ಬ್ರೇಕಿಂಗ್ ನ್ಯೂಸ್
21-11-23 11:05 pm Mangalore Correspondent ಕರಾವಳಿ
ಮಂಗಳೂರು, ನ.21: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಇದೇ ನವೆಂಬರ್ 19ಕ್ಕೆ ಒಂದು ವರ್ಷ ಪೂರ್ತಿಗೊಂಡಿದೆ. ಇದೇ ಸಂದರ್ಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತಮ್ಮ ತನಿಖೆಯನ್ನು ಶಿವಮೊಗ್ಗ, ಮಂಗಳೂರು, ಭಟ್ಕಳ ಕೇಂದ್ರಿತವಾಗಿ ವಿಸ್ತರಣೆ ಮಾಡಿದ್ದಾರೆ.
ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸುವುದಕ್ಕಾಗಿ ಕುಕ್ಕರ್ ನಲ್ಲಿ ಬಾಂಬ್ ಅಳವಡಿಸಿ ತರುತ್ತಿದ್ದ ಶಾರೀಕ್, ಆಟೋದಲ್ಲಿ ಸಾಗುತ್ತಿದ್ದಾಗಲೇ ಸ್ಫೋಟಗೊಂಡು ಸಿಕ್ಕಿಬಿದ್ದಿದ್ದ. ಮೂರು ನಿಮಿಷಗಳ ಟೈಮರ್ ಇಟ್ಟು ಬಾಂಬ್ ಸ್ಫೋಟಿಸುವುದು ಆತನಿಗೆ ಒಪ್ಪಿಸಲಾಗಿದ್ದ ಜವಾಬ್ದಾರಿಯಾಗಿತ್ತು. ಆದರೆ ಇದನ್ನು ಒಯ್ಯುತ್ತಿರುವಾಗಲೇ ಆಗಿದ್ದ ಎಡವಟ್ಟಿನಿಂದಾಗಿ ಅರ್ಧಕ್ಕೆ ಸ್ಫೋಟ ಆಗಿತ್ತು. ಪೂರ್ಣ ಬಲದಲ್ಲಿ ಅದು ಸ್ಫೋಟಗೊಂಡಿರಲಿಲ್ಲ.
ಈತನಿಗೆ ಶಿವಮೊಗ್ಗ ಮೂಲದ ಉಗ್ರವಾದಿ ಸಂಘಟನೆಗಳ ಹ್ಯಾಂಡ್ಲರ್ಗಳಿಂದ ನೇರ ನಿರ್ದೇಶನ ಬರುತ್ತಿತ್ತು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದರು. ತಿಂಗಳ ಹಿಂದೆಯಷ್ಟೇ ಅವರಲ್ಲಿ ಒಬ್ಬನಾದ ಶಿವಮೊಗ್ಗ ಮೂಲದ ಅರಾಫತ್ ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆತನ ತನಿಖೆಯ ವೇಳೆ ಮಹತ್ವದ ಸಂಗತಿಗಳು ಬಯಲಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆಯ ಜಾಡನ್ನು ವಿಸ್ತರಣೆ ಮಾಡಿದ್ದಾರೆ.
ಮಂಗಳೂರಿನ ಬಗ್ಗೆ ಪೂರ್ತಿ ಮಾಹಿತಿ ಹೊಂಡಿದ್ದ ಮೊಹಮ್ಮದ್ ಶಾರೀಕ್ ಗೆ ಜನನಿಬಿಡ ಪ್ರದೇಶ ಅಥವಾ ದೇವಾಲಯಗಳಲ್ಲಿ ಬಾಂಬ್ ಇರಿಸುವಂತೆ ಸೂಚನೆ ಬಂದಿತ್ತು. ಮೊಬೈಲ್ ಬಳಕೆ ಮಾಡದೆ, ಯಾವ ರೀತಿ ಸಿಕ್ಕಿ ಬೀಳದಂತೆ ವ್ಯವಹರಿಸಬೇಕು ಇತ್ಯಾದಿ ಅಂಶಗಳನ್ನು ಆತನಿಗೆ ತರಬೇತಿ ವೇಳೆ ತಿಳಿಸಿದ್ದಾಗಿ ಶಾರೀಕ್ ತನಿಖೆಯಲ್ಲಿ ಒಪ್ಪಿಕೊಂಡಿದ್ದ.
ಮಂಗಳೂರಿನಲ್ಲಿ ಬಾಂಬ್ ಸ್ಫೋಟದ ಬಳಿಕ ತಲೆಮರೆಸಿಕೊಂಡು ಅದರ ಬೆನ್ನಲ್ಲೇ ಸಿರಿಯಾಕ್ಕೆ ಪ್ರಯಾಣಿಸಿ ಐಸಿಸ್ ಉಗ್ರವಾದಿ ಸಂಘಟನೆ ಸೇರಲು ತಯಾರಿ ನಡೆಸಿದ್ದ. ಬಾಂಬ್ ಸ್ಫೋಟದ ಬೆನ್ನಲ್ಲೇ ಸಿರಿಯಾದತ್ತ ಪಯಣ ಬೆಳೆಸಲು ತಯಾರಿಯನ್ನೂ ಮಾಡಿಕೊಂಡಿದ್ದ ಎನ್ನುವ ವಿಚಾರವನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. 2020 ಆಗಸ್ಟ್ ತಿಂಗಳಲ್ಲಿ ಮಂಗಳೂರಿನ ಗೋಡೆಯಲ್ಲಿ ಉಗ್ರ ಸಂಘಟನೆ ಲಷ್ಕರ್ ಪರ ಬರಹ ಬರೆದು ಸಿಕ್ಕಿಬಿದ್ದಿದ್ದ ಶಾರೀಕ್ ಎಂಟು ತಿಂಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಅಲ್ಲಿಂದ ತಲೆಮರೆಸಿಕೊಂಡಿದ್ದ ಶಾರೀಕ್ ಶಿವಮೊಗ್ಗದಲ್ಲಿದ್ದುಕೊಂಡು ಬಾಂಬ್ ಟ್ರಯಲ್ ಮಾಡಿದ್ದ. ಅಲ್ಲಿರುವಾಗಲೇ ಈತನಿಗೆ ಅರಾಫತ್ ಹಾಗೂ ಅಬ್ದುಲ್ ಮತೀನ್ ಬ್ರೇನ್ ವಾಷ್ ಮಾಡಿದ್ದರು ಎನ್ನುವ ಮಾಹಿತಿ ತನಿಖೆಯಲ್ಲಿ ಸಿಕ್ಕಿದೆ. ಈ ಪೈಕಿ ಅರಾಫತ್ ಈಗಾಗಲೇ ಎನ್ಐಎ ಬಲೆಗೆ ಬಿದ್ದಿದ್ದರೆ ಅಬ್ದುಲ್ ಮತೀನ್ ಬಾಂಗ್ಲಾದೇಶದಲ್ಲಿದ್ದಾನೆ ಎನ್ನಲಾಗುತ್ತಿದೆ.
The one-year anniversary of the cooker bomb blast case has been completed on November 19. Meanwhile, the National Investigation Agency (NIA), which is investigating the case, has expanded its probe to Shivamogga, Mangaluru and Bhatkal.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm