ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್‌ ಗಿಲ್‌ ; ಏಷ್ಯಾ ಕಪ್‌ ಟೂರ್ನಿಗೆ ಭಾರತ ಕ್ರಿಕೆಟ್‌ ತಂಡ ಪ್ರಕಟ, ಜೈಸ್ವಾಲ್‌, ಅಯ್ಯರ್‌ಗಿಲ್ಲ ಸ್ಥಾನ ! 

19-08-25 06:59 pm       HK News Desk   ದೇಶ - ವಿದೇಶ

ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್‌ ಕಿಕೆಟ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಲಾಗಿದ್ದು, ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಟಿ20 ತಂಡಕ್ಕೆ ಉಪನಾಯಕನಾಗಿ ಪುನರಾಗಮನ ಸಾರಿದ್ದಾರೆ. 

ಮುಂಬೈ, ಆ.19: ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್‌ ಕಿಕೆಟ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಲಾಗಿದ್ದು, ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಟಿ20 ತಂಡಕ್ಕೆ ಉಪನಾಯಕನಾಗಿ ಪುನರಾಗಮನ ಸಾರಿದ್ದಾರೆ. 

ಮಂಗಳವಾರ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಶುಭಮನ್‌ ಗಿಲ್‌ ಉಪ ನಾಯಕತ್ವದೊಂದಿಗೆ ತಂಡಕ್ಕೆ ವಾಪಸಾಗಿದ್ದಾರೆ. ಸೂರ್ಯ ಕುಮಾರ್‌ ಯಾದವ್‌ ಅವರೇ ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದು, ಈ ಹಿಂದಿನ ಸರಣಿಯಲ್ಲಿ ಉಪನಾಯಕರಾಗಿದ್ದ ಅಕ್ಷರ್‌ ಪಟೇಲ್‌ ಅವರಿಂದ ಆ ಸ್ಥಾನ ಕಿತ್ತುಕೊಂಡು ಗಿಲ್‌ಗೆ ನೀಡಲಾಗಿದೆ. ಉಪನಾಯಕತ್ವ ಪಟ್ಟದೊಂದಿಗೆ ಗಿಲ್‌ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು ಅಭಿಷೇಕ್‌ ಶರ್ಮ ಮತ್ತು ಸಂಜು ಸ್ಯಾಮ್ಸನ್‌ ಇವರಿಬ್ಬರಲ್ಲಿ ಒಬ್ಬರು ಆರಂಭಿಕನ ಸ್ಥಾನ ಬಿಟ್ಟುಕೊಡುವ ಸಂಕಟಕ್ಕೆ ಸಿಲುಕಲಿದ್ದಾರೆ. 

India Asia Cup 2025 Squad Announcement LIVE: Shubman Gill returns to India's  T20I squad as vice-captain | Mint

Revealed: Why Shreyas Iyer, Yashasvi Jaiswal have been snubbed from India's  Asia Cup 2025 squad?

ಮಧ್ಯಮ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮ, ರಿಂಕು ಸಿಂಗ್‌ ಅವರ ಸ್ಥಾನ ಅಬಾಧಿತವಾಗಿದೆ. ಒಂದು ವೇಳೆ ಭಾರತ ಗಿಲ್‌-ಅಭಿಷೇಕ್‌ ಅವರನ್ನು ಆರಂಭಿಕನ ಸ್ಥಾನದಲ್ಲಿ ಆಡಿಸಿದರೆ ಆಗ ಜಿತೇಶ್‌ ಶರ್ಮ ಫ್ರಂಟ್‌ಲೈನ್‌ ವಿಕೆಟ್‌ಕೀಪರ್‌ ಆಗಿರಲಿದ್ದಾರೆ. ತಂಡದಲ್ಲಿ ಮೂವರು ಆಲ್‌ರೌಂಡರ್‌ಗಳಿದ್ದು ಹಾರ್ಡ್‌ ಹಿಟ್ಟರ್‌ ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ ಹಾಗೂ ಶಿವಂ ದುಬೆ, ಬೌಲಿಂಗ್‌ ವಿಭಾಗಕ್ಕೆ ಜಸ್‌ಪ್ರೀತ್‌ ಬುಮ್ರಾ ಮರಳಿದ್ದು ಇವರಿಗೆ ಅರ್ಷದೀಪ್‌ ಸಿಂಗ್‌, ಕುಲದೀಪ್‌ ಯಾದವ್‌, ವರುಣ್‌ ಚಕ್ರವರ್ತಿ ಹಾಗೂ ಹರ್ಷಿತ್‌ ರಾಣಾ ಸಾಥ್‌ ನೀಡಲಿದ್ದಾರೆ. 
ಐದು ಮಂದಿ ರಿಸರ್ವ್‌ ಆಟಗಾರರನ್ನು ಆರಿಸಲಾಗಿದ್ದು ಇದರಲ್ಲಿ ಯಶಸ್ವಿ ಜೈಸ್ವಾಲ್‌, ಪ್ರಸಿದ್ಧ ಕೃಷ್ಣ, ವಾಷಿಂಗ್ಟನ್‌ ಸುಂದರ್‌, ರಿಯಾನ್‌ ಪರಾಗ್‌ ಮತ್ತು ಧ್ರುವ ಜುರೆಲ್‌ಗೆ ಸ್ಥಾನ ನೀಡಲಾಗಿದೆ. ಬಹಳ ಅಚ್ಚರಿಯ ನಿರ್ಧಾರವೊಂದರಲ್ಲಿ ಈ ಬಾರಿಯ ಐಪಿಎಲ್‌ನ ಯಶಸ್ವಿ ನಾಯಕರಲ್ಲೊಬ್ಬರಾಗಿದ್ದ ಶೇಯಸ್‌ ಅಯ್ಯರ್‌ಗೆ ರಿಸರ್ವ್‌ ಆಟಗಾರರ ಪಟ್ಟಿಯಲ್ಲೂ ಸ್ಥಾನ ನೀಡಲಾಗಿಲ್ಲ. ಅಯ್ಯರ್‌ ಐಪಿಎಲ್‌ನಲ್ಲಿ 175ರ ಸ್ಟ್ರೈಕ್‌ ರೇಟ್‌ನಲ್ಲಿ 604 ರನ್‌ ಬಾರಿಸಿದ್ದರು. ಅವರನ್ನು ಏಷ್ಯಾ ಕಪ್‌ಗೆ ಕಡೆಗಣಿಸಿರುವುದು ಅಚ್ಚರಿ ಮೂಡಿಸಿದೆ. 

ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ಬಳಿಕ ಭಾರತಕ್ಕೆ ಏಷ್ಯಾ ಕಪ್‌ ಟೂರ್ನಿ ಮೊದಲ ಸರಣಿಯಾಗಿದ್ದು ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಭಾರತವು ಎ ಗುಂಪಿನಲ್ಲಿದ್ದು ಪಾಕಿಸ್ತಾನ, ಓಮನ್‌ ಮತ್ತು ಯುಎಇ ಇದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತವು ಸೆ.10ರಂದು ದುಬೈನಲ್ಲಿ ಯುಎಇ ವಿರುದ್ಧ ಆಡಲಿದ್ದು, 14ರಂದು ದುಬೈನಲ್ಲೇ ಪಾಕಿಸ್ತಾನ ವಿರುದ್ದ ಆಡಲಿದೆ. 19ರಂದು ಅಬುಧಾಬಿಯಲ್ಲಿ ಓಮನ್‌ ವಿರುದ್ಧ ಸೆಣಸಲಿದೆ. 

ಭಾರತ ತಂಡ: ಸೂರ್ಯಕುಮಾರ್‌ ಯಾದವ್‌(ನಾಯಕ), ಶುಭಮನ್‌ ಗಿಲ್‌(ಉಪನಾಯಕ), ಅಭಿಷೇಕ್‌ ಶರ್ಮ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್‌, ಜಿತೇಶ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ಕುಲದೀಪ್‌ ಯಾದವ್‌, ಹರ್ಷಿತ್‌ ರಾಣಾ.

ಮೀಸಲು ಆಟಗಾರರು: ಪ್ರಸಿದ್ಧ ಕೃಷ್ಣ, ವಾಷಿಂಗ್ಟನ್‌ ಸುಂದರ್‌, ರಿಯಾನ್‌ ಪರಾಗ್‌, ಧ್ರುವ ಜುರೆಲ್‌, ಯಶಸ್ವಿ ಜೈಸ್ವಾಲ್‌.

India has announced a 15-member squad for the upcoming Asia Cup T20 tournament, scheduled to take place next month. Star batter and current Test captain Shubman Gill makes his return to the T20 side, this time as the vice-captain.