ಬ್ರೇಕಿಂಗ್ ನ್ಯೂಸ್
20-08-25 03:01 pm Mangalore Correspondent ಕರಾವಳಿ
ಪುತ್ತೂರು, ಆ.20 : ಕಡಬ ಪಟ್ಟಣ ಪಂಚಾಯತ್ 13 ವಾರ್ಡ್ಗಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಆ.17ರಂದು ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ. ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ 8ರಲ್ಲಿ ಗೆಲುವು ಪಡೆದರೆ, ಬಿಜೆಪಿ 5 ಸ್ಥಾನಗಳನ್ನು ಪಡೆದಿದೆ.
ವಾರ್ಡ್ 1ರ ಕಳಾರದಲ್ಲಿ (ಹಿಂದುಳಿದ ವರ್ಗ ಎ' ಮಹಿಳೆ) ಕಾಂಗ್ರೆಸ್‌ನಿಂದ ತಮನ್ನಾ ಜಬೀನ್ 201 ಮತ ಪಡೆದು ಗೆಲುವು ಪಡೆದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರೇಮಾ ಶೂನ್ಯ ಮತ ಸಂಪಾದಿಸಿದ್ದಾರೆ. ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಬೇರೆ ವಾರ್ಡಿನ ಮಹಿಳೆಯನ್ನು ಬಿಜೆಪಿಯಿಂದ ನಿಲ್ಲಿಸಲಾಗಿತ್ತು. ಪಕ್ಷೇತರ ಸ್ಪರ್ಧಿಸಿದ್ದ ಜೈನಾಬಿ ಬಿಜೆಪಿ ಬೆಂಬಲದೊಂದಿಗೆ ಪೈಪೋಟಿ ನೀಡಿದ್ದು 139 ಮತಗಳನ್ನು ಪಡೆದಿದ್ದಾರೆ. ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಸಮೀರಾ ಹಾರಿಸ್ 74 ಮತ ಪಡೆದಿದ್ದಾರೆ. ಇಲ್ಲಿ ಜೈನಾಬಿ ಗೆಲ್ಲುವ ನಿರೀಕ್ಷೆಯಿತ್ತು.
ವಾರ್ಡ್ 2ರ ಕೋಡಿಬೈಲು ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯಿಂದ ಕುಸುಮ ಅಂಗಡಿಮನೆ 187 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮೋಹಿನಿ 177 ಮತ ಪಡೆದರೆ, 4 ನೋಟಾ ಮತಗಳು ಬಿದ್ದಿವೆ.
ವಾರ್ಡ್ 3ರ ಪನ್ಯ ಕ್ಷೇತ್ರದಲ್ಲಿ (ಸಾಮಾನ್ಯ ಅಭ್ಯರ್ಥಿ) ಕಾಂಗ್ರೆಸ್‌ನಿಂದ ಮಹಮ್ಮದ್ ಪೈಝಲ್ 320 ಮತಗಳೊಂದಿಗೆ ಗೆಲುವು ಕಂಡಿದ್ದಾರೆ. ಬಿಜೆಪಿ ಬೆಂಬಲಿತ ಆದಂ ಕುಂಡೋಳಿ 75, ಎಸ್‌ಡಿಪಿಐನಿಂದ ಹಾರಿಸ್ ಕಳಾರ 6, ಮುಸ್ಲಿಂ ಲೀಗ್‌ನಿಂದ ಕೆ. ಅಬ್ದುಲ್ ರಝಾಕ್ 2 ಮತಗಳನ್ನು ಪಡೆದಿದ್ದಾರೆ. ವಾರ್ಡ್ 4ರ ಬೆದ್ರಾಜೆ (ಸಾಮಾನ್ಯ ಮೀಸಲು) ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೈಮನ್ ಸಿ.ಜೆ 232, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ. 168 ಮತಗಳನ್ನು ಪಡೆದಿದ್ದಾರೆ.
ವಾರ್ಡ್ 5ರ ಮಾಲೇಶ್ವರ ಹಿಂದುಳಿದ ವರ್ಗ ಎ'ಗೆ ಮೀಸಲಾಗಿದ್ದು ಕಾಂಗ್ರೆಸ್‌ನಿಂದ ಹನೀಫ್ ಕೆ.ಎಂ. 297 ಮತ ಪಡೆದಿದ್ದರೆ, ಬಿಜೆಪಿಯಿಂದ ಪ್ರಕಾಶ್ ಎನ್.ಕೆ 213 ಮತ ಪಡೆದಿದ್ದಾರೆ. ವಾರ್ಡ್ 6ರ ಕಡಬ ಕ್ಷೇತ್ರ ಸಾಮಾನ್ಯ ಮಹಿಳೆಗಿದ್ದು ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್ 314 ಮತಗಳೊಂದಿಗೆ ಜಯ ಗಳಿಸಿದ್ದಾರೆ. ಬಿಜೆಪಿಯಿಂದ ಪ್ರೇಮಾ 176 ಮತ, ಪಕ್ಷೇತರರಾಗಿ ಆಲೀಸ್ ಚಾಕೊ 16, ಎಸ್‌ಡಿಪಿಐನಿಂದ ಸ್ವಾಲಿಯತ್ ಜಸೀರಾ 78 ಮತ ಪಡೆದಿದ್ದಾರೆ.
ವಾರ್ಡ್ 7ರ ಪಣೆಮಜಲು (ಹಿಂದುಳಿದ ವರ್ಗ ಬಿ) ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೋಹಿತ್ ಗೌಡ 333 ಮತಗಳೊಂದಿಗೆ ಗೆಲುವು, ಬಿಜೆಪಿಯಿಂದ ಗಣೇಶ್ ಗೌಡ 248 ಮತ ಪಡೆದಿದ್ದಾರೆ. ವಾರ್ಡ್ 8ರ ಪಿಜಕ್ಕಳದಲ್ಲಿ (ಸಾಮಾನ್ಯ ಮೀಸಲು) ಬಿಜೆಪಿಯಿಂದ ದಯಾನಂದ ಗೌಡ ಪಿ. 386, ಕಾಂಗ್ರೆಸ್‌ನಿಂದ ಅಶ್ರಫ್ ಶೇಡಿಗುಂಡಿ 184 ಮತ ಪಡೆದಿದ್ದಾರೆ.
ವಾರ್ಡ್ 9ರ ಮೂರಾಜೆಯಲ್ಲಿ ಹಿಂದುಳಿದ ವರ್ಗ ಎ'ಗೆ ಮೀಸಲಾಗಿದ್ದು ಕಾಂಗ್ರೆಸ್‌ನಿಂದ ಕೃಷ್ಣಪ್ಪ ಪೂಜಾರಿ 263 ಮತ ಪಡೆದು ಗೆದ್ದಿದ್ದಾರೆ. ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ 235 ಮತ ಪಡೆದರೆ, 5 ನೋಟಾ ಮತಗಳು ಬಿದ್ದಿವೆ. ವಾರ್ಡ್ 10ರ ದೊಡ್ಡಕೊಪ್ಪ ಕ್ಷೇತ್ರದಲ್ಲಿ (ಸಾಮಾನ್ಯ ಮಹಿಳೆ) ಬಿಜೆಪಿಯಿಂದ ಗುಣವತಿ ರಘುರಾಮ 393, ಕಾಂಗ್ರೆಸ್‌ನಿಂದ ತುಳಸಿ ಅವರಿಗೆ 258 ಮತ ಹಾಗೂ 9ನೋಟಾ ನತ ಬಿದ್ದಿದೆ. ವಾರ್ಡ್ 11ರ ಕೋಡಿಂಬಾಳದಲ್ಲಿ (ಸಾಮಾನ್ಯ ಮಹಿಳೆ) ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ 265 ಮತ ಪಡೆದು ಗೆಲುವು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಜ್ಯೋತಿ ಡಿ. ಕೋಲ್ಪೆ 255 ಮತ ಪಡೆದಿದ್ದಾರೆ.
ವಾರ್ಡ್ 12ರ ಮಜ್ಜಾರು (ಪರಿಶಿಷ್ಠ ಜಾತಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ 306 ಮತ ಪಡೆದು ಗೆದ್ದಿದ್ದಾರೆ. ಕಾಂಗ್ರೆಸ್‌ನಿಂದ ಉಮೇಶ್ ಮಡ್ಯಡ್ಕ ಸ್ಪರ್ಧಿಸಿ 238 ಮತ ಪಡೆದಿದ್ದಾರೆ. 2 ನೋಟಾ ಮತಗಳು ಬಿದ್ದಿವೆ. ವಾರ್ಡ್ 13ರ ಪುಳಿಕುಕ್ಕು ಕ್ಷೇತ್ರದಲ್ಲಿ (ಪರಿಶಿಷ್ಟ ಪಂಗಡ) ಕಾಂಗ್ರೆಸಿನ ಕೃಷ್ಣ ನಾಯ್ಕ 315 ಮತಗಳೊಂದಿಗೆ ಗೆದ್ದರೆ, ಬಿಜೆಪಿಯ ಸದಾನಂದ ನಾಯ್ಕ 264 ಮತ ಪಡೆದಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಕಡಬ ಪಟ್ಟಣ ಪಂಚಾಯತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಆಡಳಿತ ಪಕ್ಷವನ್ನು ಗೆಲ್ಲಿಸಲು ಕೊಡುಗೆ ನೀಡಿದ್ದಾರೆ.
In the recently concluded elections to the Kadaba Town Panchayat, the Congress has secured a clear majority, winning 8 out of 13 wards, while the BJP managed to win 5 wards. The elections were held on August 17, and results were declared today.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm