ಬ್ರೇಕಿಂಗ್ ನ್ಯೂಸ್
30-11-24 04:36 pm Mangalore Correspondent ಕರಾವಳಿ
ಮಂಗಳೂರು, ನ.30: ಸಮಾಜದಲ್ಲಿ ಯಾರು ಡ್ರಗ್ ಪೆಡ್ಲರ್ಸ್ ಇದ್ದಾರೆ, ಅವರನ್ನು ಅರೆಸ್ಟ್ ಮಾಡಬೇಕು. ಪೆಡ್ಲರ್ ಮೇಲೆ ಏನೇ ಕ್ರಮ ತಗೊಳ್ಳಿ, ನಾನು ನಿಮ್ಮ ಜೊತೆಗಿದ್ದೇನೆ. ಯಾವುದೇ ಕಡೆ ಡ್ರಗ್ಸ್ ಪತ್ತೆಯಾದರೆ ಅದಕ್ಕೆ ಪೊಲೀಸರೇ ಹೊಣೆ. ಇನ್ಸ್ ಪೆಕ್ಟರ್, ಡಿವೈಎಸ್ಪಿ ಪ್ರತಿ ಶಾಲೆಗೆ ಹೋಗಬೇಕು, ಆಯಾ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಪತ್ತೆಯಾದರೆ ಅವರು ಹೊಣೆಯಾಗುತ್ತಾರೆ. ಹೀಗೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪೊಲೀಸರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಗರದ ಪಾಂಡೇಶ್ವರ ಪೊಲೀಸ್ ಲೇನ್ ನಲ್ಲಿ 160 ಮನೆಗಳಿರುವ ವಸತಿ ಗೃಹಗಳ ಉದ್ಘಾಟನೆ ಹಾಗೂ ಸುಬ್ರಹ್ಮಣ್ಯ, ಬಂಟ್ವಾಳ ಸಂಚಾರ ಠಾಣೆಯ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.
ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 250 ಕೋಟಿ ಡ್ರಗ್ಸ್ ಹಿಡಿದಿದ್ದೇವೆ. ಹಿಂದೆ ಗಾಂಜಾ ಇತ್ತು. ಈಗ ಸಿಂಥೆಟಿಕ್ ಡ್ರಗ್ ಬಂದಿದೆ. ಗಾಂಜಾ ಎಫೆಕ್ಟ್ ನಿಧಾನ ಇರುತ್ತೆ, ಸಿಂಥೆಟಿಕ್ ಡ್ರಗ್ ನಿಂದ ನ್ಯೂರೋ ಸಿಸ್ಟಮ್ ಹಾಳಾಗುತ್ತದೆ. ಒಂದು ಬಾರಿ ಅಡಿಕ್ಟ್ ಆದರೆ ತೊಂದರೆ ಎದುರಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಡ್ರಗ್ ವಿರುದ್ಧ ಯುದ್ಧ ಸಾರಿದೆ. ಸಮಾಜದ ಎಲ್ಲ ಮಕ್ಕಳನ್ನು ಪೊಲೀಸರು ತಮ್ಮ ಮಕ್ಕಳು ಎಂದೇ ಭಾವಿಸಿ ಕೆಲಸ ಮಾಡಿ. ಸಿಂಥೆಟಿಕ್ ಡ್ರಗ್ಸ್ ಬರದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಅಪರಾಧ ಪತ್ತೆಗೆ ಎಐ ಇಂಟೆಲಿಜೆನ್ಸ್ ಕ್ಯಾಮರಾಗಳನ್ನು ಬಳಕೆ ಮಾಡುತ್ತಿದ್ದೇವೆ. ಒಮ್ಮೆ ಅಪರಾಧ ಎಸಗಿದವನನ್ನು ಮತ್ತೆ ಮಾಡಿದರೆ ಕೂಡಲೇ ಪತ್ತೆ ಮಾಡುತ್ತದೆ. ಟ್ರಾಫಿಕ್ ಸೇರಿದಂತೆ ಅಪರಾಧ ತನಿಖೆಯನ್ನು ಆಧುನಿಕ ರೀತಿಯಲ್ಲಿ ಮಾಡಲಾಗುತ್ತಿದೆ.
ಪುತ್ತೂರಿಗೆ ಮಹಿಳಾ ಪೊಲೀಸ್ ಠಾಣೆ ಕಟ್ಟಡ ಬೇಕೆಂದು ಪುತ್ತೂರು ಶಾಸಕ ಅಶೋಕ ರೈ ಬೇಡಿಕೆ ಇಟ್ಟಿದ್ದಾರೆ, ಅದನ್ನು ಇಲ್ಲಿಯೇ ಮಂಜೂರು ಮಾಡುತ್ತೇನೆ. ಬಿ ಗ್ರೇಡ್ ಪೊಲೀಸ್ ಠಾಣೆಗೆ ಒಂದು ಕೋಟಿ ಅನುದಾನ ಇದೆ. ಅದನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ಹೇಳಿದ ಸಚಿವರು, ಪ್ರತಿ ಪೊಲೀಸ್ ಕುಟುಂಬಗಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಂಕಲ್ಪ ಮಾಡಬೇಕು. ಐಪಿಎಸ್ ಅಧಿಕಾರಿ ಮಾಡುತ್ತೇನೆಂದು ಸಂಕಲ್ಪ ಮಾಡಿ. ಅದಕ್ಕಾಗಿ ಒಂದೊತ್ತು ಊಟ ಬಿಟ್ಟರೂ ಯಾರೂ ಸಾಯುವುದಿಲ್ಲ. ಮುಂದಿನ ಭವಿಷ್ಯ ಕಷ್ಟವೂ ಇದೆ, ಅಷ್ಟೇ ಸವಾಲಿನಿಂದ ಕೂಡಿರುತ್ತದೆ ಎಂದು ಕಿವಿಮಾತು ಹೇಳಿದರು.
ಮೂರು ಬಾರಿ ಗೃಹ ಸಚಿವನಾಗಿದ್ದೇನೆ, ಬೇರೆ ಯಾರಿಗೂ ರಾಜ್ಯದಲ್ಲಿ ಇಂತಹ ಅವಕಾಶ ಸಿಕ್ಕಿಲ್ಲ. ಕೆಪಿಸಿಸಿ ಅಧ್ಯಕ್ಷನಾದಾಗ ಅದು ಆರು ತಿಂಗಳು ಅಷ್ಟೇ ಅಂತಿದ್ದರು. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ನಮ್ಮಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬಂದಿ ಇದ್ದಾರೆ. ಪ್ರತಿಯೊಬ್ಬರಿಗೂ ಮನೆ ಕೊಡಬೇಕೆಂಬ ಉದ್ದೇಶ ಇದೆ. ಇದಕ್ಕಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಪೊಲೀಸರ ಮನೆ ಕಟ್ಟಲು ಅನುದಾನ ಕೇಳಿದ್ದೇನೆ. ಬೇರೇನು ಕೇಳುವುದಿಲ್ಲ, ಪೊಲೀಸರ ಮನೆಗಳಿಗೆ 5 ಸಾವಿರ ಕೋಟಿ ಕೊಡಿ ಎಂದು ಅಹವಾಲು ಮುಂದಿಟ್ಟಿದ್ದೇನೆ ಎಂದರು.
ಕಮ್ಯುನಲ್ ಫೋರ್ಸ್ ಸಮಾಜಕ್ಕೆ ಕಂಟಕ, ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿ ಬೆಳೆಯಗೊಡಬೇಡಿ ಎಂದು ಈ ಹಿಂದೆ ಹೇಳಿದ್ದೆ. ಗೃಹ ಸಚಿನವಾಗಿ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾಗ, ಇಲ್ಲಿ ಕೋಮು ಶಕ್ತಿ ಹತ್ತಿಕ್ಕಲು ವಿಶೇಷ ವಿಂಗ್ ಮಾಡಿದ್ದೆ. ಅದು ಬಹಳಷ್ಟು ಯಶಸ್ವಿಯಾಗಿದೆ ಎಂಬ ನಂಬಿಕೆಯಿದೆ. ಈಗ ಕಮ್ಯುನಲ್ ಹಿಂಸೆ ಕಡಿಮೆಯಾಗಿದೆ. ಈ ಭಾಗದಲ್ಲಿ ಶಾಂತಿ ನೆಲೆಸಿದೆ, ಒಂದು ಕಾಲದಲ್ಲಿ ಮಂಗಳೂರಿಗೆ ವಿಶೇಷ ಸ್ಥಾನ ಇತ್ತು. ನಾವು ಘಟ್ಟದವರು ಬಹಳ ಅಭಿಮಾನ ಇಟ್ಟು ಬರುತ್ತಿದ್ದೆವು.
ಮಂಗಳೂರನ್ನು ಕರ್ನಾಟಕದ ಎರಡನೇ ಸಿಟಿಯಾಗಿ ಮಾಡಬೇಕೆಂಬ ಕನಸು ಇದೆ. ಇಲ್ಲಿ ಗೋಲ್ಡ್ ಸೋಪ್, ಗೋಲ್ಡನ್, ಡೈಮಂಡ್ ಜುವೆಲ್ಲರಿ ತಯಾರಿಸುವ ಎಸ್ಇಝೆಡ್ ಮಾಡಬೇಕೆಂದು ಪ್ರಣಾಳಿಕೆ ಇದೆ. ಇನ್ನೂ ಮೂರು ವರ್ಷ ಇದೆ, ಮಾಡುತ್ತೀವಿ ಎಂದು ಹೇಳಿದರು. ವೇದಿಕೆಯಲ್ಲಿ ಶಾಸಕ ಅಶೋಕ್ ರೈ, ಎಂಎಲ್ಸಿ ಐವಾನ್ ಡಿಸೋಜ, ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಇದ್ದರು.
Home Minister Dr G Parameshwara has instructed police to take decisive action against drug peddlers, stressing that there will be no compromise in the fight against narcotics. Speaking at the inauguration of a new police residential complex and station offices in Mangaluru on Saturday, November 30, Parameshwara revealed that narcotics worth Rs 250 crore had been seized and destroyed over the past year. He also emphasised that authorities are actively targeting the networks behind the drug trade.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 11:22 am
Mangalore Correspondent
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm