ಬ್ರೇಕಿಂಗ್ ನ್ಯೂಸ್
14-11-20 03:43 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 14: ಮುಡಿಪು ಆಸುಪಾಸಿನಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಬಂಟ್ವಾಳ ಶಾಸಕರು ಭಾಗಿಯಾಗಿರುವುದನ್ನು ಮಾಜಿ ಸಚಿವ ರಮಾನಾಥ ರೈ ದಾಖಲೆ ಸಹಿತ ಬಯಲಿಗೆಳೆದಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿರುವ ದಾಖಲೆ ಪ್ರತಿಯನ್ನು ಮುಂದಿಟ್ಟು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಹರಿಹಾಯ್ದಿದ್ದಾರೆ. ಈ ಹಿಂದೆ, ಶಾಸಕರೊಬ್ಬರ ಸಂಬಂಧಿಗಳು ಸೇರಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದಿದ್ದೆ. ಯಾವ ಶಾಸಕರು ಎಂದೇನು ಹೇಳಿರಲಿಲ್ಲ. ಆದರೆ, ಬಂಟ್ವಾಳ ಶಾಸಕರು ಸುದ್ದಿಗೋಷ್ಠಿ ನಡೆಸಿ ತನ್ನ ಮೇಲಿನ ಆರೋಪ ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದರು. ಇದೀಗ ಸವಾಲು ಸ್ವೀಕರಿಸಿ, ಆರೋಪಕ್ಕೆ ಪೂರಕ ದಾಖಲೆ ಮುಂದಿಡುತ್ತಿದ್ದೇನೆ ಎಂದರು.
ತೆಂಕ ಎಡಪದವಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಪತ್ನಿ ಉಷಾ ನಾಯ್ಕ್ ಹೆಸರಲ್ಲಿ ಪರ್ಮಿಟ್ ಪಡೆಯಲಾಗಿದ್ದು, ಅದೇ ಹೆಸರಲ್ಲಿ ಮುಡಿಪು, ಕೈರಂಗಳ, ಕುರ್ನಾಡು ಭಾಗದಿಂದ ತಮಿಳುನಾಡಿಗೆ ಮುರಮಣ್ಣು ಸಾಗಿಸಲಾಗಿದೆ. ಮುಡಿಪು ಭಾಗದಲ್ಲಿ ಕೇವಲ ಭೂಮಿ ಸಮತಟ್ಟು ಮಾಡಲಷ್ಟೇ ಅನುಮತಿ ಪಡೆಯಲಾಗಿದೆ. ಆದರೆ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಚೆಟ್ಟಿನಾಡು, ದಾಲ್ಮಿಯಾ, ರೈನಾ, ಅಲ್ಟ್ರಾ ಟೆಕ್ , ಪೆನ್ನಾ ಮತ್ತು ಜಿಎಸ್ ಡಬ್ಲ್ಯು ಸಿಮೆಂಟ್ ತಯಾರಿಕಾ ಕಂಪನಿಗಳಿಗೆ ಮುರ ಮಣ್ಣು ಸಾಗಿಸಿರುವುದಕ್ಕೆ ದಾಖಲೆ ಲಭ್ಯವಾಗಿದೆ. ಉಷಾ ಆರ್. ನಾಯ್ಕ್ ಹೆಸರಲ್ಲಿ 2019ರ ಮೇ 31ರಿಂದ ಮಾರ್ಚ್ ತಿಂಗಳ ವರೆಗೆ 20 ಸಾವಿರ ಟನ್ ಸಾಗಣೆಯಾಗಿರುವ ಬಗ್ಗೆ ದಾಖಲೆ ಸಿಕ್ಕಿದೆ. ಇದಲ್ಲದೆ, ಕೈರಂಗಳ ಪಂಚಾಯತ್ ಪಿಡಿಓ ಹೆಸರಲ್ಲೂ ಪರ್ಮಿಟ್ ಪಡೆದು ಮಣ್ಣು ಸಾಗಿಸಿರುವ ಬಗ್ಗೆ ದಾಖಲೆ ಸಿಕ್ಕಿದ್ದು, ಕಳೆದ ಆಗಸ್ಟ್ ಮತ್ತು ಸೆಪ್ಟಂಬರ್ ಈ ಎರಡು ತಿಂಗಳಲ್ಲೇ 14 ಸಾವಿರ ಟನ್ ಸಾಗಣೆ ಆಗಿದೆ. ಪಿಡಿಓ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕಾಗಿದೆ ಎಂದು ರಮಾನಾಥ ರೈ ಹೇಳಿದರು.
ಶಾಸಕರ ಪತ್ನಿ ಮತ್ತು ಕೈರಂಗಳ ಪಿಡಿಓ ಹೆಸರಲ್ಲಿ ದಾಖಲೆ ಲಭ್ಯ ಆಗಿರುವುದನ್ನು ಹೇಳುತ್ತಿದ್ದೇನೆ. ಈ ದಾಖಲೆ ಹೊರತುಪಡಿಸಿ ಲಕ್ಷಾಂತರ ಟನ್ ರೆಡ್ ಬಾಕ್ಸೈಟ್ ಹೊಂದಿರುವ ಮಣ್ಣನ್ನು ಅಕ್ರಮವಾಗಿ ಸಾಗಿಸಿರುವ ಶಂಕೆಯಿದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೂ ದಾಖಲೆ ಸಹಿತ ದೂರು ನೀಡಿದ್ದು ತನಿಖೆಗೆ ಆಗ್ರಹಿಸಿದ್ದೇನೆ. ಜಿಲ್ಲಾಧಿಕಾರಿಗಳ ತನಿಖೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ ರಮಾನಾಥ ರೈ, ಶಾಸಕ ರಾಜೇಶ್ ತನ್ನ ಪಾತ್ರ ಇಲ್ಲ ಎಂದಿದ್ದರು. ಆರೋಪ ಸಾಬೀತುಪಡಿಸುವ ದಾಖಲೆ ನೀಡಿದ್ದೇನೆ. ಶಾಸಕರು ರೈತನ ರೀತಿ ಪೋಸು ಕೊಡುತ್ತಾರೆ. ಇವರು ರೈತರೋ, ವ್ಯಾಪಾರಿಯೋ ಎಂದು ನಾನು ಕೇಳುತ್ತಿದ್ದೇನೆ. ಈ ದಂಧೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರು ಕೂಡ ಇದ್ದಾರೆ. ಇವರಿಗೆ ಚುನಾವಣೆಗೆ ಮಾತ್ರ ಧರ್ಮ, ಹಿಂದುತ್ವ. ತಮ್ಮ ವ್ಯಾಪಾರ, ದಂಧೆಯ ವ್ಯವಹಾರಕ್ಕೆ ಭಿನ್ನಮತೀಯರನ್ನು ಕೂಡ ಸೇರಿಸಿಕೊಳ್ಳುತ್ತಾರೆ ಎಂದು ಕುಟುಕಿದ್ದಾರೆ.
ಹೆಡ್ ಲೈನ್ ಕರ್ನಾಟಕ ಬಿಗ್ ಇಂಪ್ಯಾಕ್ಟ್ !
ಅಂದಹಾಗೆ, ಮುಡಿಪು ಆಸುಪಾಸಿನಲ್ಲಿ ಅಲ್ಯುಮಿನಿಯಂ ಮಿಶ್ರಿತ ಬಾಕ್ಸೈಟ್ ದಂಧೆ ಆಗುತ್ತಿರುವ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕರ ಗಮನ ಸೆಳೆದಿದ್ದು ಹೆಡ್ ಲೈನ್ ಕರ್ನಾಟಕ ನ್ಯೂಸ್ ಪೋರ್ಟಲ್. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬೇರೆ ಕೆಲವು ಮಾಧ್ಯಮಗಳಲ್ಲಿ ಕೂಡ ಬಂದಿತ್ತು. ಇದೀಗ ಹೆಡ್ ಲೈನ್ ನ್ಯೂಸ್ ಆಧರಿಸಿ, ಮಾಜಿ ಸಚಿವ ರಮಾನಾಥ ರೈ ಸ್ವತಃ ಮುತುವರ್ಜಿ ವಹಿಸ್ಕೊಂಡು ದಾಖಲೆ ಬಿಚ್ಚಿಟ್ಟಿದ್ದಾರೆ. ಶಾಸಕರ ಪತ್ನಿಯ ಹೆಸರಲ್ಲೇ ಅಕ್ರಮ ನಡೆದಿರುವುದನ್ನು ಸಾಬೀತು ಮಾಡಿದ್ದಾರೆ. ಇದು ಮಾತ್ರವಲ್ಲ, ಮುಡಿಪುವಿನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಭಾವಿಗಳು ಅಕ್ರಮವಾಗಿ ಈ ವಹಿವಾಟು ನಡೆಸುತ್ತಿರುವ ಬಗ್ಗೆ ಸ್ಥಳೀಯರ ಅನುಮಾನದ ಮೇರೆಗೆ ಸುದ್ದಿ ಮಾಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಸತ್ಯವನ್ನು ಹೊರಗೆ ತರಬೇಕಾಗಿದೆ.
Former minister Ramanath Rai accused BJP MLA Rajesh Naik of being involved in illegal red stone quarry business in Mudipu, Mangalore and said, The Bantwal MLA had challenged me to prove the same with documents. I did not say the name of the MLA. Now he has accepted that he is involved in this by conducting press conference. Now I am proving it with records.”
21-08-25 12:58 pm
Bangalore Correspondent
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 11:57 am
Mangalore Correspondent
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm