New Witness, Dharmasthala Case, Jayan: ನನ್ನ ಕಣ್ಣ ಮುಂದೆಯೇ ಬಾಲಕಿಯನ್ನು ಹೂತು ಹಾಕಿದ್ದರು, ಕೊಳೆತ ಶವ ಹೂತಿದ್ದಕ್ಕೆ ನಾನೇ ಸಾಕ್ಷಿ ; ಧರ್ಮಸ್ಥಳದಲ್ಲಿ ಮತ್ತೊಬ್ಬ ದೂರುದಾರ ಎಂಟ್ರಿ 

02-08-25 10:51 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಬ್ಬ ದೂರುದಾರ ಎಂಟ್ರಿ ಆಗಿದ್ದಾರೆ......

ಬೆಳ್ತಂಗಡಿ, ಆ.2: ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಬ್ಬ ದೂರುದಾರ ಎಂಟ್ರಿ ಆಗಿದ್ದಾರೆ. ಆರ್ಟಿಐ ಮತ್ತು ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ಜಯನ್ ಟಿ. ಎಂಬವರು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹೊಸ ದೂರು ನೀಡಿದ್ದು 15 ವರ್ಷಗಳ ಹಿಂದೆ ತನ್ನ ಕಣ್ಣ ಮುಂದೆಯೇ ಬಾಲಕಿಯನ್ನು ಹೂತು ಹಾಕಲಾಗಿತ್ತು. ಅದನ್ನು ಈಗಲೂ ತೋರಿಸಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ. 

ಬೆಳ್ತಂಗಡಿ ಎಸ್ಐಟಿ ಕಚೇರಿಗೆ ದೂರು ನೀಡಿರುವ ಜಯನ್, 15 ವರ್ಷದ ಬಾಲಕಿಯನ್ನು ಹೂತು ಹಾಕಿದ್ದರು. ಹೆಣ ಕೊಳೆತು ಹೋಗಿತ್ತು. ಯಾರು ಆ ಬಾಲಕಿ, ಆಕೆಯನ್ನು ಕೊಂದು ಹಾಕಿದ್ದರೇ ಎನ್ನುವುದು ಗೊತ್ತಿಲ್ಲ. ಈಗ ಎಸ್ಐಟಿ ರಚನೆ ಆಗಿರುವುದರಿಂದ ದೂರು ನೀಡುತ್ತಿದ್ದೇನೆ ಎಂದು ಹೇಳಿದರು. 

ಹಿಂದೆ ಪದ್ಮಲತಾ ಎನ್ನುವ ನಮ್ಮದೇ ಯುವತಿಯನ್ನು ಕೊಂದು ಹಾಕಿದ ಬಗ್ಗೆ ನಮಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಈ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದು ಹೋಗಿತ್ತು. ಈಗ ಹಳೆ ಪ್ರಕರಣದ ಬಗ್ಗೆ ತನಿಖೆಗೆ ಎಸ್ಐಟಿ ರಚನೆ ಆಗಿದ್ದರಿಂದ ನಂಬಿಕೆ ಬಂದಿದೆ‌. ಹಾಗಾಗಿ ದೂರು ನೀಡುತ್ತಿದ್ದೇನೆ. ಬಾಲಕಿಯನ್ನು ಹೂತು ಹಾಕಿದ್ದಕ್ಕೆ ನಾನೇ ಸಾಕ್ಷಿದಾರ. ನಮ್ಮ ಕಣ್ಣ ಮುಂದೆಯೇ ಹೂಳಲಾಗಿತ್ತು. ಧರ್ಮಸ್ಥಳದಲ್ಲಿ ಹಲವಾರು ಕೊಲೆ ಆಗಿದೆ, ಆದರೆ ಈ ಬಾಲಕಿಯನ್ನು ಹೂತಿದ್ದಕ್ಕೆ ನನ್ನಲ್ಲಿ ಸಾಕ್ಷ್ಯ ಇದೆ ಎಂದು ಜಯನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

In a dramatic turn in the ongoing Dharmasthala human remains case, a new complainant and self-identified RTI and social activist, Jayan T., has stepped forward with shocking allegations. Jayan has submitted a formal complaint to the Special Investigation Team (SIT) office in Belthangady, claiming to have witnessed the burial of a decomposed girl’s body 15 years ago.