ಬ್ರೇಕಿಂಗ್ ನ್ಯೂಸ್
20-06-23 03:10 pm Mangalore Correspondent ಕರಾವಳಿ
ಮಂಗಳೂರು, ಜೂನ್ 20: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಘೋಷಣೆಯಾದ ಹತ್ತು ಕೆಜಿ 'ಅನ್ನಭಾಗ್ಯ' ಯೋಜನೆಗೆ ಕೇಂದ್ರ ಸರಕಾರದ ಅಸಹಕಾರ ಮತ್ತು ಅಕ್ಕಿ ಕೊಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಕ್ಲಾಕ್ ಟವರ್ ಸರ್ಕಲ್‌ನಲ್ಲಿ ಊಟದ ತಟ್ಟೆಗಳನ್ನು ಹಿಡಿದು ತಟ್ಟೆ ಬಡಿದು ಕಾರ್ಯಕರ್ತರು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯಿಂದ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿ ಅಂತ ಕಾಂಗ್ರೆಸಿಗರು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ.


ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇದೇ ವೇಳೆ, ಬಿಜೆಪಿ ನಾಯಕರ ವಿರುದ್ಧ ರಮಾನಾಥ ರೈ ವಾಗ್ದಾಳಿ ನಡೆಸಿದರು. ಈ ಹಿಂದೆ ಮಕ್ಕಳಿಗೆ ಕೊಡುವ ಅನ್ನ ನಿಲ್ಲಿಸಿದ್ದೇನೆಂದು ನನ್ನ ವಿರುದ್ಧ ಬಿಜೆಪಿಯವರು ಅನ್ನದ ತಟ್ಟೆ ಬಡಿದು ಪ್ರತಿಭಟಿಸಿದ್ದರು. ಅಂದು ನಾವು ಮಕ್ಕಳಿಗೆ ಕೊಡುವ ಅನ್ನವನ್ನ ನಿಲ್ಲಿಸಿರಲಿಲ್ಲ. ದೇವಸ್ಥಾನದ ಹಣ ದುರುಪಯೋಗ ಆಗಬಾರದೆಂದು ಪ್ರತಿ ತಿಂಗಳು ಕಲ್ಲಡ್ಕ ಶಾಲೆಗೆ ಬರುತ್ತಿದ್ದ ಹಣವನ್ನು ತಡೆದಿದ್ದೆವು. ಇದು ಬಿಟ್ಟು ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಒಂದು ಹಿಡಿ ಅಕ್ಕಿಯನ್ನೂ ನಿಲ್ಲಿಸಿರಲಿಲ್ಲ.




ಈಗ ನಮ್ಮ ಸರಕಾರದ ಅನ್ನ ಭಾಗ್ಯ ಯೋಜನೆಗೆ ಕೇಂದ್ರದ ಬಿಜೆಪಿ ಸರ್ಕಾರದ ಮೂಲಕ ವಿರೋಧ ಮಾಡಲಾಗಿದೆ. ಕೇಂದ್ರ ಸರಕಾರ ಈ ಯೋಜನೆಯನ್ನ ತಡೆದು ಬಡವರಿಗೆ ದ್ರೋಹ ಮಾಡುತ್ತಿದೆ. ನಮಗೆ ಇಡೀ ರಾಜ್ಯದಲ್ಲಿ ಬಡವರಿಗೆ ಉಚಿತ ಹತ್ತು ಕೇಜಿ ಅಕ್ಕಿ ನೀಡಲು 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಆದರೆ ನಮ್ಮ ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂದೇ ಬಿಜೆಪಿ ಈ ರೀತಿ ಮಾಡಿದೆ. ಹಿಂದೆ ಯಡಿಯೂರಪ್ಪ ಸರಕಾರ ಇದ್ದಾಗ ಶಾಲೆ ಮಕ್ಕಳಿಗೆ ಸೈಕಲ್ ನೀಡಿದ್ದರು. ಆದರೆ ಒಂದು ವರ್ಷದಲ್ಲಿ ಆ ಸೈಕಲ್ ಒಡೆದು ಮೂಲೆ ಸೇರಿತ್ತು. ಬಿಜೆಪಿ ಸರಕಾರ ಮಕ್ಕಳಿಗೆ ನೀಡಿದ್ದು ಪೊಟ್ಟು ಸೈಕಲ್ ಆಗಿತ್ತು.
ಯಾವುದೇ ಬಿಜೆಪಿ ನಾಯಕರು ತಾವು ನೀಡಿದ್ದ ಭರವಸೆಯನ್ನು ಈವರೆಗೆ ಈಡೇರಿಸಲು ಸಾಧ್ಯವಾಗಿಲ್ಲ. ಹೋರ ದೇಶದಲ್ಲಿರುವ ಕಪ್ಪು ಹಣವನ್ನು ಈವರೆಗೂ ತರಲು ಇವರಿಗೆ ಸಾಧ್ಯವಾಗಿಲ್ಲ. ಸುಳ್ಳು ಹೇಳುವ ಬಿಜೆಪಿ ನಾಯಕರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ರಮಾನಾಥ ರೈ ತೀವ್ರವಾಗಿ ಟೀಕಿಸಿದರು.
Congress leaders staged a protest here at Mini Vidhana Soudha on Tuesday June 20 against the BJP-led central government for ‘denying’ rice for the state's 'Anna Bhagya' scheme which offers 10 kg rice to each member of families living below the poverty line.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm