ಬ್ರೇಕಿಂಗ್ ನ್ಯೂಸ್
14-11-20 05:46 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 13: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣವನ್ನು ವಿವಿಯ ಅಧಿಕಾರಿಗಳು ಮುಚ್ಚಿ ಹಾಕಲು ಪ್ರಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಐದು ವರ್ಷಗಳ ಹಿಂದೆಯೇ ಈ ಬಗ್ಗೆ ದೂರು ನೀಡಿದ್ದರೂ, ವಿವಿಯ ಆಡಳಿತ ಮತ್ತು ಸಿಂಡಿಕೇಟ್ ಸದಸ್ಯರು ರಾಜಿ ಮೂಲಕ ಮುಗಿಸಲು ಪ್ರಯತ್ನಿಸಿರುವ ಆರೋಪ ಕೇಳಿಬಂದಿದೆ.
ಪ್ರಾಧ್ಯಾಪಕಿ ಆಗಿರುವ ಒಬ್ಬರು ಮಹಿಳೆಗೆ ಹಿರಿಯ ಸಹೋದ್ಯೋಗಿ ಆಗಿರುವ ಪ್ರೊ.ಮೋಹನ್ ಸಿಂಘೆ ಎಂಬವರು ಕಿರುಕುಳ ನೀಡಿರುವ ಬಗ್ಗೆ 2016 ರಲ್ಲಿ ಮೊದಲ ಬಾರಿಗೆ ದೂರು ಸಲ್ಲಿಸಲಾಗಿತ್ತು. ಆಗ ಕುಲಪತಿಯಾಗಿದ್ದ ಪ್ರೊ.ಭೈರಪ್ಪ ಮತ್ತು ರಿಜಿಸ್ಟ್ರಾರ್ ಆಗಿದ್ದ ನಾಗೇಂದ್ರ ಪ್ರಸಾದ್ ಗೆ ದೂರು ಸಲ್ಲಿಕೆಯಾಗಿತ್ತು. ದೂರಿನ ಬಗ್ಗೆ ಕುಲಪತಿ ಮತ್ತು ರಿಜಿಸ್ಟ್ರಾರ್, ಆರೋಪಿತ ವ್ಯಕ್ತಿ ಮತ್ತು ದೂರುದಾರೆ ಮಹಿಳೆ ಇಬ್ಬರನ್ನೂ ಕರೆಸಿ ಸಮಾಲೋಚನೆ ನಡೆಸಿದ್ದರು. ರಾಜಿ ಪಂಚಾಯ್ತಿ ಮೂಲಕ ಪ್ರಕರಣ ಇತ್ಯರ್ಥಗೊಳಿಸಲು ಪ್ರಯತ್ನ ಪಟ್ಟಿದ್ದರು. ಆದರೆ, ರಾಜಿ ಪಂಚಾಯ್ತಿಗೆ ಮಹಿಳೆ ಒಪ್ಪದೆ ಇದ್ದುದರಿಂದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾಗಿ ಆಂತರಿಕ ತನಿಖಾ ಸಮಿತಿಗೆ ಹೋಗಿತ್ತು. 2017ರಲ್ಲಿ ಸ್ಪರ್ಶ್ ಕಮಿಟಿ, ಮಹಿಳೆಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ಆಗಿರುವ ಬಗ್ಗೆ ವರದಿ ನೀಡಿತ್ತು. ಆದರೆ, ವರದಿಯನ್ನು ಮುಚ್ಚಿ ಹಾಕಿದ್ದ ಆಗಿನ ಆಡಳಿತ ಸಂತ್ರಸ್ತೆಯ ದೂರನ್ನು ಪರಿಗಣಿಸದೆ ಅನ್ಯಾಯ ಎಸಗಿತ್ತು.
ಈ ಬಗ್ಗೆ ಸಂತ್ರಸ್ತ ಮಹಿಳೆ ಮತ್ತೆ ಮತ್ತೆ ವಿವಿ ಆಡಳಿತಕ್ಕೆ ನ್ಯಾಯ ಒದಗಿಸುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೂಲದ ಪ್ರಕಾರ, 10ಕ್ಕೂ ಹೆಚ್ಚು ಪತ್ರಗಳನ್ನು ವಿವಿಯ ರಿಜಿಸ್ಟ್ರಾರ್ ಮತ್ತು ಕುಲಪತಿಗೆ ಬರೆದಿದ್ದರಂತೆ. ಆದರೆ, ವಿವಿಯಿಂದ ಆರೋಪಿತ ವ್ಯಕ್ತಿ ಮೇಲೆ ಯಾವುದೇ ಆಕ್ಷನ್ ಆಗಿಲ್ಲ. ಇತ್ತೀಚೆಗೆ, ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಪ್ರೊ.ಅರಬಿ ಎಂಬವರು ಕಿರುಕುಳ ನೀಡಿದ್ದ ವಿಚಾರವನ್ನೂ ವಿವಿಯ ಆಡಳಿತ ಮುಚ್ಚಿಟ್ಟು ಬಳಿಕ ಹೊರಗೆ ಬಂದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಹಿಂದಿನ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಈ ವಿಚಾರದಿಂದ ಎಚ್ಚೆತ್ತ ಅನ್ಯಾಯಕ್ಕೊಳಗಾದ ಪ್ರಾಧ್ಯಾಪಕಿ, ತನ್ನ ಹಳೆಯ ಕಿರುಕುಳ ಪ್ರಕರಣದ ಬಗ್ಗೆಯೂ ಮತ್ತೆ ಪತ್ರ ಬರೆದಿದ್ದಾರೆ. 15 ದಿನಗಳ ಹಿಂದೆ ವಿವಿಯ ಈಗಿನ ರಿಜಿಸ್ಟ್ರಾರ್ ಗೆ ಪತ್ರ ಬರೆದು ಗಮನ ಸೆಳೆದಿದ್ದರು. ರಿಜಿಸ್ಟ್ರಾರ್ ಮೊನ್ನೆ ನ.12ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಅದರಂತೆ, ಮತ್ತೆ ತ್ರಿಸದಸ್ಯರ ಸಮಿತಿ ಮಾಡಿ ವರದಿ ನೀಡುವಂತೆ ನಿರ್ಣಯ ಮಾಡಲಾಗಿದೆ.
ಯಾಕೆ ಮುಚ್ಚಿಡುತ್ತಿದೆ ವಿವಿಯ ಆಡಳಿತ ?
ಮಂಗಳೂರು ವಿವಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಹೊರಗೆ ಬರುತ್ತಿರುವುದು ಇದು ಮೊದಲೇನಲ್ಲ. ಆದರೆ, ಪ್ರತಿ ಬಾರಿ ಪ್ರಕರಣ ಹೊರಬಂದಾಗಲೂ ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ಆಗುತ್ತದೆಯೇ ಹೊರತು ಕಠಿಣ ಕ್ರಮ ಜಾರಿಯಾಗುವುದು ಅಪರೂಪ. ಸಮಾಜದಲ್ಲಿ ಯಾವುದೇ ವ್ಯಕ್ತಿ ಅಥವಾ ಮಹಿಳೆ ತನಗೆ ಕಿರುಕುಳ, ಅನ್ಯಾಯ ಆದಲ್ಲಿ ಪೊಲೀಸ್ ದೂರು ಕೊಡುತ್ತಾನೆ. ವಿವಿ ವ್ಯಾಪ್ತಿಯಲ್ಲಿ ಮಾತ್ರ ಸಾಮಾನ್ಯವಾಗಿ ಪೊಲೀಸ್ ದೂರು ಕೊಡಲು ಮುಂದಾಗಲ್ಲ. ಬದಲಿಗೆ, ಸಂತ್ರಸ್ತರು ವಿವಿಯ ರಿಜಿಸ್ಟ್ರಾರ್ ಮತ್ತು ಕುಲಪತಿಗೆ ದೂರು ಕೊಡುತ್ತಾರೆ. ಕುಲಪತಿ ಅಂದ್ರೆ ಭಯ, ಭಕ್ತಿ ಇರುವುದು ಮತ್ತು ವಿವಿ ಕ್ಯಾಂಪಸ್ ಪಾಲಿಗೆ ಸುಪ್ರೀಂ ಪವರ್ ಅನ್ನುವ ಕಾರಣಕ್ಕಾಗಿ, ಈ ನೀತಿ ಅನುಸರಿಸುತ್ತಾರೆ. ಪೊಲೀಸರಿಗೆ ದೂರು ಕೊಟ್ಟರೆ, ತನಿಖೆ ನಡೆಸುವಂತಿಲ್ಲ ಎಂದೇನಿಲ್ಲ. ವಿವಿಯ ಒಳಗೆ ತನಿಖೆ ಮಾಡಲು ಕುಲಪತಿಯ ಪರ್ಮಿಷನ್ ಪಡೆಯಬೇಕೆಷ್ಟೆ. ಕುಲಪತಿ ಅನ್ನುವ ಗೌರವದಿಂದ ವಿದ್ಯಾರ್ಥಿಗಳಾಗಲೀ, ಕಿರುಕುಳಕ್ಕೆ ಒಳಗಾದವರು ಯಾರೇ ಆಗಲಿ ಪೊಲೀಸ್ ದೂರು ಕೊಡಲು ಹೋಗಲ್ಲ ಅಷ್ಟೆ. ಆದರೆ ಈ ನೆಪದಲ್ಲಿ, ಸಂತ್ರಸ್ತರಿಗೆ ಅನ್ಯಾಯ ಆಗಬಾರದು ಅಷ್ಟೇ..
ವಿಚಾರಣೆ ನೆಪದಲ್ಲಿ ಪೀಡಿಸುವಂತಿಲ್ಲ !
ಒಂದೇ ಪ್ರಕರಣದಲ್ಲಿ ಮತ್ತೆ ಮತ್ತೆ ಆಂತರಿಕ ತನಿಖೆ ಮಾಡಿಸುವುದು ಸಂತ್ರಸ್ತೆಯನ್ನು ಪೀಡಿಸಿದಂತೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪೊಲೀಸರು ಕೂಡ, ಸಂತ್ರಸ್ತೆಯನ್ನು ವಿಚಾರಣೆ ನೆಪದಲ್ಲಿ ಪೀಡಿಸುವಂತಿಲ್ಲ, ಏನಿದ್ದರೂ ಆರೋಪಿಯನ್ನು ವಿಚಾರಿಸಿ ಪೂರಕ ಸಾಕ್ಷಿ ಪಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ. ಆದರೆ, ವಿವಿಯ ವ್ಯಾಪ್ತಿಯಲ್ಲಿ ಮಾತ್ರ ಈ ನಿಮಯ ಅನ್ವಯ ಆಗಲ್ಲ ಎನ್ನುವಂತಿದೆ ಅಲ್ಲಿನ ಕಾರ್ಯ ವೈಖರಿ. ಕಿರುಕುಳ ದೂರು ಬಂದು ಐದು ವರ್ಷಗಳಾದ್ರೂ ಆರೋಪಿ ವಿರುದ್ಧ ಕ್ರಮ ಆಗಿಲ್ಲ. ಹಿಂದೊಮ್ಮೆ ಸ್ಪರ್ಶ್ ಕಮಿಟಿ ವರದಿ ನೀಡಿದ್ದರೂ, ಅದನ್ನು ಪರಿಗಣಿಸದೆ ಮತ್ತೆ ತನಿಖಾ ಸಮಿತಿಗೆ ಒಪ್ಪಿಸುವುದು ಏನನ್ನು ಸೂಚಿಸುತ್ತದೆ ? ಯಾವುದೇ ವ್ಯಕ್ತಿಯ ವಿರುದ್ಧ ಯುವತಿ ಲೈಂಗಿಕ ಕಿರುಕುಳ ದೂರು ನೀಡಿದಲ್ಲಿ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸುತ್ತಾರೆ. ಈ ಕಾನೂನಿನಿಂದ ಯಾರು ಕೂಡ ಅತೀತರಲ್ಲ ಎನ್ನುವ ಕರ್ತವ್ಯ ಪ್ರಜ್ಞೆ ಮಂಗಳೂರು ವಿವಿಯ ಆಡಳಿತಕ್ಕಿರಬೇಕು. ವಿವಿಯ ಗೌರವ, ಪ್ರತಿಷ್ಠೆಯ ಹೆಸರಲ್ಲಿ ಲೈಂಗಿಕ ಕಿರುಕುಳ ಪ್ರಕರಣವನ್ನು ಮುಚ್ಚಿ ಹಾಕುವುದು, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪಿಯನ್ನು ಬಚಾವ್ ಮಾಡುವುದು ಆ ಸಂಸ್ಥೆಯ ಗೌರವವನ್ನು ಮಸಿ ನುಂಗುತ್ತೆ ವಿನಾ ಉಳಿಸಿಕೊಳ್ಳಲ್ಲ.
Another Sexual harassment case comes to light in Mangalore University of Professor Mohan Singey. In 2018, a student of Mangalore University had filed a complaint with the varsity’s internal complaints committee that professor Arabi U had sexually harassed her.
21-08-25 12:58 pm
Bangalore Correspondent
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 11:57 am
Mangalore Correspondent
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm