ಬ್ರೇಕಿಂಗ್ ನ್ಯೂಸ್
27-02-25 11:07 pm Mangalore Correspondent ಕರಾವಳಿ
ಮಂಗಳೂರು, ಫೆ.27: ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಅತಿಯಾದ ಉಷ್ಣತೆ ಮತ್ತು ಅತಿಯಾದ ತಾಪಮಾನ, ಬಿಸಿಲ ಝಳ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39ರಿಂದ 41 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇರಲಿದೆ.
ಮುಂದಿನ ಎರಡು ದಿನ ತಾಪಮಾನ ಹೆಚ್ಚಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಜನರು ಬಿಸಿಲನ ಹೊಡೆತವನ್ನು ತಪ್ಪಿಸಿಕೊಳ್ಳುವುದು ಉತ್ತಮ ಎಂದು ಸೂಚನೆ ನೀಡಿದೆ. 37-38 ಡಿಗ್ರಿ ಸೆಲ್ಶಿಯಸ್ ಉಷ್ಣತೆ ಇದ್ದರೂ, 40ರಿಂದ 50 ಡಿಗ್ರಿಯಷ್ಟು ಉಷ್ಣತೆ ಇರುವಂತೆ ಅನುಭವ ಆಗಲಿದೆ. ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿರುವುದರಿಂದ ತೀವ್ರ ಉಷ್ಣತೆಯಂತೆ ಭಾಸವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.


ಫೆ.27ರಿಂದ ಹಿಂದಿನ 24 ಗಂಟೆಯಲ್ಲಿ ಸುಳ್ಯದಲ್ಲಿ 40.4, ಉಪ್ಪಿನಂಗಡಿಯಲ್ಲಿ 39.6, ಪಾಣೆ ಮಂಗಳೂರಿನಲ್ಲಿ 39.4, ಕೊಕ್ಕಡದಲ್ಲಿ 40.4, ಬ್ರಹ್ಮಾವರದಲ್ಲಿ 39.1, ಕೋಟ 39.5, ವಂಡ್ಸೆ 39.9 ಡಿಗ್ರಿ, ಅಜೆಕಾರು 39.5, ಕಾರವಾರದ ಸೇವಂತಿವಾಡದಲ್ಲಿ ಅತಿ ಹೆಚ್ಚು 41.1 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಭಟ್ಕಳದಲ್ಲಿ 40.4, ಅಂಕೋಲಾದ ಬೆಳ್ಳಿಕೆರೆಯಲ್ಲಿ 39.8, ಮಾವಳ್ಳಿ 39 ಡಿಗ್ರಿ ಉಷ್ಣತೆ ಕಾಣಿಸಿಕೊಂಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಎಂದಿಗಿಂತ 2-3 ಡಿಗ್ರಿ ಉಷ್ಣತೆ ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Mangalore Coastal Sunshine Continues Sulya and Kokkada Hit 40 Degrees Amidst Warm Spell. The Indian Meteorological Department (IMD) has issued a heatwave/yellow alert for the coastal regions of Karnataka, warning of a significant rise in temperatures. The alert predicts hot and humid conditions in Udupi, Dakshina Kannada, and Uttara Kannada districts on February 26 and 27, with maximum temperatures expected to rise further.
03-04-26 04:14 pm
HK News Staffer
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 11:32 am
HK News Staffer
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm
ಜಿಮ್ ಸೆಂಟರ್ ನೆಪದಲ್ಲಿ ಲವ್ ಜಿಹಾದ್! ಜಿಮ್ ಟ್ರೈ...
03-04-26 10:53 pm
ಮೆಲ್ಕಾರ್ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ;...
01-04-26 02:54 pm
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm