ಬ್ರೇಕಿಂಗ್ ನ್ಯೂಸ್
27-07-24 01:47 pm Mangalore Correspondent ಕರಾವಳಿ
ಕಾರವಾರ, ಜುಲೈ.27: ಅಂಕೋಲಾದ ಶಿರೂರಿನ ಭೂಕುಸಿತ ದುರಂತ ನಡೆದು ಹನ್ನೊಂದು ದಿನಗಳು ಕಳೆದಿದ್ದು ಸ್ಥಳದಲ್ಲಿ ನೇವಿ ಸೇರಿದಂತೆ ಮಿಲಿಟರಿ ಪಡೆ ಕಾರ್ಯಾಚರಣೆ ಮುಂದುವರಿಸಿದೆ. ಇದೇ ವೇಳೆ, ಉತ್ತರ ಕನ್ನಡ ಜಿಲ್ಲಾಡಳಿತ ನದಿಯಲ್ಲಿ ಮುಳುಗಿ ಕಾರ್ಯಾಚರಣೆ ನಡೆಸುವುದರಲ್ಲಿ ಖ್ಯಾತಿ ಪಡೆದಿರುವ ಈಶ್ವರ್ ಮಲ್ಪೆ ತಂಡವನ್ನು ಕರೆಸಿಕೊಂಡಿದ್ದು ಶಿರೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಲಾರಿ ಹಾಗೂ ಚಾಲಕನ ಪತ್ತೆ ಕಾರ್ಯಾಚರಣೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಉತ್ತರಕನ್ನಡ ಎಸ್ಪಿ ನಾರಾಯಣ್ ಶುಕ್ರವಾರ ಕರೆ ಮಾಡಿ, ಈಶ್ವರ್ ಮಲ್ಪೆ ಅವರಲ್ಲಿ ಕಾರ್ಯಾಚರಣೆಗೆ ಕೈಜೋಡಿಸಲು ಕೇಳಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಈಶ್ವರ್, ಶನಿವಾರ ಮುಂಜಾನೆ ನಮ್ಮ ತಂಡ ಶಿರೂರಿಗೆ ಬಂದು ಕಾರ್ಯಾಚರಣೆ ಆರಂಭಿಸಿದ್ದೇವೆ. ಆದರೆ ಗಂಗಾವಳಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಿರುವುದರಿಂದ ನೀರಿನಾಳಕ್ಕೆ ಹೋಗಿ ಹುಡುಕಾಟ ನಡೆಸುವುದು ಸವಾಲಿನ ಕೆಲಸ. ಅಲ್ಲದೆ ಭೂ ಕುಸಿತದ ಸಂದರ್ಭ ಮನೆಯ ಅವಶೇಷಗಳು ನದಿಗೆ ಬಿದ್ದಿರುವುದರಿಂದ ನೀರಿನಾಳದಲ್ಲಿ ಕಬ್ಬಿಣದ ಶೀಟ್, ಇನ್ನಿತರ ವಸ್ತುಗಳಿದ್ದು ಅದರ ಜೊತೆಗೆ ಕೆಸರು ಮಿಶ್ರಿತ ನೀರು ಹರಿಯುವುದರಿಂದ ನೀರಿನಾಳದಲ್ಲಿ ವಸ್ತುಗಳು ಕಣ್ಣಿಗೆ ಕಾಣುವುದಿಲ್ಲ. ಬರೀ ಸ್ಪರ್ಶ ಜ್ಞಾನದಿಂದ ಯಾವ ವಸ್ತು ಎಂದು ಕಂಡುಹಿಡಿಯಬೇಕು. ಇದು ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ಈಗಾಗಲೇ ಸ್ಥಳದಲ್ಲಿ ಸೇನಾ ಪಡೆ, ಎನ್.ಡಿ.ಆರ್.ಎಫ್. ತಂಡ ಕಾರ್ಯಾಚರಣೆ ನಡೆಸಿದ್ದು ಅವರ ಮಾರ್ಗದರ್ಶನ ಪಡೆದು ನಾವು ಕಾರ್ಯಾಚರಣೆ ನಡೆಸುತ್ತೇವೆ ಎಂದವರು ಹೇಳಿದ್ದಾರೆ. ಲಾರಿ ಚಾಲಕ ಸೇರಿದಂತೆ ಇನ್ನಿಬ್ಬರು ನಾಪತ್ತೆಯಾದವರ ಪತ್ತೆ ಕಾರ್ಯ ಆಗಬೇಕಿದೆ. ಸ್ಥಳದಲ್ಲಿ ನಾಲ್ಕು ದಿನಗಳಿಂದ ನೌಕಾಪಡೆಯ ಸ್ಕೂಬಾ ಡೈವರ್ ಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ನದಿಯಲ್ಲಿ ನೀರಿನ ವೇಗ ಹೆಚ್ಚಿದೆ. ಗಂಟೆಗೆ 60 ಕಮೀ ವೇಗದಲ್ಲಿ ನೀರಿನ ಹರಿವು ಇರುವುದರಿಂದ ನೀರಿನಾಳಕ್ಕೆ ಇಳಿಯುವುದಾಗಲೀ, ಒಳಗೆ ಏನಿದೆ ಎಂದು ಪತ್ತೆ ಮಾಡುವುದಾಗಲೀ ಸಾಧ್ಯವಾಗಿಲ್ಲ.
Underwater expert Eshwar malpe joins team to search missing lorry driver Arjun at Ankola landslide spot. A team of eight divers led by underwater search and recovery expert Eshwar Malpe reached Karnataka's Shirur on Saturday to join the search operations for Kozhikode native Arjun, a truck driver who went missing in a massive landslide. Talking to the media Malpe said that he was summoned by the Dakshina Kannada Superintendent of Police. He added that his team can dive into up to 100 feet deep of the waters.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm