ಬ್ರೇಕಿಂಗ್ ನ್ಯೂಸ್
30-12-24 08:19 pm Mangalore Correspondent ಕರಾವಳಿ
ಮಂಗಳೂರು, ಡಿ.30: ಹೊಸ ವರ್ಷದ ಪಾರ್ಟಿ, ಅತಿ ಹೆಚ್ಚು ಪ್ರವಾಸಿಗರು ಕಡಲ ನಗರಿ ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಡಿ.31ರ ಇಡೀ ದಿನ ಟ್ರಾಫಿಕ್ ಸೇರಿದಂತೆ ಎಲ್ಲ ವಿಭಾಗದ ಪೊಲೀಸರು ಅಲರ್ಟ್ ಆಗಿರಲಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
15 ದಿನಗಳ ಮೊದಲೇ ಹೊಸ ವರ್ಷದ ಪಾರ್ಟಿ ಆಯೋಜಕರು ಪೊಲೀಸ್ ಅನುಮತಿ ಪಡೆಯಬೇಕೆಂದು ಸೂಚಿಸಲಾಗಿತ್ತು. ಅದರಂತೆ, ಪರವಾನಗಿ ಪಡೆದು ಮಂಗಳೂರು ನಗರ ವ್ಯಾಪ್ತಿಯ 49 ಕಡೆ ಪಾರ್ಟಿ ಆಯೋಜಿಸಿರುವುದನ್ನು ಪೊಲೀಸ್ ಕಮಿಷನರ್ ದೃಢಪಡಿಸಿದ್ದಾರೆ. ಅಲ್ಲದೆ, ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಕಾನೂನು ಬಾಹಿರ ಚಟುವಟಿಕೆ ಹತ್ತಿಕ್ಕುವ ಸಲುವಾಗಿ 103 ಕಡೆ ಪಿಕೆಟ್ ಪಾಯಿಂಟ್ಸ್ ಗುರುತಿಸಲಾಗಿದೆ. 19 ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ಕೈಗೊಳ್ಳಲಾಗುವುದು. ತುರ್ತು ಕ್ರಮ ಜರುಗಿಸುವ ನಿಟ್ಟಿನಲ್ಲಿ ಪಿಎಸ್ಐ ನೇತೃತ್ವದಲ್ಲಿ 60 ತಂಡಗಳನ್ನು ರಚಿಸಲಾಗಿದ್ದು, ಇಡೀ ದಿನ ಗಸ್ತು ನಡೆಸಲಿದ್ದಾರೆ.
ಇದಲ್ಲದೆ, ಪಿಎಸ್ಐ ನೇತೃತ್ವದಲ್ಲಿ 30 ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದ್ದು, ಪಾರ್ಟಿಗಳಲ್ಲಿ ಡ್ರಗ್ಸ್, ಇನ್ನಿತರ ಅಕ್ರಮ ಚಟುವಟಿಕೆ ಬಗ್ಗೆ ನಿಗಾ ಇಡಲಿದ್ದಾರೆ. ಮೂರು ಕೆಎಸ್ ಆರ್ ಪಿ ತುಕಡಿ, 10 ಸಿಎಆರ್ ತಂಡಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗುವುದು. ತಡರಾತ್ರಿ ವೇಳೆ ಬಂದೋಬಸ್ತ್ ಮೇಲೆ ಕಣ್ಣಿಡುವುದಕ್ಕಾಗಿ ಒಂದು ಎಸಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಇಬ್ಬರು ಇನ್ಸ್ ಪೆಕ್ಟರ್ ಮತ್ತು ಆರು ಪಿಎಸ್ಐ ಒಳಗೊಂಡ ತಂಡಗಳು ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಪ್ರತ್ಯೇಕ ನಿಗಾ ಇಡಲಿವೆ. ಡಿಸಿಪಿ, ಎಸಿಪಿ ದರ್ಜೆಯ ಅಧಿಕಾರಿಗಳು ಒಟ್ಟು ಬಂದೋಬಸ್ತ್ ಮೇಲೆ ಮೇಲುಸ್ತುವಾರಿ ಹೊಂದಿರುತ್ತಾರೆ.
ಮಧ್ಯಾಹ್ನದಿಂದಲೇ ಬಂದೋಬಸ್ತ್ ಶುರುವಾಗಲಿದ್ದು, ರಾತ್ರಿಯಿಡೀ ಮುಂದುವರಿಯಲಿದೆ. ಒಟ್ಟು ಬಂದೋಬಸ್ತ್ ನಲ್ಲಿ ಮೂರು ಡಿಸಿಪಿ, ಎಂಟು ಎಸಿಪಿಗಳು, 20 ಇನ್ಸ್ ಪೆಕ್ಟರ್ ಗಳು, 57 ಪಿಎಸ್ಐ, 76 ಎಎಸ್ಐ, 570 ಕಾನ್ಸ್ ಟೇಬಲ್ ಮತ್ತು 70 ಹೋಮ್ ಗಾರ್ಡ್ ಫೀಲ್ಡಿನಲ್ಲಿ ಇರಲಿದ್ದಾರೆ. ಉಳಿದಂತೆ, ನ್ಯೂ ಇಯರ್ ಪಾರ್ಟಿಗಳು ಮಧ್ಯರಾತ್ರಿ 12 ಗಂಟೆಗೆ ಕೊನೆಗೊಳ್ಳಬೇಕು. ಯಾವುದೇ ರೀತಿಯ ದುರ್ವರ್ತನೆ ಕಂಡುಬಂದಲ್ಲಿ ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದ್ದಾರೆ. ಕುಡಿದು ವಾಹನ ಚಾಲನೆ, ವೀಲಿಂಗ್, ಬಾಟಲಿಯನ್ನು ರಸ್ತೆಗೆಸೆಯುವುದು, ಅಸಭ್ಯ ವರ್ತನೆ ಪತ್ತೆಯಾದಲ್ಲಿ ಕಾನೂನು ಕ್ರಮ ಖಚಿತ. ಧ್ವನಿವರ್ಧಕ ಬಳಕೆಗೆ ಮೊದಲೇ ಅನುಮತಿ ಪಡೆದಿದ್ದಲ್ಲಿ ಮಾತ್ರ. ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿ ದೂರು ಕೊಡಬಹುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
49 new year 2025 events to take place in Mangalore, 30 flying squads places to track drug activities says police commissioner. Strictly enforcing a curfew on celebrations, the police have mandated that all events conclude by midnight. The use of sound systems, including loudspeakers, requires prior permission and sound levels must comply with the Noise Pollution (Regulation and Control) Rules, 2000, and directives from the Supreme Court. DJs are explicitly prohibited.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm