Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯಿಂಟ್ ನಲ್ಲಿ ಸಿಕ್ಕ ಎಲುಬು 40 ವರ್ಷ ಹಳೆಯದ್ದು ! ಎಫ್ಎಸ್ಎಲ್ ತಜ್ಞರ ಪ್ರಾಥಮಿಕ ಮಾಹಿತಿ 

04-08-25 01:24 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ಸಮಾಧಿ ಅಗೆತ ವೇಳೆ 6ನೇ ಪಾಯಿಂಟ್‌ನಲ್ಲಿ ಸಿಕ್ಕಿರುವ ಮೂಳೆ 40-50 ವರ್ಷ ಹಳೆಯದ್ದು ಎಂಬ ಮಾಹಿತಿ ವಿಧಿ ವಿಜ್ಞಾನ ತಂಡದ ಮೂಲಗಳಿಂದ ಸಿಕ್ಕಿದೆ. 

ಮಂಗಳೂರು, ಆ.4 : ಧರ್ಮಸ್ಥಳದಲ್ಲಿ ಸಮಾಧಿ ಅಗೆತ ವೇಳೆ 6ನೇ ಪಾಯಿಂಟ್‌ನಲ್ಲಿ ಸಿಕ್ಕಿರುವ ಮೂಳೆ 40-50 ವರ್ಷ ಹಳೆಯದ್ದು ಎಂಬ ಮಾಹಿತಿ ವಿಧಿ ವಿಜ್ಞಾನ ತಂಡದ ಮೂಲಗಳಿಂದ ಸಿಕ್ಕಿದೆ. 

ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಈವರೆಗಿನ ಉತ್ಖನನದಲ್ಲಿ ಪಾಯಿಂಟ್ 6ರಲ್ಲಿ ಮಾತ್ರ ಅಸ್ಥಿ ಪಂಜರದ ಅವಶೇಷ ಸಿಕ್ಕಿದೆ. ಅಲ್ಲಿ ಸಿಕ್ಕಿರುವ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದ್ದು ಅದು 40 ವರ್ಷಗಳ ಹಿಂದೆ ಹೂತಿರುವಂಥದ್ದು ಮತ್ತು ಪೋಸ್ಟ್ ಮಾರ್ಟಂ ಮಾಡಿಯೇ ಹೂಳಲಾಗಿತ್ತು ಎಂಬ ಮಾಹಿತಿ ವಿಧಿ ವಿಜ್ಞಾನ ತಜ್ಞರಿಂದ ಮಾಹಿತಿ ಲಭ್ಯವಾಗಿದೆ.  

ಈಗ ತೆಗೆದಿರುವ ಅಸ್ಥಿಪಂಜರದ ಮೂಳೆಗಳು 40 ವರ್ಷಗಳ ಹಿಂದೆ ಹೂತಿರುವ ಶವದ್ದು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಪುರುಷನ ಅಸ್ಥಿಪಂಜರ. ಈ ಬಗ್ಗೆ ಇನ್ನೊಂದು ವಾರದಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ. 

ಈ ನಡುವೆ, ಅಸ್ಥಿ ಉತ್ಖನನಕ್ಕೆ ಭಾನುವಾರ ಬ್ರೇಕ್ ನೀಡಲಾಗಿತ್ತು. ಇದುವರೆಗೂ ದೂರುದಾರ ಗುರುತಿಸಿರುವ 10 ಪಾಯಿಂಟ್‌ಗಳಲ್ಲಿ ಅಗೆತ ಮಾಡಲಾಗಿದೆ. ಆದರೆ, 6ನೇ ಪಾಯಿಂಟ್ ಬಿಟ್ಟರೆ ಯಾವುದರಲ್ಲೂ ಶವ ಹೂತಿರುವ ಕುರುಹು ಪತ್ತೆಯಾಗಿಲ್ಲ. ಪಾಯಿಂಟ್ ನಂ. 11, 12, 13ರಲ್ಲಿ ಶೋಧ ಕಾರ್ಯ ಇನ್ನಷ್ಟೇ ನಡೆಯಲಿದೆ. ಈ ಮೂರು ಸ್ಪಾಟ್‌ಗಳ ಬಗ್ಗೆ ಕುತೂಹಲ ಹೆಚ್ಚಿದ್ದು ಅಲ್ಲಿ ಅತಿ ಹೆಚ್ಚು ಹೆಣಗಳನ್ನು ಹೂತಿದ್ದಾಗಿ ವ್ಯಕ್ತಿ ಹೇಳಿಕೊಂಡಿದ್ದ.

In a major development in the Dharmasthala human remains case, forensic experts have revealed that the skeletal remains found at the sixth excavation point are likely 40–50 years old.