ಬ್ರೇಕಿಂಗ್ ನ್ಯೂಸ್
18-07-24 12:54 pm Mangalore Correspondent ಕರಾವಳಿ
ಸಕಲೇಶಪುರ, ಜುಲೈ.18: ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್, ಎತ್ತಿನಹಳ್ಳ ಬಳಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು ಹೆದ್ದಾರಿ ಸಂಚಾರಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ನಿನ್ನೆ ರಾತ್ರಿ ಘಾಟ್ ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ ಓಮ್ನಿ ಕಾರಿನ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಅದರಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲಿ ಪಾರಾಗಿದ್ದಾರೆ.
KA-17 M 5003 ನಂಬರ್‌ನ ಓಮ್ನಿ ಕಾರು ಮಣ್ಣಿನಡಿ ಸಿಲುಕಿದ್ದು ಬೆಳಗ್ಗೆ ಅದನ್ನು ಕಾರ್ಮಿಕರು ಮತ್ತು ಕಂದಾಯ ಇಲಾಖೆ ಸಿಬಂದಿ ಬಂದು ತೆರವು ಮಾಡಿದ್ದಾರೆ. ಮುಂಜಾನೆ ಸ್ಥಳಕ್ಕೆ ಬಂದಿದ್ದ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಕಂಪನಿಯ ಸಿಬ್ಬಂದಿ ಮೇಲೆಯೂ ಮಣ್ಣು ಕುಸಿದಿದ್ದು ಬಿಹಾರ ಮೂಲದ ಅಖಿಲೇಶ್ ಹಾಗೂ ಶರತ್ ಎಂಬವರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕುಸಿತ ಸಂದರ್ಭದಲ್ಲಿ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎತ್ತಿನಹಳ್ಳ, ದೊಡ್ಡತಪ್ಲು ಬಳಿ ಮುಂಜಾನೆ ವೇಳೆಗೆ ಮತ್ತಷ್ಟು ಗುಡ್ಡ ಕುಸಿದಿದ್ದು ಹೆದ್ದಾರಿಯ ಇಕ್ಕೆಲಗಳಲ್ಲಿ ಸುಮಾರು 10 ಕಿಮೀ ಟ್ರಾಫಿಕ್ ಜಾಮ್ ಆಗಿದೆ. ಬೆಳಗ್ಗಿನ ಹೊತ್ತಿಗೆ ಮಣ್ಣು ಕುಸಿತ ಪ್ರದೇಶದಲ್ಲಿ ವಾಹನಗಳು, ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಬಸ್ ಗಳು ಸಿಕ್ಕಿಬಿದ್ದಿದ್ದವು. ಸ್ಥಳದಲ್ಲಿ 2-3 ಗಂಟೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು.
ಅತ್ತ ಚಾರ್ಮಾಡಿ ಘಾಟ್ ನಲ್ಲು ಭೂಕುಸಿತವಾಗಿದ್ದು ವಾಹನಗಳನ್ನು ಹಾಸನದಲ್ಲಿಯೇ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಸಕಲೇಶಪುರದ ವರೆಗೆ ತೆರಳುವ ಸಾರಿಗೆ ಬಸ್ ಗಳಿಗೆ ಮಾತ್ರ ತೆರಳಲು ಅವಕಾಶ ನೀಡಿದ್ದಾರೆ. ಮಂಗಳೂರು ಕಡೆಗೆ ಹೋಗುವ ಬಸ್ ಗಳಿಗೆ ಹಾಸನ ತಾಲ್ಲೂಕಿನ ಕಂದಲಿ ಬಳಿ ತಡೆ ಹಾಕಿದ್ದಾರೆ. ವಾಹನಗಳನ್ನು ತಡೆದು ಗುಡ್ಡ ಕುಸಿತದ ಬಗ್ಗೆ ಮಾಹಿತಿ ನೀಡಿ ಹಿಂದಕ್ಕೆ ಕಳಿಸುತ್ತಿದ್ದರು. ಸಕಲೇಶಪುರದ ಮಾರನಹಳ್ಳಿ ಬಳಿಯೂ ಗುಡ್ಡ ಕುಸಿದಿದ್ದು ನೂರಾರು ಮೀಟರ್ ಎತ್ತರದಿಂದ ಮಣ್ಣು ಕುಸಿದು ಹೆದ್ದಾರಿಗೆ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ವಾಹನಗಳು ಅಪಾಯದಿಂದ ಪಾರಾಗಿವೆ. ನಾಲ್ಕು ವರ್ಷಗಳ ಹಿಂದೆ ಶಿರಾಡಿ ಘಾಟ್ ಪ್ರದೇಶದ ಇದೇ ಭಾಗದಲ್ಲಿ ಭೂಕುಸಿತ ಆಗಿತ್ತು.
Mangalore Landalide at Shiradi Ghat and Bantwal in Mangalore, omni car buried in mud, buses stuck. The passengers of a car narrowly escaped being buried under mud on the Bengaluru-Mangaluru National Highway 75 overnight on July 17-18. Their vehicle was buried under mud following a landslide near Doddathappale village on Shiradi Ghat stretch of NH 75. Local people rescued the passengers.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm