ಬ್ರೇಕಿಂಗ್ ನ್ಯೂಸ್
13-07-24 05:23 pm Mangalore Correspondent ಕರಾವಳಿ
ಮಂಗಳೂರು, ಜುಲೈ.13: ರಾಜ್ಯದಲ್ಲಿ ಅಂಗನವಾಡಿಯ ಹೆಸರನ್ನು ಗವರ್ನಮೆಂಟ್ ಮಾಂಟೆಸ್ಸರಿ ಎಂದು ಬದಲಿಸಲು ನಿರ್ಧರಿಸಲಾಗಿದೆ. ಈಗಾಗಲೇ ಇದರ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈಗಾಗಲೇ ಈ ಬಗ್ಗೆ ಪ್ರಕ್ರಿಯೆ ಶುರು ಮಾಡಿದ್ದೇವೆ. ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿಗಳಿವೆ. ಪ್ರಥಮ ಹಂತದಲ್ಲಿ 20 ಸಾವಿರ ಅಂಗನವಾಡಿಗಳನ್ನು ಗವರ್ನಮೆಂಟ್ ಮಾಂಟೆಸ್ಸರಿ ಎಂದು ಮಾಡ್ತೀವಿ. ಮಾಂಟೆಸ್ಸರಿ ಮಾಡಿದ ಮೇಲೆ ವಿದ್ಯೆ ಹೇಳಿಕೊಡುವ ಶಿಕ್ಷಕರ ವಿದ್ಯಾರ್ಹತೆ ಚೆನ್ನಾಗಿರಬೇಕು. ಇಲಾಖೆಯಲ್ಲಿ 15 ಸಾವಿರ ಅಂಗನವಾಡಿ ಕಾರ್ಯಕರ್ತರು ಪದವಿ ಮಾಡಿದವರಿದ್ದಾರೆ. 2 ಸಾವಿರ ಸ್ನಾತಕೋತ್ತರ ಪದವಿ ಮಾಡಿದವರಿದ್ದಾರೆ.
ಇಂಥವರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಗವರ್ನಮೆಂಟ್ ಮಾಂಟೆಸ್ಸರಿ ಅಂತಾ ಮಾಡ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಸ್ಮಾರ್ಟ್ ಕ್ಲಾಸ್ ಅಂತಾ ಮಾಡ್ತೀವಿ. ಇದಕ್ಕೆ ಕೇಂದ್ರ ಸರ್ಕಾರದ ಮಹಿಳಾ ಕಲ್ಯಾಣ ಇಲಾಖೆ ಸಚಿವರು ಸಾಥ್ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಇಲ್ಲಿ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಎರಡೂ ಭಾಷೆ ಕಲಿಯುವ ಅವಕಾಶವಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಎಂಆರ್ಪಿ ಎಲ್ ಘಟಕದ ಸಿ ಎಸ್ ಆರ್ ಹಾಗು ಶಾಸಕರ ಸ್ಥಳೀಯ ಪ್ರವೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ ನವೀಕರಣಗೊಂಡ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಕಟ್ಟಡ, 'ಸಾಹಿತ್ಯ ಸದನ'ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಹೆಬ್ಬಾಳ್ಕರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೂಡಾದಲ್ಲಿ ಹಗರಣ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಕರ್ನಾಟಕ ಸರ್ಕಾರದಿಂದ ನಾವು ಎಸ್.ಐ.ಟಿ ರಚನೆ ಮಾಡಿ ತನಿಖೆ ಮಾಡ್ತಿದ್ದೇವೆ. ಈ ಸಂದರ್ಭ ನಾನು ಏನೋ ಹೇಳಿ ರಾದ್ದಾಂತ ಆಗೋದು ಬೇಡ. ತನಿಖೆ ಪೂರ್ಣವಾದ ಬಳಿಕ ಆ ಬಗ್ಗೆ ಮಾತನಾಡುವೆ. ವಿರೋಧ ಪಕ್ಷದಲ್ಲಿರುವವರು ಮಾಡಬಾರದಂತಹ ಹಗರಣ ಮಾಡಿದ್ದಾರೆ. ಹೀಗಾಗಿ 60 ಸಂಖ್ಯೆಗೆ ಬಂದು ನಿಂತುಕೊಂಡಿದ್ದಾರೆ.
ರಾಜ್ಯದ ಜನರ ಮುಂದೆ ಏನೋ ಹೋರಾಟ ಮಾಡಬೇಕೆಂದು ಮಾಡ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದೇವೆ ಎಂದು ತೋರಿಸೋದಕ್ಕೆ ಮಾಡ್ತಿದ್ದಾರೆ. ನಮ್ಮ ಜೊತೆಯು ಕಾನೂನಿನ ಪಂಡಿತರು ಇದ್ದಾರೆ. ಅವರ ಬಳಿ ಕೇಳಿದಾಗ ಈ ಮೂಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಗೊತ್ತಾಗಿದೆ. ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದು ಹೇಳಿದರು.
Converting Anganwadis into Montessori schools has begun in the state says Lakshmi Hebbalkar in Mangalore. There are approximately 70,000 Anganwadis in Karnataka. In the first phase, 20,000 Anganwadis will be converted into government Montessori schools. The teachers providing education in these Montessori schools must have proper qualifications.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm