ಬ್ರೇಕಿಂಗ್ ನ್ಯೂಸ್
27-11-23 10:44 pm Mangalore Correspondent ಕರಾವಳಿ
ಮಂಗಳೂರು, ನ.27: ಕರಾವಳಿಯಲ್ಲಿ ಕಂಬಳ ಅಂದರೆ ಹೆಚ್ಚಾಗಿ ಮೇಲ್ವರ್ಗದವರು ಮಾತ್ರ ಕೋಣಗಳನ್ನು ಕಟ್ಟಿ ಸ್ಪರ್ಧೆಗಿಳಿಯುತ್ತಾರೆ ಎನ್ನುವ ನಂಬಿಕೆಯಿದೆ. ಆದರೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಂಬಳ ಈ ನಂಬಿಕೆಯನ್ನು ಹುಸಿಗೊಳಿಸಿದೆ. ಇದೇ ಮೊದಲ ಬಾರಿಗೆ ಪರಿಶಿಷ್ಟ ವರ್ಗದ ಮಲೆಕುಡಿಯ ಜನಾಂಗದ ಕೋಣಗಳು ಮೇಲ್ವರ್ಗದ ಕೋಣಗಳನ್ನು ಬದಿಗೊತ್ತಿ ನೇಗಿಲು ಹಿರಿಯ ವಿಭಾಗದಲ್ಲಿ ಬಹುಮಾನ ಗಳಿಸಿದೆ.
ಬೆಳ್ತಂಗಡಿ ತಾಲೂಕಿನ ಬಂಗಾಡಿಯ ನಾರಾಯಣ ಮಲೆಕುಡಿಯರ ಕೋಣಗಳ ಜೋಡಿಗೆ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಸಿಕ್ಕಿದ್ದು, ಒಂದು ಲಕ್ಷ ನಗದು ಮತ್ತು ಎರಡು ಪವನ್ ಚಿನ್ನದ ಸರ ಬಹುಮಾನವಾಗಿ ಲಭಿಸಿದೆ. ಈ ಬಗ್ಗೆ ನಾರಾಯಣ ಅವರಲ್ಲಿ ಮಾಹಿತಿ ಕೇಳಿದಾಗ, ನಾವು 35 ವರ್ಷಗಳಿಂದಲೂ ಕಂಬಳಕ್ಕೆ ಹೋಗುತ್ತೇವೆ. ನಾವು ಐದು ಮಂದಿ ಸೋದರರಿದ್ದು, ಒಂದೊಂದು ಕಡೆ ಒಬ್ಬೊಬ್ಬರ ಹೆಸರು ಕೊಡುತ್ತೇವೆ ಎಂದಿದ್ದಾರೆ. ಕೃಷಿಯ ಉದ್ದೇಶಕ್ಕೆ ಕೋಣಗಳನ್ನು ಸಾಕುವುದು, ಕೃಷಿ ಮುಗಿದ ಬಳಿಕ ಕಂಬಳಕ್ಕೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಕೋಣಗಳನ್ನು ಹೆಚ್ಚಾಗಿ ಧನಂಜಯ ಸರಪಾಡಿ ಅವರು ಓಡಿಸುತ್ತಾರೆ. ಬೆಂಗಳೂರಿನ ಕಂಬಳದಲ್ಲಿಯೂ ಇವರೇ ಕೋಣ ಓಡಿಸಿದ್ದರು. ಈ ಹಿಂದೆಯೂ ಕ್ವಾರ್ಟರ್ ಫೈನಲ್, ಸೆಮಿ ಹಂತಕ್ಕೆ ಕೋಣ ಬಂದದ್ದಿದೆ. ಮೊನ್ನೆ ಕಕ್ಕೆಪದವು ಕಂಬಳದಲ್ಲಿ ಕ್ವಾರ್ಟರ್ ಬಂದಿದ್ದೆವು. ಇದೇ ಮೊದಲ ಬಾರಿಗೆ ಎದುರಾಳಿ ಕೋಣಗಳನ್ನು ಮಣಿಸಿ ಪ್ರಶಸ್ತಿ ಗೆದ್ದಿರುವುದು. ಸೆಮಿಯಲ್ಲಿ ನಮಗೆ ಬೋಳದ ಗುತ್ತಿನವರ ಕೋಣವೇ ಸೆಣಸಾಟಕ್ಕೆ ಸಿಗುತ್ತದೆ. ಕಂಬಳದಲ್ಲಿ ಕೋಣಗಳನ್ನು ಬದಲಿಸಿ ಕಟ್ಟುವುದು ಸಾಮಾನ್ಯ. ನಾವು ಈ ಬಾರಿ ಬಿಳಿಯೂರಿನ ಕೋಣ ಒಂದನ್ನು ಜತೆಗೆ ಕಟ್ಟಿ ಓಡಿಸಿದ್ದೆವು ಎಂದು ನಾರಾಯಣ ಹೇಳಿದ್ದಾರೆ.
ಇವರಿಗೆ ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಸಾಥ್ ನೀಡಿದ್ದು, ಬೆಂಗಳೂರಿನ ಕಂಬಳಕ್ಕೆ ಒಯ್ಯಲು ಒತ್ತಾಸೆ ತೋರಿದ್ದಾರೆ. ಅಲ್ಲದೆ, ನಾರಾಯಣ ಮಲೆಕುಡಿಯ ಎಂದೇ ಹೆಸರು ನೀಡುವಂತೆ ಸೂಚಿಸಿದ್ದರು. ಬೇರೆ ಕಂಬಳಗಳಲ್ಲಿ ಮಾಲಕರ ಹೆಸರಿನ ಜೊತೆಗೆ ಮಲೆಕುಡಿಯ ಜಾತಿ ಸೂಚಕ ಪದವನ್ನು ನೀಡುತ್ತಿರಲಿಲ್ಲ. ಬೆಂಗಳೂರಿನ ಕಂಬಳದಲ್ಲಿ ದಿನೇಶ್ ಹೆಗ್ಡೆ ಉಳೆಪಾಡಿ ಅವರೇ ಜೊತೆಗಿದ್ದು ಹೆಸರಿನ ಜೊತೆಗೆ ಮಲೆಕುಡಿಯ ಸೇರಿಸಿ ತಂಡಕ್ಕೆ ಬೆಂಬಲ ನೀಡಿದ್ದಾರೆ. 15 ದಿನಗಳಿಂದ ಅವರ ಜೊತೆಗಿದ್ದು ಮಾನಸಿಕವಾಗಿ ಧೈರ್ಯ ತುಂಬಿದ್ದೇನೆ. ನಮ್ಮ ಅದೃಷ್ಟವೋ ಏನೋ, ಈ ಸಲವೇ ಬಹುಮಾನ ಗೆದ್ದಿದೆ. ಬಿಳಿಯೂರಿನ ಫೇವರಿಟ್ ಅಲ್ಲದ ಕೋಣವನ್ನು ಕಟ್ಟಿಕೊಂಡು ಪ್ರಶಸ್ತಿ ಗೆದ್ದಿರುವುದು ಇತರ ಎಲ್ಲರನ್ನೂ ಹುಬ್ಬೇರಿಸಿದೆ. ಕಂಬಳದಲ್ಲಿ ಮೇಲ್ವರ್ಗದವರೇ ಹೆಚ್ಚಿರುವಾಗ ಮಲೆಕುಡಿಯ ಜನಾಂಗದ ಕೋಣ ಪ್ರಶಸ್ತಿ ಗೆದ್ದಿರುವುದು ಒಂದು ರೀತಿಯಲ್ಲಿ ಬದಲಾವಣೆ ತೋರಿಸಿದೆ ಎಂದು ದಿನೇಶ್ ಹೆಗ್ಡೆ ಹೇಳಿದ್ದಾರೆ.
ಭಾರೀ ಹಿಟ್ ಆಗಿದ್ದ ಕಾಂತಾರ ಚಿತ್ರದಲ್ಲಿ ಹಿಂದುಳಿದ ವರ್ಗದ ಶಿವಣ್ಣನ ಕೋಣಗಳು ಕಂಬಳದಲ್ಲಿ ಪ್ರಶಸ್ತಿ ಗೆಲ್ಲುವ ಚಿತ್ರಣ ಇತ್ತು. ಅದೇ ರೀತಿ ಬೆಂಗಳೂರಿನ ಕಂಬಳದಲ್ಲಿ ಮೇಲ್ವರ್ಗದ ಕೋಣಗಳನ್ನು ಬದಿಗೊತ್ತಿ ಕೆಳ ವರ್ಗದ ಮಾಲೀಕನ ಕೋಣಗಳು ಪ್ರಶಸ್ತಿ ಗೆದ್ದಿರುವುದು ಹೊಸ ಇತಿಹಾಸ ಎನ್ನುವಂತಾಗಿದೆ.
Malekudiya Buffalos bag winners tittle at historical Kambala in Bangalore. According to the organisers, the races concluded at around 2 am in the morning. First prize winners in each of the events won Rs one lakh and 16 grams of gold, while those coming second won Rs 50,000 and eight grams of gold.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 12:54 pm
HK News Desk
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm