ಬ್ರೇಕಿಂಗ್ ನ್ಯೂಸ್
02-12-20 06:11 pm Udupi Correspondent ಕರಾವಳಿ
ಉಡುಪಿ, ಡಿ.2 : ಮಂಗಳೂರಿನಲ್ಲಿ ಸಮುದ್ರ ಮಧ್ಯೆ ಬೋಟ್ ಮುಳುಗಡೆಯಾಗಿ ಆರು ಮೀನುಗಾರರು ಕಣ್ಮರೆಯಾಗಿರುವ ದುರ್ಘಟನೆಯ ಹೊತ್ತಲ್ಲೇ ಉಡುಪಿ ಮೂಲದ ಬೋಟ್ ಅದೇ ಮಾದರಿಯಲ್ಲಿ ದುರಂತಕ್ಕೀಡಾಗಿ ತಂತ್ರಜ್ಞಾನ ಸಾಧನದ ನೆರವಿನಿಂದ ಅಪಾಯದಿಂದ ಪಾರಾಗಿ ಮರು ವಿಚಾರ ಬೆಳಕಿಗೆ ಬಂದಿದೆ.
ಉಡುಪಿಯ ಏಳು ಮೀನುಗಾರರನ್ನು ಹೊಂದಿದ್ದ ಮೀನುಗಾರಿಕಾ ಬೋಟ್ ಮಹಾರಾಷ್ಟ್ರ ಕರಾವಳಿಯ ಸಮುದ್ರ ಮಧ್ಯೆ ಮುಳುಗುವ ಹಂತ ತಲುಪಿತ್ತು. ಬೋಟ್ ನಲ್ಲಿದ್ದವರು ಕೂಡಲೇ ತಮ್ಮ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಆದರೆ, ಕಡಲಿನಲ್ಲಿ ಏನೇ ಬೊಬ್ಬೆ ಹಾಕಿದರೂ ಅದು ಅರಣ್ಯ ರೋದನ. ಅದೃಷ್ಟ ಎಂಬಂತೆ ಮೀನುಗಾರರ ಕಿರುಚಾಟ ಹತ್ತಿರದಲ್ಲಿದ್ದ ಇನ್ನೊಂದು ಬೋಟಿನವರಿಗೆ ಕೇಳಿಸಿತ್ತು.
ಕೂಡಲೇ ಬೋಟಿನಲ್ಲಿದ್ದ ಮಹೂರ್ ಎಂಬವರು, ತಮ್ಮ ಬಳಿಯಿದ್ದ ಸ್ಯಾಟಲೈಟ್ ಆಧರಿತ ಸಂವಹನ ಸಾಧನದಲ್ಲಿ ಸಂಪರ್ಕ ಸಾಧಿಸಿದ್ದಾರೆ. ಬಿಎಸ್ಎನ್ಎಲ್ ಕಂಪೆನಿಯ ಸ್ಕೈಲೊ 2-ವೇ ಸಂವಹನ ತಂತ್ರಜ್ಞಾನದಲ್ಲಿ ಕೂಡಲೇ ಮಹೂರ್, ದುರಂತಕ್ಕೀಡಾದ ಮಲ್ಪೆಯ ಬೋಟ್ ಮಾಲಕ ತಾರನಾಥ ಕುಂದರ್ ಗೆ ಸುದ್ದಿ ಮುಟ್ಟಿಸಿದರು. ಅಲ್ಲದೆ, ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ಪಡೆಗೂ ವಿಷಯ ತಿಳಿಸಿದ್ದಲ್ಲದೆ ಅದೇ ತಂತ್ರಜ್ಞಾನದ ಕಾರಣದಿಂದಾಗಿ ದುರಂತಕ್ಕೀಡಾದ ಬೋಟ್ ಇರುವ ಜಾಗವನ್ನು ಸುಲಭದಲ್ಲಿ ಪತ್ತೆ ಮಾಡುವಂತಾಗಿತ್ತು.
ನ.26ರಂದು ಈ ಘಟನೆ ನಡೆದಿದ್ದು ಮಲ್ಪೆಯ ತಾರನಾಥ್ ಕುಂದರ್ ಮಾಲಕತ್ವದ ಮಥುರಾ ಬೋಟ್ ನಲ್ಲಿ ಅಪಾಯಕ್ಕೀಡಾದ ಎಲ್ಲರನ್ನೂ ಸುರಕ್ಷಿತವಾಗಿ ಪಾರು ಮಾಡಲಾಗಿತ್ತು. ಬೋಟಿನಲ್ಲಿ ವಿನೋದ್ ಹರಿಕಂತ್ರ, ಮಹೇಶ್, ಲೋಕೇಶ್, ಶೇಖರ್, ಗಂಗಾಧರ್ ಮೊಗೇರ, ನಾಗಪ್ಪ ನಾರಾಯಣ್ ಹರಿಕಂತ್ರ ಮತ್ತು ಅನಿಲ್ ಗತಬೀರ ಹರಿಕಾಂತ್ ಇದ್ದರು. ಸಾವಿನ ದವಡೆಗೆ ಸಿಲುಕಿದ್ದ ಏಳು ಮೀನುಗಾರರನ್ನು ರಕ್ಷಣೆ ಮಾಡಲಾಗಿತ್ತು.
ರಕ್ಷಣೆಗೆ ನೆರವಾದ ಸಂವಹನ ತಂತ್ರಜ್ಞಾನ
ಘಟನೆಯ ಸಂದರ್ಭ ಮಹೂರ್ ತನ್ನಲ್ಲಿದ್ದ ಉಪಗ್ರಹ ಆಧಾರಿತ ಬಿಎಸ್‌ಎನ್‌ಎಲ್- ಸ್ಕೈಲೊ 2-ವೇ ಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡು, ಮಥುರಾ ಬೋಟ್ ಮಾಲೀಕರು ಮತ್ತು ಮಹಾರಾಷ್ಟ್ರ ಕರಾವಳಿ ಭದ್ರತಾ ಪಡೆಯೊಂದಿಗೆ ಸಂಪರ್ಕ ಸಾಧಿಸಿ ಅಪಾಯದ ಸಂದೇಶ ರವಾನಿಸಿದ್ದರು. ದ್ವಿಮುಖ ಸಂವಹನ ವ್ಯವಸ್ಥೆಯನ್ನು ಬಳಸಿಕೊಂಡು ಮುಳುಗುತ್ತಿದ್ದ ಮಥುರಾ ದೋಣಿಯ ನಿಖರವಾದ ಸ್ಥಳವನ್ನು ರಕ್ಷಣಾ ಪಡೆ ಸುಲಭದಲ್ಲಿ ಪತ್ತೆಹಚ್ಚಿತ್ತು.
ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಬೋಟ್ ಮಾಲೀಕ ತಾರನಾಥ ಕುಂದರ್, ಏಳು ಮೀನುಗಾರರು ಸುರಕ್ಷಿತವಾಗಿ ಮರಳುವಂತಾಗಿದ್ದು ತುಂಬ ಸಂತೋಷ ಮತ್ತು ನೆಮ್ಮದಿ ನೀಡಿದೆ. ಆಧುನಿಕ ಸಂವಹನ ಸಾಧನಗಳು ಶೀಘ್ರದಲ್ಲೇ ಎಲ್ಲ ಮೀನುಗಾರಿಕಾ ದೋಣಿಗಳಲ್ಲಿ ಅಳವಡಿಸುವ ಕೆಲಸವಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮೀನುಗಾರಿಕಾ ಬೋಟ್ ಗಳಲ್ಲಿ ಪರಿಣಾಮಕಾರಿ ಸಂವಹನ ತಂತ್ರಜ್ಞಾನದ ಕೊರತೆಯಿಂದಾಗಿ ನಾವು ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮೀನುಗಾರರು ಇಂತಹ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಬಹಳ ಅಗತ್ಯ. ಇದರಿಂದ ಪ್ರತಿವರ್ಷ ನೂರಾರು ಮೀನುಗಾರರ ಪ್ರಾಣ ಹೋಗುವುದನ್ನು ತಪ್ಪಿಸಬಹುದು ಮೀನುಗಾರಿಕೆ ಇಲಾಖೆ ಅಧಿಕಾರಿ ಗಣೇಶ್ ಹೇಳಿದ್ದಾರೆ.
Another Boat which should have been capsized at Udupi had a major escape through Satellite Phone. In Mangalore six fishermen died after boat capsized in the deep ocean.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm