಲ್ಲದೆ, ದೂರು ನೀಡುವ ಸಂದರ್ಭದಲ್ಲಿ ಎಲ್ಲ ವಿಚಾರದ ಬಗ್ಗೆ ಸರಿಯಾಗಿ ಗೊತ್ತಿದೆ, ಹೌದಲ್ವಾ. ತಪ್ಪು ಮಾಹಿತಿ ಕೊಟ್ಟರೆ ಶಿಕ್ಷೆಯಾಗುತ್ತೆ ಎಂದೂ ಹೇಳಿದ್ದೆ. ಎಲ್ಲವನ್ನೂ ಒಪ್ಪಿಕೊಂಡು ಅವರೇ ದೂರು ಪತ್ರವನ್ನು ಬರೆದು ಪೊಲೀಸರಿಗೆ ನೀಡಿದ್ದರು. ಅಲ್ಲದೆ, ಪೊಲೀಸರು ಕೇಳಿದ ಪ್ರಶ್ನೆಗಳಿಗೂ ಉತ್ತರ ನೀಡಿದ್ದರು. ಆನಂತರ, ಒಂದು ಲಿಖಿತ ಹೇಳಿಕೆಯನ್ನೂ ಪೊಲೀಸರಿಗೆ ನೀಡಿದ್ದರು. ಅದು ಬಿಟ್ಟರೆ ನನಗೆ ಬೇರಾವುದೇ ಪರಿಚಯ ಇಲ್ಲ. ನಾನು ನನ್ನ ಪಾಡಿಗೆ ಬೆಂಗಳೂರಿನಲ್ಲಿ ಕೆಲಸದಲ್ಲಿ ತೊಡಗಿದ್ದೇನೆ. ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆ ಕೊಡುವಂತೆ ಅವರಲ್ಲೇ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಆಕೆ ಹೇಳಿದ್ದೇ ಕತೆ..
ಸುಜಾತಾ ಭಟ್ ಮೂಲತಃ ಉಡುಪಿ ಜಿಲ್ಲೆಯ ಪರೀಕ ಎಂಬ ಊರಿನವರಾಗಿದ್ದು ಮನೆಯಲ್ಲಿನ ಸ್ಥಿತಿಯಿಂದಾಗಿ ಬೇರೆ ಬೇರೆ ಕಡೆ ಜೀವನ ಮಾಡಿದ್ದೆ ಎನ್ನುತ್ತ ಮಾಧ್ಯಮಗಳಿಗೆ ತನ್ನ ಹಳೆ ಕತೆಯನ್ನೂ ಹೇಳಿದ್ದಾರೆ. ಮನೆಯವರಿಗೆ ತಿಳಿಯದಂತೆ ಅನಿಲ್ ಭಟ್ ಎಂಬವರೊಂದಿಗೆ ಮದುವೆಯಾಗಿದ್ದೆ. ಇದರಿಂದ ಸಿಟ್ಟಿಗೆದ್ದ ತಂದೆ ಮನೆಯವರು ನನಗೆ ಕಿರುಕುಳ ನೀಡಲಾರಂಭಿಸಿದ್ದರು. ಅನಿಲ್ ಅವರಿಂದಾಗಿ ಹೆಣ್ಣು ಮಗುವಾಗಿದ್ದು ಆಕೆಯೇ ಅನನ್ಯಾ ಭಟ್. ಆದರೆ ಆ ಮಗುವನ್ನು ನನ್ನಿಂದ ದೂರ ಮಾಡುವುದಕ್ಕಾಗಿ ತಂದೆ ಮನೆಯವರು ನೀರಿನಲ್ಲಿ ಬಿಟ್ಟಿದ್ದರು. ಅದೇ ವೇಳೆಗೆ, ನಮ್ಮದೇ ಹಳ್ಳಿಯ ಅರವಿಂದ್ ಮತ್ತು ವಿಮಲಾ ದಂಪತಿ ಆ ಮಗುವನ್ನು ಪಡೆದು ಸಾಕಿದ್ದರು. ಎಂಟನೇ ಕ್ಲಾಸ್ ವರೆಗೂ ಮಂಗಳೂರಿನಲ್ಲಿ ಆ ದಂಪತಿ ಸಾಕಿದ್ದು ಆನಂತರ ಅವಳನ್ನು ನಾನು ಕೊಲ್ಕತ್ತಾಗೆ ಕರೆದುಕೊಂಡು ಹೋಗಿದ್ದೆ.
ಮಣಿಪಾಲದಲ್ಲಿದ್ದಾಗ ನಾಪತ್ತೆ ಆಗಿದ್ದಳು
ಕೊಲ್ಕತ್ತಾದಲ್ಲಿ ಸ್ಟೆನೋ ಗ್ರಾಫರ್ ಆಗಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಸಿಬಿಐ ಕಚೇರಿಯಲ್ಲೂ ಸ್ಟೆನೋ ಆಗಿ ಕೆಲಸ ಮಾಡಿದ್ದೇನೆ, ಪರ್ಮನೆಂಟ್ ಅಲ್ಲ. ತಾತ್ಕಾಲಿಕ ನೆಲೆಯಲ್ಲಿ ಹಲವು ಬಾರಿ ಕೆಲಸ ಮಾಡಿದ್ದೇನೆ. ಅಲ್ಲಿರುವಾಗ ಶೇಟ್ ಒಬ್ಬರ ಪರಿಚಯ ಆಗಿತ್ತು. ಅಲ್ಲಿಯೇ ಮಗಳನ್ನೂ ಜೊತೆಗಿರಿಸಿ ಸಾಕಿದ್ದೆ. ಆನಂತರ ರಿಪ್ಪನ್ ಪೇಟೆಯ ಪ್ರಭಾಕರ್ ಎಂಬವರ ಪರಿಚಯವಾಗಿ ಅಲ್ಲಿಯೂ ಹೋಗಿ ಬರ್ತಾ ಇದ್ದೆ. ಅಲ್ಲಿಗೆ ಮಗಳನ್ನು ಕರೆದುಕೊಂಡು ಹೋಗಿರಲಿಲ್ಲ. ಕೊಲ್ಕತ್ತಾದಲ್ಲಿ ಪಿಯುಸಿ ವರೆಗೂ ಕಲಿತಿದ್ದ ಮಗಳನ್ನು 2003ರಲ್ಲಿ ಮಣಿಪಾಲದಲ್ಲಿ ಎಂಬಿಬಿಎಸ್ ಕಲಿಯಲೆಂದು ಕರೆತಂದಿದ್ದೆ. ಅಲ್ಲಿ ಸೇರ್ಪಡೆಯೂ ಮಾಡಿದ್ದೆ. ನಾನು ಮಾತ್ರ ಕೊಲ್ಕತ್ತಾದಲ್ಲಿಯೇ ಇದ್ದೆ. ಅಲ್ಲಿರುವಾಗಲೇ ಮಗಳು ಅನನ್ಯಾ ಧರ್ಮಸ್ಥಳಕ್ಕೆ ಹೋದವಳು ಕಾಣೆಯಾಗಿದ್ದಳು. ಆಕೆ ನನ್ನದೇ ಮಗಳು, ಬರ್ತ್ ಸರ್ಟಿಫಿಕೇಟ್ ಕೂಡ ಇದೆ, ಫೋಟೋ ಒಂದೇ ಇರುವುದು. ಇಷ್ಟಕ್ಕೂ ನಾನು ಯಾರ ಬಗ್ಗೆಯೂ ಆರೋಪ ಮಾಡುತ್ತಿಲ್ಲ. ಅಸ್ಥಿ ಸಿಕ್ಕರೆ ಕೊಡಿ ಎಂದಷ್ಟೇ ಹೇಳಿದ್ದೇನೆ ಎಂದು ಟಿವಿ ಮಾಧ್ಯಮಕ್ಕೆ ಮಾತನಾಡುತ್ತ ಸುಜಾತ ಭಟ್ ಪ್ರತಿಕ್ರಿಯಿಸಿದ್ದಾರೆ.
ಅನನ್ಯಾ ಅಲ್ಲ, ವಾಸಂತಿ ಫೋಟೊ !
ಇದೇ ವೇಳೆ, ನಾಲ್ಕು ದಿನಗಳ ಹಿಂದೆ ವಕೀಲರ ಜೊತೆಗೂಡಿ ಸುಜಾತಾ ಭಟ್ ತನ್ನ ಮಗಳೆಂದು ಫೋಟೋ ಬಿಡುಗಡೆ ಮಾಡಿದ್ದು, ಆ ಫೋಟೋ ಟಿವಿಗಳಲ್ಲಿ ಬಂದಿತ್ತು. ಇಷ್ಟಾಗುತ್ತಲೇ ಮತ್ತೊಂದು ಕತೆ ಹೊರ ಬಂದಿದ್ದು, ಸುಜಾತಾ ಭಟ್ ಬೆಂಗಳೂರಿನಲ್ಲಿ ರಂಗಪ್ರಸಾದ್ ಎಂಬವರ ಜೊತೆಗೆ ರಿಲೇಶನ್ ಶಿಪ್ ಇಟ್ಟುಕೊಂಡಿದ್ದರು. ಈಕೆ ಬಿಡುಗಡೆ ಮಾಡಿರುವ ಫೋಟೋ ರಂಗಪ್ರಸಾದ್ ಅವರ ಮಗ ಶ್ರೀವತ್ಸನ ಪತ್ನಿ ಮಡಿಕೇರಿ ಮೂಲದ ವಾಸಂತಿಯದ್ದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಡಿಕೇರಿಯಲ್ಲಿ ವಾಸವಿರುವ ವಾಸಂತಿಯ ಸೋದರ ವಿಜಯ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಬೇರೆಯದ್ದೇ ಮಾಹಿತಿ ನೀಡಿದ್ದಾರೆ. ಸುಜಾತಾ ಕಟ್ಟಿದ ಕತೆಗಿಂತ ಇವರ ಪ್ರತಿಕ್ರಿಯೆ ಭಿನ್ನವಾಗಿದೆ.
ಈ ಫೋಟೋ ತನ್ನ ತಂಗಿ ವಾಸಂತಿಯದ್ದು. ಆಕೆ ಬೆಂಗಳೂರಿನಲ್ಲಿ ನರ್ಸ್ ಆಗಿದ್ದಳು. ಶ್ರೀವತ್ಸ ಅವರನ್ನು ಪ್ರೀತಿಸಿ ಮದುವೆಯಾಗಿದ್ದಳು. 2007ರಲ್ಲಿ ಮದುವೆಯಾಗಿದ್ದು ಕೆಲವು ತಿಂಗಳಲ್ಲಿಯೇ ನಿಗೂಢ ಸಾವು ಆಗಿದ್ದಳು. ನಾಪತ್ತೆ ದೂರು ಕೊಟ್ಟು 24 ದಿನಗಳಾದ ಬಳಿಕ ವಿರಾಜಪೇಟೆಯ ಹೊಳೆ ಬದಿಯಲ್ಲಿ ಕೊಳೆತ ಶವ ಪತ್ತೆಯಾಗಿತ್ತು. ಬಟ್ಟೆಯ ಆಧಾರದಲ್ಲಿ ಆಕೆಯದ್ದೇ ಎಂದು ದೃಢಪಡಿಸಿದ್ದೆವು. ಪೊಲೀಸರು ತನಿಖೆ ಮಾಡಿ ಆತ್ಮಹತ್ಯೆ ಎಂದು ಹೇಳಿದ್ದರು. ಯಾಕಾಗಿ ಸಾವಾಯ್ತು ಎನ್ನುವ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಇದು ವಾಸಂತಿಯದ್ದೇ ಫೋಟೋ ಆಗಿದ್ದು, ಆಕೆಯ ಮದುವೆ ಆಲ್ಬಂನಿಂದ ತೆಗೆದಿರುವುದು. ಅದು ಆಲ್ಬಂ ರಂಗಪ್ರಸಾದ್ ಮನೆಯಲ್ಲಿ ಇದ್ದಿರಬೇಕು. ಆಕೆಯ ಸಾವಿನ ಬಳಿಕ ಆ ಕುಟುಂಬದ ಜೊತೆಗೆ ಬೇರಾವುದೇ ಸಂಬಂಧ ಇಲ್ಲ. ಸುಜಾತಾ ಭಟ್ ಯಾರು, ರಂಗಪ್ರಸಾದ್ ಯಾರೆಂದು ಗೊತ್ತಿಲ್ಲ. ಆದರೆ ಈ ಫೋಟೋ ವಾಸಂತಿಯದ್ದು ಮತ್ತು ಹಣೆಯಲ್ಲಿರುವ ಬೊಟ್ಟನ್ನು ಇವರೇ ಇಟ್ಟಿದ್ದಾರೆ ಎಂದು ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಸುಜಾತಾ ಭಟ್ ತನ್ನ ಮಗಳು ಅನನ್ಯಾ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎನ್ನುವ ವಿಚಾರ ಕಟ್ಟುಕತೆಯೇ ಎನ್ನುವ ಸಂಶಯ ಉಂಟಾಗಿದೆ.
The case surrounding Sujatha Bhatt and her missing daughter Ananya Bhatt, who she claims disappeared in Dharmasthala in 2003, has taken a confusing turn with conflicting claims and contradictory narratives. The controversy began after an anonymous complaint alleged that hundreds of bodies were buried in Dharmasthala. On July 10, Sujatha Bhatt approached the Mangaluru SP, claiming her daughter Ananya had gone missing years ago.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm