ಬ್ರೇಕಿಂಗ್ ನ್ಯೂಸ್
03-04-24 02:12 pm Mangalore Correspondent ಕರಾವಳಿ
ಉಳ್ಳಾಲ, ಎ.3: ಅಮೆರಿಕದ ಫ್ಯೂಚರ್ ಪೋರ್ಟ್ ಯೂತ್-2023 ಪ್ಲೇಗ್ ಚೆಕ್ ರಿಪಬ್ಲಿಕ್" ಇವರು ಆಯೋಜಿಸಿದ್ದ 2023ನೇ ಸಾಲಿನ "ಮಾನವ ಸಮಾಜಕ್ಕೆ ವರದಾನವಾಗಲಿರುವ ಆವಿಷ್ಕಾರಗಳು” ಎಂಬ ವಿಷಯದ ಕುರಿತ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಉಳ್ಳಾಲ ಮೂಲದ ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಕುಮಾರಿ ಸಿಂಧೂರ ರಾಜ ಅವರು ಮಂಡಿಸಿದ್ದ ಆವಿಷ್ಕಾರಕ್ಕೆ ಪ್ರಥಮ ಬಹುಮಾನ 1 ಲಕ್ಷದ 77 ಸಾವಿರ ನಗದು ದೊರೆತಿದ್ದು, ನ್ಯೂಯಾರ್ಕ್ ನಲ್ಲಿ ನಡೆಯಲಿರುವ "ವರ್ಲ್ಡ್ ಸೈನ್ಸ್ ಸ್ಕಾಲರ್ಸ್" ಫೆಸ್ಟಿವಲ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ.
ಸಿಂಧೂರ ಅವರ ತಾಯಿ ಶಿಬಾನಿ ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಉಳ್ಳಾಲದ ಮೊಗವೀರ ಮುಖಂಡ ಬಾಬು ಬಂಗೇರ ಹಾಗೂ ಶಶಿಕಾಂತಿ ದಂಪತಿ ಮೊಮ್ಮಗಳಾಗಿರುವ ಸಿಂಧೂರ ಬೆಂಗಳೂರಿನ ನ್ಯೂ ಹೊರೈಝನ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಸಿಂಧೂರ ಬಾಲ್ಯದಲ್ಲೇ ಟಿ.ವಿ ನೋಡುವುದು ಕಡಿಮೆ, ಚಿತ್ರಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿದ್ದು, ಆಕೆಗೆ ಸ್ಮರಣಶಕ್ತಿ ಜಾಸ್ತಿಯಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರದ ಕುರಿತು ಆಸಕ್ತಿ ಹೊಂದಿದ್ದ ಸಿಂಧೂರ ಕೊರೊನಾ ಸಂದರ್ಭ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ಬಗ್ಗೆ ಅಧ್ಯಯನ ನಡೆಸಿದ್ದಳು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 19 ದೇಶದ 33 ಆವಿಷ್ಕಾರಗಳನ್ನು ಕೊನೆಯ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಸಿಂಧೂರ ರಾಜ ಮಂಡಿಸಿದ್ದ “ಆರ್ಟಿಫಿಷಿಯಲ್
ಇಂಟೆಲಿಜೆಂಟ್ಸ್ ಮಾಡೆಲ್ ಸಿಬಿ ಫ್ಲೋ” ಆವಿಷ್ಕಾರವು ಪ್ರಥಮ ಸ್ಥಾನ ಪಡೆದಿದೆ. ಈ ಆವಿಷ್ಕಾರವು ಮನುಷ್ಯನ ಮೆದುಳಿನ ಪ್ರಾಯವನ್ನು ಲೆಕ್ಕ ಹಾಕಿ
ಡಿಮೆನ್ಸಿಯಾ, ಆಲ್ಝೈಮರ್ ಮುಂತಾದ ನ್ಯೂರೋ ಡಿ ಜನರೇಟಿವ್ ಕಾಯಿಲೆಗಳು ಬರುವ
ಸಾಧ್ಯತೆಯನ್ನು ಅಂದಾಜಿಸುತ್ತದೆ.
ಸಿಂಧೂರ “ವರ್ಲ್ಡ್ ಸೈನ್ಸ್ ಸ್ಕಾಲರ್ 2023" ಆಗಿ ಆಯ್ಕೆಯಾಗಿ 2024 ಮೇ 29 ರಿಂದ ಜೂನ್ 2ರ ವರೆಗೆ ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೆಸ್ಟಿವಲ್‌ನಲ್ಲಿ
ಭಾಗವಹಿಸಲಿದ್ದಾರೆ. 22 ದೇಶಗಳ ಒಟ್ಟು 52 ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆತಿದೆ. ಅಲ್ಲಿ
ಇವರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳ ಜೊತೆ ವಿಚಾರ ವಿನಿಮಯ ನಡೆಸಲಿದ್ದಾರೆ ಎಂದು ಶಿಬಾನಿ ಹೇಳಿದರು.
ಸಿಂಧೂರ ಅವರು “ಯುರೋಪಿಯನ್ ಮೆಥಮ್ಯಾಟಿಕಲ್ ಸೊಸೈಟಿ” ಹಾಗೂ “ಕ್ಯಾಂಪ್ ಯೆಲ್ಲೋ" ಇವರು ನಡೆಸಿದ 2022ನೇ ಸಾಲಿನ ಅಂತರಾಷ್ಟ್ರೀಯ ಮೆಥಮ್ಯಾಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. “ಸ್ಟೆಮ್ ಪೀಡಿಯಾ” ಇವರು ನಡೆಸಿದ “ಕೋಡೆವಾರ್” 2022 ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ “ಪೀಪಲ್ ಚಾಯ್ಸ್" ಅವಾರ್ಡ್ ಪಡೆದಿದ್ದಾರೆ. ಸಿಂಧೂರ ಮಾಡಿರುವ ಪ್ರಾಜೆಕ್ಟ್ X-Ray, MRI - Scan ಗಳಲ್ಲಿ ಕಂಡುಬರುವ ಗಡ್ಡೆಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದನ್ನು ಶೇಕಡಾ 95 ರಿಂದ 98 ಪರ್ಸೆಂಟ್ ವರೆಗೆ ನಿಖರವಾಗಿ ತಿಳಿಸುತ್ತದೆ. ಇದು ವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿನಿ ಸಿಂಧೂರ ಮಾತನಾಡಿ, ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯವಾಗಿದೆ. ಕೊರೊನಾ ಸಂದರ್ಭ ಆಳವಾಗಿ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರ ತಿಳಿದು ಯಶಸ್ಸು ಸಾಧ್ಯವಾಗಿದೆ, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ಹೊಂದಿದ್ದು, ಹುಟ್ಟಿ ಬೆಳೆದ ಉಳ್ಳಾಲವನ್ನು ಮರೆಯದೇ ದೇಶದ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಬಹುತೇಕ ಸವಾಲುಗಳಿಗೆ ಉತ್ತರವಾಗಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭ ಸಿಂಧೂರ ತಂದೆ ರಾಜಾ ದಯಾಳನ್, ಅಜ್ಜ ಬಾಬು ಬಂಗೇರ, ಅಜ್ಜಿ ಶಶಿಕಾಂತಿ ಉಳ್ಳಾಲ್ ಉಪಸ್ಥಿತರಿದ್ದರು.
Sindhura from Ullal Mogaveera town has been selected to participate in the 'World Science Scholar' festival scheduled to take place from May 29 to June 2 in New York, America. A total of 52 young scientists from 22 countries will be participating in the festival, with 15-year-old Sindhura representing India.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 03:42 pm
HK News Desk
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
17-05-25 08:52 pm
Mangalore Correspondent
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm