Bantwal bride vote, Mangalore: ಹಸಮಣೆ ಏರೋದಕ್ಕೂ ಮೊದಲೇ ಸಿಂಗಾರಗೊಂಡು ಮತಗಟ್ಟೆಗೆ ಬಂದ ಮದುಮಗಳು ; ಸರತಿ ಸಾಲಲ್ಲಿ ನಿಂತು ಹಕ್ಕು ಚಲಾವಣೆ 

26-04-24 01:03 pm       Mangalore Correspondent   ಕರಾವಳಿ

ಮದುವೆ ಮಂಟಪಕ್ಕೆ ತೆರಳಿ ಹಸಮಣೆ ಏರೋದಕ್ಕೂ ಮೊದಲೇ ಸಿಂಗಾರಗೊಂಡ ಮದುಮಗಳು ನೇರವಾಗಿ ಮತಗಟ್ಟೆಗೆ ಬಂದು ತನ್ನ ಹಕ್ಕು ಚಲಾಯಿಸಿ ಕರ್ತವ್ಯ ಮೆರೆದಿದ್ದಾಳೆ. 

ಬಂಟ್ವಾಳ, ಎ.26: ಮದುವೆ ಮಂಟಪಕ್ಕೆ ತೆರಳಿ ಹಸಮಣೆ ಏರೋದಕ್ಕೂ ಮೊದಲೇ ಸಿಂಗಾರಗೊಂಡ ಮದುಮಗಳು ನೇರವಾಗಿ ಮತಗಟ್ಟೆಗೆ ಬಂದು ತನ್ನ ಹಕ್ಕು ಚಲಾಯಿಸಿ ಕರ್ತವ್ಯ ಮೆರೆದಿದ್ದಾಳೆ. 

ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಮತ ಕೇಂದ್ರ ಸಂಖ್ಯೆ 203 ರಲ್ಲಿ ಕಮಲಾಕ್ಷ ಪೂಜಾರಿ ಎಂಬವರ ದ್ವಿತೀಯ ಪುತ್ರಿ ವಿನುತಾ ಇಂದು ತನ್ನ ವಿವಾಹ ಮುಹೂರ್ತದ ಮೊದಲೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಗಮನ ಸೆಳೆದರು.

ವಿರಕಂಬ ಮಜಿ ಶಾಲೆಯಲ್ಲಿ ಎರಡು ಮತ ಕೇಂದ್ರಗಳಿದ್ದು ಮಧ್ಯಾಹ್ನ ವಿಪರೀತ ಬಿಸಿಲು ಇರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಬೆಳಗ್ಗೆಯೇ ಮತದಾನಕ್ಕೆ ಬಂದಿದ್ದರು. ಇದಲ್ಲದೆ, ಶುಭ ಕಾರ್ಯಕ್ರಮಗಳೂ ಇರುವುದರಿಂದ ಎರಡೂ ಮತ ಕೇಂದ್ರಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. 

ಇಲ್ಲಿನ ಮತದಾನ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಬೆಲ್ಲದ ವ್ಯವಸ್ಥೆ ಮಾಡಿರುವುದು ವಿಶೇಷ.

Bride casts her vote at Bantwal before her wedding in Mangalore. Loksabha election Mangalore live coverage 2024