SIT, Exhumation, Dharmasthala: ಶವ ಶೋಧ ಬಳಿಕ ಎಸ್ಐಟಿ ಅಧಿಕಾರಿಗಳ ತನಿಖೆ ಮತ್ತಷ್ಟು ವಿಸ್ತರಣೆ ; ಧರ್ಮಸ್ಥಳ ಗ್ರಾಪಂ, ಸ್ವಚ್ಚತಾ ಸಿಬಂದಿ ಕರೆಸಿ ವಿಚಾರಣೆ, ಹೊಸ ದೂರುಗಳ ಬಗ್ಗೆಯೂ ತನಿಖೆ 

20-08-25 02:38 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ಸದ್ಯಕ್ಕೆ ಶವ ಶೋಧ ಕಾರ್ಯ ನಿಂತಿದ್ದರೂ, ಎಸ್ಐಟಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಒಂದೆಡೆ, ಅನಾಮಿಕ ದೂರುದಾರನ ವಿಚಾರಣೆ, ಮತ್ತೊಂದೆಡೆ 1995ರಿಂದ 2014ರ ವರೆಗೆ ಕೆಲಸ ಮಾಡಿದ್ದ ಸಿಬಂದಿ, ಗ್ರಾಮ ಪಂಚಾಯತ್ ನೌಕರರನ್ನು ಗುರಿಯಾಗಿಸಿ ತನಿಖೆ ವಿಸ್ತರಿಸಿದ್ದಾರೆ.

ಬೆಳ್ತಂಗಡಿ, ಆ.20 : ಧರ್ಮಸ್ಥಳದಲ್ಲಿ ಸದ್ಯಕ್ಕೆ ಶವ ಶೋಧ ಕಾರ್ಯ ನಿಂತಿದ್ದರೂ, ಎಸ್ಐಟಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಒಂದೆಡೆ, ಅನಾಮಿಕ ದೂರುದಾರನ ವಿಚಾರಣೆ, ಮತ್ತೊಂದೆಡೆ 1995ರಿಂದ 2014ರ ವರೆಗೆ ಕೆಲಸ ಮಾಡಿದ್ದ ಸಿಬಂದಿ, ಗ್ರಾಮ ಪಂಚಾಯತ್ ನೌಕರರನ್ನು ಗುರಿಯಾಗಿಸಿ ತನಿಖೆ ವಿಸ್ತರಿಸಿದ್ದಾರೆ.

19 ವರ್ಷ ಧರ್ಮಸ್ಥಳ ಗ್ರಾಪಂನಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ, ಅಂದಿನ ಜನಪ್ರತಿನಿಧಿಗಳನ್ನು ಕರೆಸಿ ಹೇಳಿಕೆ ದಾಖಲಿಸಲಾಗುತ್ತಿದೆ. ಅವರಿಂದ ಪಡೆದ ಮಾಹಿತಿಗಳನ್ನು ಅನಾಮಿಕ ದೂರುದಾರ ನೀಡಿದ ಮಾಹಿತಿಗಳನ್ನು ತಾಳೆ ಹಾಕಿ ನೋಡುತ್ತಿದ್ದಾರೆ. ದೂರುದಾರ ತನ್ನ ದೂರಿನಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನೂರಾರು ಶವಗಳನ್ನು ಬೇರೆಯವರ ಆದೇಶದಂತೆ ಹೂತು ಹಾಕಿದ್ದೇನೆ ಎಂದು ಹೇಳಿದ್ದ. ಅದರಂತೆ, ದಫನ ಮಾಡಿದ ಸ್ಥಳಗಳನ್ನು ತೋರಿಸಿದ್ದು ಈವರೆಗೆ 17 ಸ್ಥಳಗಳಲ್ಲಿ ಅಗೆದು ನೋಡಿದ್ದು ಮಹತ್ವದ ಸಾಕ್ಷ್ಯಗಳು ಸಿಕ್ಕಿರಲಿಲ್ಲ.

ಇದರಿಂದಾಗಿ ದೂರುದಾರನ ಮೇಲೆ ಅನುಮಾನಗಳು ವ್ಯಕ್ತವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಎಸ್‌ಐಟಿ ಇತರೇ ಸಾಕ್ಷಿಗಳನ್ನು ಕರೆದು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಧರ್ಮಸ್ಥಳ ಗ್ರಾಪಂನಲ್ಲಿ ಕೆಲಸ ಮಾಡಿದ್ದ ಅಂದಿನ ಸಿಬ್ಬಂದಿ, ಜನಪ್ರತಿನಿಧಿಗಳನ್ನು ಕರೆಸಿ ಹೇಳಿಕೆ ದಾಖಲಿಸುತ್ತಿದೆ. ಅಸಹಜ ಸಾವು ಸಂಭವಿಸಿದ ಸಂದರ್ಭದಲ್ಲಿ ಶವಗಳನ್ನು ಎಲ್ಲಿ ಹೂಳಲಾಗುತ್ತಿತ್ತು? ಯಾರು ಹೂಳುತ್ತಿದ್ದರು? ಯಾರು ಪೋಸ್ಟ್ ಮಾರ್ಟಂ ಮಾಡುತ್ತಿದ್ದರು? ಆಗ ಇದ್ದ ಸ್ವಚ್ಚತಾ ಸಿಬಂದಿ ಯಾರು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರಗಳನ್ನು ಪಡೆಯುತ್ತಿದ್ದಾರೆ.‌

ದೂರುದಾರ ಸ್ವಚ್ಚತಾ ಸಿಬ್ಬಂದಿಯಾಗಿದ್ದ ವೇಳೆ ಆತನ ಜೊತೆಗೆ ಕೆಲಸ ಮಾಡಿದ್ದವರನ್ನೂ ಕರೆಸಿ ಸಾಕ್ಷ್ಯ ಸಂಗ್ರಹಕ್ಕೆ ನಡೆಸುತ್ತಿದೆ. ಇದೇ ವೇಳೆ ಧರ್ಮಸ್ಥಳ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕೆಲಸ ಮಾಡಿದ್ದ ಮಾಜಿ ಸಿಬ್ಬಂದಿಯನ್ನೂ ಕರೆಸಿ ಎಸ್‌ಐಟಿ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ. ಪೊಲೀಸ್ ಠಾಣೆಯ ಹಳೆಯ ಕಡತ ಆಧರಿಸಿ ಹಿಂದೆ ಇದ್ದ ಸಿಬಂದಿ ಅಸಹಜ ಸಾವುಗಳ ಬಗ್ಗೆ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದ್ದರಿಂದ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ.  ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಕೆಲಸ ಮಾಡಿದ್ದವರನ್ನೂ ಪಟ್ಟಿ ಮಾಡಿ ಅವರನ್ನೂ ಕರೆಸಿ ಹೇಳಿಕೆ ದಾಖಲಿಸಲಾಗುತ್ತಿದೆ‌. 

ಇದೇ ವೇಳೆ, ಹೆಚ್ಚುವರಿಯಾಗಿ ಸಲ್ಲಿಸಲ್ಪಟ್ಟ ದೂರುಗಳ ಕುರಿತಾಗಿಯೂ ಎಸ್ಐಟಿ ಸಿಬಂದಿ ತನಿಖೆ ಕೈಗೊಂಡಿದ್ದಾರೆ. ‌ದೂರುದಾರ ಜಯನ್ ಟಿ, ಪದ್ಮಲತಾ ಅವರ ಅಕ್ಕ, ಸುಜಾತಾ ಭಟ್ ಪ್ರಕರಣದಲ್ಲಿಯೂ ಪ್ರತ್ಯೇಕ ತಂಡಗಳು ತನಿಖೆ ಕೈಗೊಂಡಿದ್ದು ಆಯಾ ಭಾಗಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದೆ. ಸುಜಾತಾ ಭಟ್ ಅವರು ಈ ಹಿಂದೆ ನೆಲೆಸಿದ್ದರು ಎನ್ನಲಾದ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಗೆ ಪೊಲೀಸರು ತೆರಳಿದ್ದು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ.

Though the exhumation operations in the Dharmasthala case have currently been paused, the Special Investigation Team (SIT) has significantly expanded its probe into various dimensions of the case. The investigation now includes questioning former gram panchayat staff, sanitation workers, and examining new complaints.