ಬ್ರೇಕಿಂಗ್ ನ್ಯೂಸ್
17-08-24 02:54 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.17: ಮುಡಾ ಸೈಟ್ ವಿಚಾರ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು. ಮೋದಿ ಸರ್ಕಾರ ಎಲ್ಲಾ ಸಾಂವಿಧಾನಿಕ ಹುದ್ದೆಗಳನ್ನ ಸರ್ವನಾಶ ಮಾಡ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರು, ತಪ್ಪೇ ಮಾಡದ ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಿದ್ದಾರೆ. ಗವರ್ನರ್ ಯಾವ ಕೆಳಮಟ್ಟಕ್ಕೆ ಇಳಿದಿದ್ದಾರೆ ಅನ್ನೋದನ್ನ ತೋರಿಸ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಕೈಗೊಂಬೆಯಾಗಿ ಗವರ್ನರ್ ಆಡ್ತಿದಾರೆ. ನಾವು ಕಾನೂನಿನ ಹೋರಾಟ ಮಾಡ್ತಿದೇವೆ. ಇದಕ್ಕೆಲ್ಲ ಸಿಎಂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ. ಬಿಜೆಪಿ ದುರ್ನಡತೆ ಮುಂದುವರೆದಿದೆ, ಈ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡ್ತೇವೆ. ಇದಕ್ಕೆ ಜನರು ಕೂಡ ತಕ್ಕ ಉತ್ತರ ಕೊಡ್ತಾರೆ, ಚುನಾಯಿತ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಮಾಡ್ತಿದಾರೆ.
ಯಡಿಯೂರಪ್ಪ ಅವರ ಮೇಲೆ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರೇ ವರದಿ ಕೊಟ್ಟಿದ್ದರು. ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿ ಇತ್ತು. ಆದರೂ ಗವರ್ನರ್ ಆಗ ಬಹಳಷ್ಟು ನೋಡಿ ಪ್ಯಾಷಿಕ್ಯೂಷನ್ ಅನುಮತಿ ಕೊಟ್ಟಿದ್ದರು. ಯಡಿಯೂರಪ್ಪರಿಗೂ ಸಿದ್ದರಾಮಯ್ಯರಿಗೂ ಹೋಲಿಕೆ ಮಾಡಲು ಆಗಲ್ಲ. ಯಡಿಯೂರಪ್ಪ ಒಬ್ಬ ಮಹಾಭ್ರಷ್ಟ, ಅವರು ಹಲವು ಕೇಸ್ ಗಳಲ್ಲಿ ಇದ್ದಾರೆ. ಅತೀ ಹೆಚ್ಚು ಭ್ರಷ್ಟಾಚಾರ ಮಾಡಿದ್ದಕ್ಕೆ ಅವರನ್ನ ಬಿಜೆಪಿಯೇ ಎರಡು ಬಾರಿ ಕಿತ್ತಾಕಿತ್ತು. ಬಿಜೆಪಿ ಕೆಳಮಟ್ಟಕ್ಕೆ ಇಳಿದಿದೆ, ಕಾನೂನು ಬಾಹಿರ ಕೆಲಸ ಮಾಡ್ತಿದೆ. ಬಿಜೆಪಿ ರಾಮರಾಜ್ಯ ಅಂತೆಲ್ಲಾ ಹೇಳಿ ಈ ರೀತಿ ಮಾಡ್ತಾ ಇದೆ.
ಬಡವರ ಪರ ನಿಲ್ಲುವ ಜನನಾಯಕನ, ಜನಪ್ರಿಯ ಜನನಾಯಕನ ಮುಗಿಸೋಕೆ ಹೊರಟಿದ್ದಾರೆ. ಈ ಥರ ಷಡ್ಯಂತ್ರ ಮಾಡಿದ್ರೆ ಬಿಜೆಪಿಯವರ ಹೇಡಿತನ ತೋರಿಸುತ್ತದೆ. ರಾಜ್ಯಪಾಲರ ನಡೆ ಅತ್ಯಂತ ಅಕ್ಷಮ್ಯ. ಗೆಹ್ಲೋಟ್ ವರ್ತನೆ ಸರಿಯಲ್ಲ, ಆವತ್ತು ಶೋಕಾಸ್ ನೊಟೀಸ್ ಕೊಟ್ಟಾಗಲೇ ಗೊತ್ತಾಗಿತ್ತು. ಮೋದಿ, ಅಮಿತ್ ಶಾ ಕಚೇರಿಯಲ್ಲೇ ಇದೆಲ್ಲಾ ಸಿದ್ದವಾಗಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಇನ್ನಷ್ಟು ಗಟ್ಟಿಯಾಗಿದ್ದಾರೆ, ಜನಪ್ರಿಯರಾಗಿದ್ದಾರೆ.
ಬಿಜೆಪಿ ಮಾಡಿರುವ ಪಾದಯಾತ್ರೆ ಅತೀ ದೊಡ್ಡ ಫ್ಲಾಪ್ ಶೋ, ನಮ್ಮ ಸಮಾವೇಶ ಗೆದ್ದಿದೆ. ಉಪ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಸಿದ್ದರಾಮಯ್ಯರನ್ನ ಮುಗಿಸೋ ಅತೀ ದೊಡ್ಡ ಷಡ್ಯಂತ್ರ. ಇದರ ವಿರುದ್ದ ನಾವು ಹೋರಾಟ ಮಾಡಿಯೇ ಮಾಡ್ತೇವೆ. ನೇರವಾದ ರಾಜಕಾರಣ ಮಾಡದೇ ಸಂವಿಧಾನ ಬಾಹಿರ ಕೆಲಸ ಮಾಡಬೇಡಿ. ನಾವು ಇದನ್ನ ಎದುರಿಸಿ ಗೆಲ್ತೀವಿ, ಕಾಂಗ್ರೆಸ್ ಗೆ ಶಕ್ತಿ ಕೊಡೋ ಕೆಲಸ ಮಾಡ್ತೀವಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೊಲ್ಕತ್ತಾ ವೈದ್ಯರ ಕೊಲೆ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಕೃತ್ಯದಿಂದ ಎಲ್ಲರಿಗೂ ಆತಂಕ, ಗಾಬರಿ ಸೃಷ್ಟಿಯಾಗಿದೆ. ವೈದ್ಯರು ಹಾಗೂ ಇತರೇ ಎಲ್ಲಾ ಸಿಬ್ಬಂದಿ ರಾತ್ರಿಯಿಡೀ ಕೆಲಸ ಮಾಡ್ತಾರೆ. ಮಹಿಳಾ ಸಿಬ್ಬಂದಿ ಕೂಡ ರಾತ್ರಿಯಿಡೀ ಕೆಲಸ ಮಾಡ್ತಾರೆ. ಈ ಹಿನ್ನೆಲೆಯಲ್ಲಿ ನಾನು ಮಂಗಳವಾರ ಎಲ್ಲಾ ವೈದ್ಯರು, ಆಸ್ಪತ್ರೆ ಮಾಲೀಕರ ಸಭೆ ಕರೆದಿದ್ದೇನೆ. ಸುರಕ್ಷತೆ ಬಗ್ಗೆ ಏನೇನು ಕ್ರಮ ತೆಗೋಬೇಕು ಅಂತ ಚರ್ಚೆ ಮಾಡ್ತೇವೆ.
ಇವತ್ತು ತುರ್ತು ಸೇವೆಗಳು ಎಲ್ಲಾ ಆಸ್ಪತ್ರೆಯಲ್ಲಿ ಇರ್ತವೆ. ಓಪಿಡಿ ಮಾತ್ರ ಇವತ್ತು ಬಂದ್ ಇರುತ್ತೆ, ಆದರೂ ಅಗತ್ಯ ಸೇವೆ ಇರಲಿದೆ. ಇವತ್ತು ಸ್ವಲ್ಪ ತೊಂದರೆ ಆಗುತ್ತೆ, ಆಗಲ್ಲ ಅಂತ ನಾನು ಹೇಳಲ್ಲ. ಪ್ರತಿಭಟನೆ ಸರಿಯಲ್ಲ ಅಂತ ಹೇಳಲ್ಲ, ಒಳ್ಳೆಯ ಉದ್ದೇಶದಿಂದ ಮಾಡ್ತಾ ಇದಾರೆ. ಕೆಲಸ ಮಾಡಲು ಭಯದ ವಾತಾವರಣ ಇರಬಾರದು, ಅವರು ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಠಿಣ ಕಾನೂನು ತರುವ ಬಗ್ಗೆ ತಿದ್ದುಪಡಿ ಆಗಿದೆ, ರಾಜ್ಯಪಾಲರು ಅದಕ್ಕೆ ಸಹಿ ಹಾಕಬೇಕಿದೆ. ವೈದ್ಯರು, ನರ್ಸ್ ಗಳಿಗೆ ಹಾಗೂ ಸಿಬ್ಬಂದಿಗೆ ರಕ್ಷಣೆ ಕೊಡೋ ಕಾಯಿದೆ ಮಾಡಿದ್ದೇವೆ. ಇದರ ಪ್ರಕಾರ, ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕೋದು ಕೂಡ ಇದರಡಿ ಅಪರಾಧ ಆಗಲಿದೆ ಎಂದರು.
ಸಿಬಂದಿ ಸುರಕ್ಷತೆ ಅನ್ನೋದು ಆಸ್ಪತ್ರೆ ನಡೆಸೋರ ಜವಾಬ್ದಾರಿ ಕೂಡ ಆಗಿದೆ. ಜೊತೆಗೆ ಬೇರೆ ಬೇರೆ ಸವಲತ್ತುಗಳ ವಿಚಾರದಲ್ಲಿ ಕ್ರಮ ವಹಿಸಿಕೊಳ್ಳಲು ಚರ್ಚೆ ನಡೆಸ್ತೇವೆ. ಮಂಗಳವಾರ ಎಲ್ಲರನ್ನೂ ಕರೆಸಿ ಅವರ ಅಭಿಪ್ರಾಯ ಪಡೀತಿವೆ. ರಕ್ಷಣೆ ಕೊಡಿಸೋದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ. ಏನಾದ್ರೂ ದೋಷಗಳು, ವ್ಯತ್ಯಾಸಗಳಿದ್ರೆ ಎಲ್ಲರೂ ಸೇರಿ ತೀರ್ಮಾನಕ್ಕೆ ಬರೋಣ. ಸುರಕ್ಷಿತ ಹಾಗೂ ಭದ್ರತೆ ಬಗ್ಗೆ ನಾವು ಹೆಚ್ಚು ಚಿಂತಿಸ್ತೇವೆ ಎಂದು ಹೇಳಿದರು.
Minister for Health and Family Welfare Dinesh Gundu Rao said that Governor Thaawarchand Gehlot sanctioning the prosecution of Karnataka Chief Minister Siddaramaiah over corruption charges in the allotment of plots is a conspiracy by the BJP.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm