ಬ್ರೇಕಿಂಗ್ ನ್ಯೂಸ್
24-11-23 01:55 pm Mangalore Correspondent ಕರಾವಳಿ
ಮಂಗಳೂರು, ನ.24: ಅಜ್ಜನ ಮರಣ ಪತ್ರ ಮಾಡಿಕೊಡಲು ವ್ಯಕ್ತಿಯೊಬ್ಬರಲ್ಲಿ ಲಂಚ ಕೇಳಿದ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಚೇಳ್ಯಾರು ಗ್ರಾಮ ಲೆಕ್ಕಿಗ ವಿಜಿತ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. 13,000 ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ವ್ಯಕ್ತಿಯೊಬ್ಬರು ತನ್ನ ತಾಯಿ ಹೆಸರಿನಲ್ಲಿದ್ದ 42 ಸೆಂಟ್ಸ್ ಜಾಗದಲ್ಲಿ ಐದು ಸೆಂಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಅಜ್ಜನ ಮರಣ ಪತ್ರ ಮತ್ತು ಸಂತತಿ ನಕ್ಷೆ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗ ವಿಜಿತ್ ಬಳಿ ಅರ್ಜಿ ಹಾಕಿದ್ದರು.
ನ.20ರಂದು ಕರೆ ಮಾಡಿದ್ದ ಗ್ರಾಮ ಲೆಕ್ಕಿಗ, ನಿಮ್ಮ ಅಜ್ಜನ ಮರಣ ಪತ್ರ ರೆಡಿಯಾಗಿದೆ, 15 ಸಾವಿರ ಹಿಡಿದುಕೊಂಡು ಬನ್ನಿ ಎಂದು ಹೇಳಿದ್ದರು. ಆದರೆ ತನ್ನಲ್ಲಿ ಅಷ್ಟು ಹಣ ಇಲ್ಲವೆಂದು ಹೇಳಿದಾಗ, ನಾಳೆಯಾದರೂ ತಗೊಂಡು ಬನ್ನಿ ಎಂದಿದ್ದರು. ಕೊನೆಗೆ 13 ಸಾವಿರ ಹಣ ಕೊಡಿ, ಸುರತ್ಕಲ್ ನಾಡ ಕಚೇರಿಗೆ ತಂದುಕೊಡಿ ಎಂದು ಹೇಳಿದ್ದರು. ಈ ಬಗ್ಗೆ ಫಿರ್ಯಾದಿದಾರ, ಲೋಕಾಯುಕ್ತಕ್ಕೆ ದೂರು ನೀಡಿದ್ದು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಗ್ರಾಮ ಲೆಕ್ಕಿಗ ಹಣ ಪಡೆಯುತ್ತಿದ್ದಾಗಲೇ ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಸೈಮನ್ ಹಾಗು ಡಿವೈಎಸ್ಪಿ ಚೆಲುವರಾಜ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.
Mangalore Chelairu Surathkal gram Panchyath accountant arrested by Lokayukta for bribe over death certificate.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 12:54 pm
HK News Desk
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm