ಬ್ರೇಕಿಂಗ್ ನ್ಯೂಸ್
19-11-20 07:30 pm Mangalore Correspondent ಕರಾವಳಿ
ಉಳ್ಳಾಲ, ನವಂಬರ್ ,19: ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸುವಂತೆ ಒತ್ತಾಯಿಸಿ ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕೋ ಯೋಜನೆ ಹಾಕಿದ್ದೆವು. ಆದರೆ ಅದನ್ನು ಬದಲಾಯಿಸಿ ಮಾಸ್ತಿಕಟ್ಟೆಯಲ್ಲಿ ಪ್ರತಿಭಟನೆ ಅಷ್ಟೇ ನಡೆಸಿದ್ದೇವೆ. ಇದು ನಮ್ಮ ಶರಣಾಗತಿ ಅಲ್ಲ. ಕಾನೂನು ಸುವ್ಯವಸ್ಥೆಗೆ ಕೊಡೋ ಗೌರವ. ಭಟ್ಟರ ಮೇಲೆ ಕೇಸ್ ಹಾಕದಿದ್ದರೆ ನಾವು ಉಳ್ಳಾಲ ಪೊಲೀಸ್ ಠಾಣೆ ಮಾತ್ರ ಅಲ್ಲ. ಮಂಗಳೂರು ಕಮೀಷನರ್ ಕಚೇರಿಗೂ ಮುತ್ತಿಗೆ ಹಾಕೋದು ಖಂಡಿತ ಎಂದು ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಪರಂಗಿಪೇಟೆ ಎಚ್ಚರಿಕೆ ನೀಡಿದ್ದಾರೆ.
ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಪ್ರಭಾಕರ ಭಟ್ ಕಲ್ಲಡ್ಕರ ಮೇಲೆ ಕೇಸು ದಾಖಲಿಸಲು ಒತ್ತಾಯಿಸಿ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಗುರುವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
RSS ಎಂಬ ಸಂಘಟನೆಯನ್ನು ಜಿಲ್ಲೆ, ರಾಜ್ಯ, ರಾಷ್ಟ್ರದಿಂದಲೇ ಮುಕ್ತಗೊಳಿಸಬೇಕು. ದೇಶದಲ್ಲಿ ಸಂಘ ಪರಿವಾರ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಎಸ್ ಡಿಪಿಐ ಹೋರಾಟ ಮಾಡುತ್ತದೆ. ದೇಶವನ್ನು ಕಳೆದ 70 ವರುಷಗಳಿಂದ ಆಳುತ್ತಿದ್ದ ಡೋಂಗಿ ಜಾತ್ಯಾತೀತವಾದಿಗಳಿಂದಲೇ ಪ್ರಭಾಕರ ಭಟ್ಟರಂತಹ ಅಂಜುಬುರುಕರು ಇವತ್ತು ಉಳ್ಳಾಲವನ್ನು ಪಾಕಿಸ್ಥಾನಕ್ಕೆ ಹೋಲಿಸುವಂತಾಗಿದೆ. ಪೊಲೀಸರು ಭಟ್ಟರ ಮೇಲೆ ಕೇಸ್ ಹಾಕದಿದ್ದರೆ ದೇಶದ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿಯಾದರೂ ಅವರ ವಿರುದ್ಧ FIR ಮಾಡದೇ ಬಿಡೆವು ಎಂದು ಎಚ್ಚರಿಸಿದರು.
SDPI ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ ಮಾತನಾಡಿ ಪೊಲೀಸರು ನಮ್ಮ ಕಾರ್ಯಕರ್ತರ ವಿರುದ್ಧ ಎಷ್ಟೊಂದು ಕೇಸು ಹಾಕಿದರು. ಉಳ್ಳಾಲದ ಝಾಕಿರ್ ಹುಸೇನ್, ಅಲ್ತಾಫ್, ಇಮ್ತಿಯಾಝ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಿದರು. ಹಾಗಾದರೆ ಕಲ್ಲಡ್ಕ ಭಟ್ಟರಿಗೊಂದು ಕಾನೂನು ನಮಗೊಂದು ಕಾನೂನು ಇದೆಯೇ.. ಪೊಲೀಸರು ಪಕ್ಷಪಾತಿಗಳಾಗದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
SDPI ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಕಿನ್ಯಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷರಾದ ಅಕ್ರಂ ಹಸನ್, ರಾಜ್ಯ ಪ್ರ.ಕಾ.ಅಬ್ದುಲ್ ಜಲೀಲ್ ಕೃಷ್ಣಾಪುರ, ಸ್ಥಳೀಯ ಮುಖಂಡ ಝಾಕಿರ್ ಹುಸೇನ್ ಮೊದಲಾದವರು ಇದ್ದರು.
SDPI in Ullal protested demanding a case to be filed against Dr Kalladka Bhat for calling Ullal as Pakistan.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm