ಬ್ರೇಕಿಂಗ್ ನ್ಯೂಸ್
25-07-24 11:19 pm Mangalore Correspondent ಕರಾವಳಿ
ಉಳ್ಳಾಲ, ಜು.25: ಮದನಿ ನಗರದ ಮಾದರಿಯಲ್ಲೇ ಉಳ್ಳಾಲದಲ್ಲೂ ಮನೆ ಕುಸಿತ ಉಂಟಾಗಿದ್ದು, ಮನೆ ಛಾವಣಿ ಮೇಲೆ ಪಕ್ಕದ ಮನೆಯ ಎತ್ತರದ ಶಿಥಿಲಗೊಂಡ ಗೋಡೆಯ ಕಲ್ಲುಗಳು ಕುಸಿದು ಬಿದ್ದಿದೆ. ಮನೆಯೊಳಗಿದ್ದ ಗೃಹಿಣಿ ಮತ್ತು ಇಬ್ಬರು ಮಕ್ಕಳು ಪವಾಡ ಸದೃಶ ಪಾರಾಗಿದ್ದಾರೆ.
ಧಾರಾಕಾರ ಸುರಿಯುತ್ತಿರುವ ಮಳೆಗೆ ಮನೆಯ ಹಂಚಿನ ಛಾವಣಿ ಮೇಲೆ ಪಕ್ಕದ ಮನೆಯ ಗೋಡೆಯ ಕಲ್ಲುಗಳು ಕುಸಿದು ಬಿದ್ದ ಘಟನೆ ಉಳ್ಳಾಲ ಕೋಟೆಪುರದ ಕೋಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮುಸ್ತಫಾ ಎಂಬವರ ಮಾಲಿಕತ್ವದ ಬಾಡಿಗೆ ಮನೆಯಲ್ಲಿ ಅನಾಹುತ ಸಂಭವಿಸಿದೆ. ಝಾಕಿರ್ ಎಂಬವರ ಕುಟುಂಬ ವಾಸವಿದ್ದು ಧಾರಾಕಾರ ಮಳೆಗೆ ಮನೆಯ ಹಂಚಿನ ಮೇಲೆ ಪಕ್ಕದ ಶಿಥಿಲ ಮನೆಯ ಎತ್ತರದ ಗೋಡೆ ಕುಸಿದು ಬಿದ್ದಿದೆ. ಗೋಡೆಯ ಒದ್ದೆಯಾದ ಬೃಹತ್ ಗಾತ್ರದ ಕೆಂಪು ಕಲ್ಲುಗಳು ಝಾಕಿರ್ ವಾಸವಿದ್ದ ಮನೆಯ ಹಾಲಿನ ಸೋಫದ ಮೇಲೆ ಬಿದ್ದಿವೆ. ಮನೆಯೊಳಗಡೆ ಝಾಕಿರ್ ಅವರ ಪತ್ನಿ ಇದ್ದು ಇಬ್ಬರು ಪುಟ್ಟ ಮಕ್ಕಳು ಸೋಫಾದಲ್ಲೇ ಆಟವಾಡುತ್ತಿದ್ದರು. ಈ ವೇಳೆ ನೆರೆ ಮನೆಯವರು ಬಂದು ಬಾಗಿಲು ತಟ್ಟಿದ್ದಾರೆ. ಝಾಕಿರ್ ಪತ್ನಿ ಬಾಗಿಲು ತೆರೆಯಲು ಹೋದಾಗ ಮಕ್ಕಳಿಬ್ಬರು ತಾಯಿ ಜೊತೆ ಬಂದಿದ್ದರಿಂದ ಬಚಾವಾಗಿದ್ದಾರೆ.
ಮುಸ್ತಫಾ ಅವರ ಆವರಣ ಗೋಡೆಯ ಒಳಗಡೆ ಮೂರು ಬಾಡಿಗೆ ಮನೆ, ಮತ್ತೊಂಡು ಅಂಗಡಿ ಇದೆ. ಮೂರು ಮನೆಗಳ ಕುಟಂಬಸ್ಥರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಸಚಿವರ ಆದೇಶಕ್ಕೆ ಕಿಮ್ಮತ್ತು ಕೊಡದ ನಗರಸಭೆ
ಕುತ್ತಾರಿನ ಮದನಿನಗರದಲ್ಲಿ ಕಳೆದ ತಿಂಗಳಲ್ಲಿ ಆವರಣ ಗೋಡೆ ಮನೆ ಮೇಲೆ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಳೆಗಾಲದಲ್ಲಿ ಅಪಾಯದಲ್ಲಿರುವ ಮನೆಗಳನ್ನು ಗುರುತಿಸಿ ಮನೆಮಂದಿಯನ್ನ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಆದರೆ ಸಚಿವರ ಮಾತಿಗೆ ಉಳ್ಳಾಲ ನಗರಸಭೆ ಕಿಮ್ಮತ್ತು ಕೊಟ್ಟಿಲ್ಲ. ನಗರಸಭೆ ವತಿಯಿಂದ ಅಪಾಯ ಎದುರಿಸುವ ಕುಟುಂಬಗಳಿಗೆ ಒಂಭತ್ತುಕೆರೆ ಸರಕಾರಿ ಶಾಲೆಯ ಮೇಲ್ಮಹಡಿಯ ಸಭಾಂಗಣವನ್ನ ಪರ್ಯಾಯ ವ್ಯವಸ್ಥೆಯಾಗಿ ಮೀಸಲಿಟ್ಟಿದ್ದಾರೆ. ಆದರೆ ಮೂಲ ಸೌಕರ್ಯಗಳೇ ಇಲ್ಲದೆ ತೆರೆದ ಸಭಾಂಗಣದಲ್ಲಿ ಯಾರೊಬ್ಬರು ಉಳಿದುಕೊಳ್ಳಲು ಸಿದ್ಧರಿಲ್ಲದೆ ಅಪಾಯಕಾರಿ ಮನೆಗಳಲ್ಲೇ ವಾಸಿಸುತ್ತಿದ್ದಾರೆ.
Heavy rain in Mangalore, Ullal house wall collapses, family escapes from death.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm